ನ್ಯೂಸ್

VIDEO: ಎಕ್ಸ್​ಟ್ರಾ ಬೆರಳು ಬೇಕೆ? ಬಂದಿದೆ ನೋಡಿ ಹೊಸ ತಂತ್ರಜ್ಞಾನ

suchetana
ಕೆಲಸ ಹೆಚ್ಚು ಇದ್ದಾಗ, ಅದರಲ್ಲಿಯೂ ಮುಖ್ಯವಾಗಿ ಉದ್ಯೋಗಸ್ಥ ಮಹಿಳೆಯರಿಗೆ ಎಷ್ಟೋ ಬಾರಿ ನಮಗೆ ಇನ್ನೊಂದೆರಡು ಕೈ ಹೆಚ್ಚಿಗೆ ಇರಬಾರದಿತ್ತೇ ಎನ್ನಿಸುವುದುಂಟು. ಆದರೆ ಅದಂತೂ ಸಾಧ್ಯವಿಲ್ಲದ ಮಾತು. ಆದರೆ ಸದ್ಯಕ್ಕೆ ಕೈ ಹೆಚ್ಚು ಮಾಡುವ ತಂತ್ರಜ್ಞಾನ ಬರದಿದ್ದರೂ ಬೆರಳುಗಳನ್ನು ಹೆಚ್ಚು ಮಾಡುವ ತಂತ್ರಜ್ಞಾನ ಕಂಡುಹಿಡಿಯಲಾಗಿದೆ.
ಅಪರೂಪದ ಪ್ರಕರಣಗಳಲ್ಲಿ ಕೆಲವರಿಗೆ ಆರು ಬೆರಳುಗಳು ಹುಟ್ಟುತ್ತಲೇ ಇರುತ್ತವೆ. ಇಂಥವರನ್ನು ಸಾಮಾನ್ಯವಾಗಿ ಅದೃಷ್ಟವಂತರು ಎಂದು ಕರೆಯುವುದುಂಟು. ಆದರೆ ಈ ರೀತಿ ಆರು ಬೆರಳು ಇರುವ ಜನರ ಪೈಕಿ ಹಲವರಲ್ಲಿ ಯಾವುದೋ ಒಂದು ಬೆರಳು ವೀಕ್​ ಆಗಿದ್ದು, ಆ ಬೆರಳು ಕಾರ್ಯ ನಿರ್ವಹಿಸುವುದಿಲ್ಲ.

ಆದರೆ  ಈಗ ಶುರುವಾಗಿರುವ ಹೊಸ ತಂತ್ರಜ್ಞಾನದಲ್ಲಿ ಆರನೇ ಬೆರಳನ್ನು ನಾವೇ ಅಳವಡಿಸಿಕೊಳ್ಳಬಹುದಾಗಿದೆ. ಇದರ ವಿಶೇಷತೆ ಎಂದರೆ ಈ ಎಕ್ಸ್​ಟ್ರಾ ಬೆರಳಿನಿಂದಲೂ ನಾವು ಅನೇಕ ಕಾರ್ಯಗಳನ್ನು ನಿರ್ವಹಿಸಬಹುದಾಗಿದೆ. ಈ ಬೆರಳಿನ ಸಹಾಯದಿಂದ ವಸ್ತುಗಳನ್ನು ಹಿಡಿಯಬಹುದು, ಅತ್ತಿತ್ತ ಇಡಬಹುದು, ಮಾತ್ರವಲ್ಲದೇ ಉಳಿದ ಬೆರಳುಗಳಂತೆ ಮಡಚಲೂಬಹುದು.

ಒಟ್ಟಿನಲ್ಲಿ ಹಲವಾರು ಕಾರ್ಯಗಳನ್ನು ಈ ಬೆರಳು ನಿರ್ವಹಿಸಬಲ್ಲುದು. ಇದಾಗಲೇ ಈ ತಂತ್ರಜ್ಞಾನವನ್ನು ಅನೇಕ ಮಂದಿ ಬಳಸಿಕೊಂಡು ಖುಷಿಪಟ್ಟಿದ್ದಾರೆ. ಇದು ಸಕ್ಸಸ್​ ಆದರೆ ಎಕ್ಸ್​ಟ್ರಾ ಕೈಗಳೂ ಬರುವ ದಿನಗಳು ದೂರವಿಲ್ಲ!

https://www.vijayavani.net/s-corona-hospital-gave-wrong-body/

https://www.vijayavani.net/s-gandhijis-greatgrand-son-death-on-corona/