ನವದೆಹಲಿ: ಅಕ್ಟೋಬರ್ ಶುರುವಾಯಿತೆಂದರೆ ಹಬ್ಬಗಳ ಮಾಸ ಶುರುವಾದಂತೆ. ಆದ್ದರಿಂದ ಸರ್ಕಾರಿ ರಜೆಗಳು ಸಾಕಷ್ಟು ಪ್ರಮಾಣದಲ್ಲಿ ಇದ್ದರೆ, ಬ್ಯಾಂಕ್ಗಳಿಗೂ ಹಲವಾರು ರಜೆಗಳು ಇರುತ್ತವೆ.
ಬ್ಯಾಂಕ್ ವಹಿವಾಟು ಮಾಡುವವರೆಲ್ಲರೂ ಈ ರಜೆಯ ಕುರಿತು ಮೊದಲೇ ತಿಳಿದಿಟ್ಟುಕೊಂಡರೆ ಒಳ್ಳೆಯದು. ಈ ವೇಳೆಯಲ್ಲಿ ಅಯಾ ರಾಜ್ಯಗಳಿಗೆ ಸಂಬಂಧಿಸಿದಂತೆ ಬ್ಯಾಂಕ್ ಪ್ರಾದೇಶಿಕ ರಜಾದಿನಗಳನ್ನು ಆಯಾ ರಾಜ್ಯ ಸರ್ಕಾರಗಳು ನಿರ್ಧರಿಸುತ್ತವೆ.
ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಮಾರ್ಗದರ್ಶಿ ಸೂತ್ರದ ಪ್ರಕಾರ, ಬ್ಯಾಂಕುಗಳು ಸಾರ್ವಜನಿಕ ರಜಾದಿನಗಳಲ್ಲಿ ಮುಚ್ಚಲ್ಪಟ್ಟಿರುತ್ತವೆ, ಆದರೆ ಕೆಲವು ರಜಾದಿನಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ.
ಈ ದಿನಗಳಲ್ಲಿ ಆನ್ಲೈನ್ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ಗೆ ಮಾತ್ರ ಅವಕಾಶ ಇರಲಿದೆ. ಎಟಿಎಂಗಳಲ್ಲಿ ಹಣ ಖಾಲಿಯಾಗುವ ಸಾಧ್ಯತೆಯೂ ಇರುವುದರಿಂದ ಸ್ವಲ್ಪ ಹೆಚ್ಚು ಹಣವನ್ನು ಡ್ರಾ ಮಾಡಿಟ್ಟುಕೊಳ್ಳುವುದು ಒಳಿತು.
ಕರ್ನಾಟಕದಲ್ಲಿ ಅಕ್ಟೋಬರ್ ತಿಂಗಳಲ್ಲಿ ಒಟ್ಟಾರೆ ಆಗಿ ಇರುವ ರಜೆಗಳು 10. ಅವುಗಳ ಮಾಹಿತಿ ಇಲ್ಲಿದೆ
ಅ.2 (ಶುಕ್ರವಾರ) ಗಾಂಧಿ ಜಯಂತಿ
ಅ.4 (ರವಿವಾರ)
ಅ.10 (ಎರಡನೇ ಶನಿವಾರ)
ಅ.11 (ರವಿವಾರ)
ಅ.18 (ರವಿವಾರ)
ಅ.24 (ನಾಲ್ಕನೇ ಶನಿವಾರ)
ಅ.25 (ಭಾನುವಾರ)
ಅ.26 (ಸೋಮವಾರ) ವಿಜಯದಶಮಿ
ಅ. 30 (ಶುಕ್ರವಾರ) ಈದ್ ಮಿಲಾದ್
ಅ. 31 (ಶನಿವಾರ) ಸರ್ದಾರ್ ವಲ್ಲಭಬಾಯಿ ಪಟೇಲ್ ಜನ್ಮದಿನ/ ವಾಲ್ಮೀಕಿ ಜಯಂತಿ