ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಯುವತಿ ಆಶ್ರಿತಾ ಒಲೆಟೆಯವರು ಭಾರತದ ಮೊದಲ ಮಹಿಳಾ ಫ್ಲೈಟ್ ಟೆಸ್ಟ್ ಇಂಜಿನಿಯರ್ ಆಗಿ ಆಯ್ಕೆಯಾಗಿದ್ದಾರೆ.
ಭಾರತದ ಏರ್‌ಫೋರ್ಸ್ ಟೆಸ್ಟ್ ಪೈಲಟ್ ಸ್ಕೂಲ್‌ನಿಂದ ಪದವಿ ಪಡೆದಿರುವ ಆಶ್ರಿತಾ, ವಾಯುಸೇನೆಯ ಮೊದಲ ಮಹಿಳಾ ಫ್ಲೈಟ್ ಟೆಸ್ಟ್ ಇಂಜಿನಿಯರ್ ಎನಿಸಿದ್ದಾರೆ. ಕೊಳ್ಳೇಗಾಲದ ಒ.ವಿ. ವೆಂಕಟೇಶ್ ಬಾಬು ಹಾಗೂ ಒ.ವಿ. ವಾಣಿ ದಂಪತಿಯ ಪುತ್ರಿಯಾದ ಈಕೆ 2014ರಲ್ಲಿ ವಾಯುಪಡೆಯ ಟೆಕ್ನಿಕಲ್ ವಿಭಾಗಕ್ಕೆ ಆಯ್ಕೆಯಾಗಿದ್ದರು.
ಇನ್ನು ಏರ್‌ಫೋರ್ಸ್ ಟೆಸ್ಟ್ ಪೈಲಟ್ ಸ್ಕೂಲ್ ಕುರಿತು ಹೇಳುವುದಾದರೆ ಇಡೀ ವಿಶ್ವದಲ್ಲಿ ಏಳು ವಿಶ್ವವಿದ್ಯಾಲಯಗಳಲ್ಲಿ ಮಾತ್ರ ಈ ಸ್ಕೂಲ್ ಇದ್ದು, ಇದರಲ್ಲಿ ಭಾರತವೂ ಒಂದಾಗಿದೆ. 1976ರಲ್ಲಿ ಸ್ಥಾಪನೆಯಾದಾಗಿನಿಂದ ಈವರೆಗೆ 275 ಮಂದಿ ಮಾತ್ರ ಪದಿ ಪಡೆದಿರುತ್ತಾರೆ. ಇದರಲ್ಲಿ ಒಂದಾಗಿರುವ ಹೆಮ್ಮೆ ಆಶ್ರಿತಾ ಅವರದ್ದು, ಈ ಮೂಲಕ ವಾಯುದಳದ ಮೊದಲ ಮಹಿಳಾ ಅಧಿಕಾರಿಯಾಗಿ ಆಯ್ಕೆಯಾಗಿದ್ದು ಕ್ವಾಡ್ರಲ್ ಲೀಡರ್ ಆಗಿದ್ದಾರೆ.