More

    ಕರೊನಾಕ್ಕೆ ಬಲಿಯಾದ ಗಾಂಧೀಜಿ ಕುಟುಂಬದ ಕುಡಿ- ಗಣ್ಯರ ಕಂಬನಿ

    ಜೋಹಾನ್ಸ್​ಬರ್ಗ್: ಗಾಂಧೀಜಿಯವರ ಮರಿಮೊಮ್ಮಗ ಸತೀಶ್ ಧುಪೆಲಿಯಾ ಅವರು ಕರೊನಾ ಸೋಂಕಿಗೆ ಬಲಿಯಾಗಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ನೆಲೆಸಿದ್ದ ಸತೀಶ್​ ಅವರು ನ್ಯುಮೋನಿಯಾದಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾಗ ಕರೊನಾ ದೃಢಪಟ್ಟಿತ್ತು.

    ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿರುವುದಾಗಿ ಸತೀಶ್​ ಅವರ ಸಹೋದರಿ ಎಂ.ಎಸ್ ​ಉಮಾ ತಿಳಿಸಿದ್ದಾರೆ. ಇನ್ನು ಮೂರೇ ದಿನಗಳಲ್ಲಿ ತಮ್ಮ 66ನೇ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಿದ್ದ ನನ್ನ ಪ್ರೀತಿಯ ಅಣ್ಣ ನಮ್ಮನ್ನು ತಮ್ಮನ್ನು ಅಗಲಿ ಹೋಗಿದ್ದಾನೆ ಎಂದು ಉಮಾ ಹೇಳಿದ್ದಾರೆ. ನಿನ್ನೆ (ಭಾನುವಾರ) ತೀವ್ರ ಹೃದಯಾಘಾತವಾದ ನಂತರ ಅಣ್ಣ ಮೃತಪಟ್ಟಿರುವುದಾಗಿ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

    ಇದನ್ನೂ ಓದಿ: ಅಪ್ಪಳಿಸಲಿದೆ ‘ನಿವಾರ್​’ ಚಂಡಮಾರುತ- ರೆಡ್​ ಅಲರ್ಟ್​ ಘೋಷಣೆ

    ವಿಡಿಯೊಗ್ರಫಿ ಹಾಗೂ ಫೋಟೋಗ್ರಫಿಯಲ್ಲಿ ತಮ್ಮ ಬಹುಪಾಲು ಜೀವನವನ್ನು ತೊಡಗಿಸಿಕೊಂಡಿದ್ದರು ಸತೀಶ್​. ಡರ್ಬನ್ ಬಳಿಯ ಫೀನಿಕ್ಸ್ ಸೆಟಲ್‌ಮೆಂಟ್‌ನಲ್ಲಿ ಸ್ಥಾಪಿತವಾದ ಗಾಂಧಿ ಅಭಿವೃದ್ಧಿ ಟ್ರಸ್ಟ್‌ಗೆ ಸಹಾಯ ಮಾಡುವಲ್ಲಿ ಬಹಳ ಸಕ್ರಿಯರಾಗಿದ್ದರು. ಇಷ್ಟು ಮಾತ್ರವಲ್ಲದೇ ಅಗತ್ಯವಿರುವವರಿಗೆ ಸಹಾಯ ಮಾಡುವುದರಲ್ಲಿ ಹೆಸರುವಾಸಿಯಾಗಿದ್ದರು ಮತ್ತು ಹಲವಾರು ಸಾಮಾಜಿಕ ಕಲ್ಯಾಣ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು ಎನ್ನಲಾಗಿದೆ. ಧುಪೆಲಿಯಾ ಅವರು 1860ರ ಹೆರಿಟೇಜ್ ಫೌಂಡೇಶನ್‌ ಮಂಡಳಿಯ ಸದಸ್ಯರೂ ಆಗಿದ್ದರು.

    ಸತೀಶ್ ಅವರ ಇನ್ನೋರ್ವ ಸೋದರಿ ಕೀರ್ತಿ ಮೆನನ್ ಜೊಹಾನ್ಸಬರ್ಗ್​ನಲ್ಲಿ ವಾಸವಾಗಿದ್ದಾರೆ. ಗಾಂಧೀಜಿ ಅವರ ಸ್ಮರಾಣರ್ಥವಾಗಿ ಕೈಗೊಂಡ ಪ್ರೊಜೆಕ್ಟ್ ಗಳಲ್ಲಿ ಇವರು ತೊಡಗಿಕೊಂಡಿದ್ದಾರೆ.

    ಸತೀಶ್ ಓರ್ವ ಮಹಾನ್ ಮಾನವತಾವಾದಿ ಮತ್ತು ಕಾರ್ಯಕರ್ತರಾಗಿದ್ದರು. ಅವರ ಸಾವಿನಿಂದ ನಾನು ಆಘಾತಕ್ಕೊಳಗಾಗಿದ್ದೇನೆ. ಕೆಳಸ್ತರದ ಮಹಿಳೆಯರಿಗಾಗಿ ಅವರು ದುಡಿಯುತ್ತಿದ್ದರು ಎಂದು ರಾಜಕೀಯ ವಿಶ್ಲೇಷಕ ಲುಬ್ನಾ ನಡ್ವಿ ಹೇಳಿದ್ದಾರೆ. ಇವರ ಸಾವಿಗೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.

    ‘ಐದು ವರ್ಷಗಳ ಹಿಂದೆಯೇ ಅಂಡಾಣು ಫ್ರೀಜ್​ ಮಾಡಿದ್ದೇನೆ- ಬೇಕೆಂದಾಗ ಮಗು ಪಡೆಯುವೆ’

    ಯೋಧನ ಪತ್ನಿಯ ಜೀವ ಕಸಿದ ವಿಡಿಯೋಕಾಲ್​- ಬೈಕ್​ನಲ್ಲಿ ಹೋಗುವಾಗ ಅವಘಡ

    ಸಾವು ಕಣ್ಣೆದುರೇ ಇತ್ತು… ಅಷ್ಟರಲ್ಲಿಯೇ ನಡೆಯಿತು ಪವಾಡ, 9 ಮಂದಿ ಜೀವ ಉಳಿಯಿತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts