More

    ಅಬ್ಬರಿಸುತ್ತಿರುವ ವರುಣ: ಕುಸಿದ ಕಾಂಪೌಂಡ್​ – ಮಗು ಸೇರಿ 9 ಮಂದಿ ಸಾವು

    ಹೈದರಾಬಾದ್: ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಮಳೆಯ ಆರ್ಭಟ ಕೆಲ ದಿನಗಳಿಂದ ಭೀಕರವಾಗಿದೆ. ಹೈದರಾಬಾದ್​ನಲ್ಲಿ ನಿನ್ನೆ ಮಧ್ಯರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಕಾಂಪೌಂಡ್ ಗೋಡೆಯೊಂದು ಕುಸಿದು ಹತ್ತು ಮನೆಗಳ ಮೇಲೆ ಬಿದ್ದಿದೆ.

    ಚಂದ್ರಯಾನಗುಟ್ಟ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಈ ಅನಾಹುತದಲ್ಲಿ ಎರಡು ತಿಂಗಳ ಮಗು ಸೇರಿದಂತೆ ಒಂಬತ್ತು ಮಂದಿ ಮೃತಪಟ್ಟಿದ್ದಾರೆ. ಇವರಲ್ಲಿ ಒಂದೇ ಕುಟುಂಬದ ಐವರು ಸೇರಿದ್ದಾರೆ. ನಾಲ್ಕು ಜನರಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

    ಶವಗಳು ಅವಶೇಷಗಳಲ್ಲಿಯೇ ಸಿಲುಕಿಕೊಂಡಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಸಹಾಯಕ ಪೊಲೀಸ್ ಆಯುಕ್ತ ಎಂ ಎ ಮಜೀದ್ ತಿಳಿಸಿದ್ದಾರೆ.
    ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಮಳೆಗೆ ಕಳೆದ ಎರಡು ದಿನಗಳಲ್ಲಿ 12 ಮಂದಿ ಜೀವ ಕಳೆದುಕೊಂಡಿದ್ದಾರೆ. ರಾಜ್ಯದ ಹಲವಾರು ಭಾಗಗಳಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಗಳಲ್ಲಿ ಪ್ರವಾಹ ಉಂಟಾಗಿದೆ ಮತ್ತು ಕೆಲವು ತಗ್ಗು ಪ್ರದೇಶಗಳು ಮುಳುಗಿವೆ.

    ಇದನ್ನೂ ಓದಿ: 17ರಂದು ಬಿಕಾಂ ಅಂತಿಮ ಸೆಮಿಸ್ಟರ್ ಪರೀಕ್ಷೆ : ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ರದ್ದಾಗಿದ್ದ ಪರೀಕ್ಷೆ

    ಹಲವೆಡೆ ಧಾರಾಕಾರ ಮಳೆಯಾಗುತ್ತಿದ್ದು, ಜನರು ಮುನ್ನೆಚ್ಚರಿಕೆ ವಹಿಸುವಂತೆ ಹೈದರಾಬಾದ್ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಮಳೆನೀರು ಹಸ್ಸನ್ ನಗರ್, ತಲ್ಲಬ್ ಕಟ್ಟ, ಒಸ್ಮನ್ ನಗರ್, ತೀಗಲ್ಕುಂಟ ಪ್ರದೇಶಗಳಲ್ಲಿ ಹಲವು ಮನೆಗಳಿಗೆ ನುಗ್ಗಿದೆ. ಮೀರತ್ ಪೆಟ್, ಬಲಪುರ್, ಅಸಿಫ್ ನಗರ ಮತ್ತು ಟೊಲಿಚೊವ್ಕಿ ಪ್ರದೇಶಗಳಲ್ಲಿ ತಗ್ಗು ಪ್ರದೇಶಗಳು ಜಲಾವೃತವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಮನೆಗಳೊಳಗೆ ನೀರು ನುಗ್ಗಿರುವುದರಿಂದ ಕೊಚ್ಚೆ ನೀರನ್ನು ಹೊರಹಾಕಲು ಹಿಮಯತ್ಸಾಗರ ಜಲಾಶಯದ ಎರಡು ಗೇಟ್​ಗಳನ್ನು ತೆರೆಯಲಾಗಿದ್ದು ಅಲ್ಲಿಂದ ಮುಸಿ ನದಿಗೆ 1,300 ಕ್ಯೂಸೆಕ್ಸ್ ನೀರು ಹೊರಹಾಕಲಾಗುತ್ತಿದೆ.

    ನೀರಿನ ಒಳಹರಿವು ಹೆಚ್ಚಾಗುತ್ತಿದ್ದಂತೆ ಇಂದು ಜಲಾಶಯದ ಮತ್ತಷ್ಟು ಗೇಟ್ ಗಳನ್ನು ಬಿಡುವ ಸಾಧ್ಯತೆಯಿದೆ. 2010ರಲ್ಲಿ ಇಲ್ಲಿ ಪ್ರವಾಹ ಬಂದು ಇದೇ ರೀತಿ ಗೇಟ್ ಗಳನ್ನು ಬಿಡಲಾಗಿತ್ತು. ಹಿಮಯತ್ಸಾಗರದಲ್ಲಿ ಒಟ್ಟು 17 ಗೇಟ್​ಗಳಿವೆ.

    14 ತಿಂಗಳ ಗೃಹಬಂಧನದಿಂದ ಮುಫ್ತಿಗೆ ಸಿಕ್ಕಿತು ಮುಕ್ತಿ- ಕೇಂದ್ರದ ವಿರುದ್ಧ ಗುಡುಗು

    ಜಾಲತಾಣದಲ್ಲಿ ಆಕ್ಟಿವ್ ಇರೋ ಬಾಲಕಿಯರೇ ಇವನ ಟಾರ್ಗೆಟ್​- ಪಾಲಕರೇ ಎಚ್ಚರ…!

    ಮಕ್ಕಳನ್ನು ಸೊಂಟಕ್ಕೆ ಕಟ್ಟಿ ಕಾಲುವೆಗೆ ಹಾರಿ ದಾವಣಗೆರೆ ಶಿಕ್ಷಕಿ ಆತ್ಮಹತ್ಯೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts