ನ್ಯೂಸ್

ಭೀಕರ ರಸ್ತೆ ಅಪಘಾತ: ದಾರುಣ ಸಾವು ಕಂಡ ‘ಮಿಸ್‌ ಕೇರಳ’, ‘ಮಿಸ್‌ ರನ್ನರ್ಸ್‌ ಅಪ್‌’

ಕೊಚ್ಚಿ: ಭೀಕರ ಅಪಘಾತದಲ್ಲಿ ಮಿಸ್‌ ಕೇರಳ ಹಾಗೂ ಮಿನ್‌ ರನ್ನರ್‌ ಅಪ್‌ ಆಗಿದ್ದ ಇಬ್ಬರು ಬ್ಯೂಟಿ ಕ್ವೀನ್‌ಗಳು ದಾರುಣವಾಗಿ ಮೃತಪಟ್ಟಿರುವ ಘಟನೆ ನಡೆದಿದೆ.

2019ರಲ್ಲಿ ಮಿಸ್ ಕೇರಳ ಆಗಿದ್ದ ಅನ್ಸಿ ಕಬೀರ್ (24) ಮತ್ತು ಅದೇ ಸ್ಫರ್ದೆಯಲ್ಲಿ ರನ್ನರ್ ಅಪ್ ಆಗಿದ್ದ ಅಂಜನಾ ಶಾಜನ್ (25) ಈ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇವರಿಬ್ಬರೂ ತ್ರಿಶೂರ್​ನಿಂದ ಕೊಚ್ಚಿಗೆ ಪ್ರಯಾಣಿಸುತ್ತಿದ್ದರು. ನಿನ್ನೆ ತಡರಾತ್ರಿ ಕೊಚ್ಚಿಯ ವೈಟಿಲ ಪ್ರದೇಶದಲ್ಲಿ ಇವರ ಕಾರೂ ಅಪಘಾತಕ್ಕೀಡಾಗಿದೆ. ಬೈಕ್ ಸವಾರನಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಈ ಅವಘಡ ಸಂಭವಿಸಿದೆ.

ಕಾರಿನಲ್ಲಿ ಒಟ್ಟು ನಾಲ್ಕು ಮಂದಿ ಇದ್ದರು. ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದರೆ, ಅನ್ಸಿ ಹಾಗೂ ಅಂಜನಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಗಂಭೀರಗೊಂಡ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕಾರು ಚಾಲಕ ಮಾತ್ರ ಸೀಟ್ ಬೆಲ್ಟ್ ಹಾಕಿಕೊಂಡಿದ್ದ ಎಂದು ಪೊಲೀಸರು ಹೇಳಿದ್ದು, ಪ್ರಕರಣದ ಸಂಪೂರ್ಣ ವಿವರ ಇನ್ನಷ್ಟೇ ಹೊರಬರಬೇಕಿದೆ.