More

    ಉಗುಳಬೇಡ ಎಂದದ್ದೇ ತಪ್ಪಾಯ್ತು… ಮನೆಯಲ್ಲಿದ್ದ ಪಾರಿವಾಳಗಳನ್ನೆಲ್ಲಾ ಕೊಂದುಹಾಕಿದ ಯುವಕ!

    ಭಾಗ್​ಪಾಟ (ಉತ್ತರ ಪ್ರದೇಶ): ಕರೊನಾ ವೈರಸ್​ನ ಈ ದಿನಗಳಲ್ಲಿ ಉಗುಳಬೇಡಿ ಎಂದು ಯುವಕನೊಬ್ಬನಿಗೆ ಬುದ್ಧಿಮಾತು ಹೇಳಿದ್ದಕ್ಕೆ, ಆ ಯುವಕ ಇವರ ಮನೆಯಲ್ಲಿದ್ದ 11 ಪಾರಿವಾಳಗಳನ್ನು ಕೊಲೆ ಮಾಡಿರುವ ವಿಲಕ್ಷಣ ಘಟನೆ ಉತ್ತರ ಪ್ರದೇಶದ ಭಾಗ್​ಪಾಟದಲ್ಲಿ ನಡೆದಿದೆ.

    ರಾಹುಲ್ ಸಿಂಗ್ ಎಂಬುವವರಿಗೆ ಸೇರಿರುವ ಪಾರಿವಾಳಗಳನ್ನು ಕೊಂದಿರುವ ಆರೋಪವನ್ನು ಧರಂಪಾಲ್ ಸಿಂಗ್ ಎಂಬಾತ ಎದುರಿಸುತ್ತಿದ್ದಾನೆ.

    ಧರಂಪಾಲ್​, ರಾಹುಲ್​ ಅವರ ಮನೆಯ ಪ್ರವೇಶದ್ವಾರದಲ್ಲಿ ಉಗುಳಿದ್ದ. ಇದರಿಂದ ಸಿಟ್ಟುಗೊಂಡ ಧರಂಪಾಲ್​, ಹೀಗೆ ಉಗುಳುವುದು ಸರಿಯಲ್ಲ, ಅದರಲ್ಲಿಯೂ ಕರೊನಾ ವೈರಸ್​ನ ಈ ದಿನಗಳಲ್ಲಿ ಇಂಥ ಕೃತ್ಯ ನಿಷೇಧ ಎಂದಿದ್ದಾರೆ.

    ಇದನ್ನೂ ಓದಿ: 20 ರೂಪಾಯಿಗಾಗಿ ನಡೆಯಿತು ಕೊಲೆ- ಮಗನೆದುರೇ ತಂದೆಯ ಹತ್ಯೆ!

    ಇದರಿಂದ ಸಿಟ್ಟುಗೊಂಡ ಧರಂಪಾಲ್​ ಮನೆಯ ಛಾವಣಿ ಏರಿ, ಅಲ್ಲಿ ಪಂಜರದಲ್ಲಿದ್ದ 11 ಪಾರಿವಾಳಗಳನ್ನು ಕಲ್ಲಿನಿಂದ ಹೊಡೆದು ಸಾಯಿಸಿದ್ದಾನೆ! ನಂತರ ಸತ್ತ ಪಾರಿವಾಳಗಳ ವಿಡಿಯೋ ಮಾಡಿ ಅದನ್ನು ರಾಹುಲ್​ ಅವರಿಗೆ ಕಳುಹಿಸಿದ್ದಾನೆ.

    ಇದೀಗ ಪ್ರಕರಣ ಪೊಲೀಸ್​ ಠಾಣೆ ಮೆಟ್ಟಿಲೇರಿದೆ. ಧರಂಪಾಲ್​ ವಿರುದ್ಧ ಎಫ್​ಐಆರ್​ ದಾಖಲು ಮಾಡಿಕೊಳ್ಳಲಾಗಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಯುವಕ ಸದ್ಯ ಎಸ್ಕೇಪ್​ ಆಗಿದ್ದು, ಆತನನ್ನು ಬಂಧಿಸುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ.

    ಗ್ಯಾಂಗ್​ರೇಪ್​ ಮಾಡಿ ನಾಲಗೆ ಕಟ್: ಜೀವನ್ಮರಣಗಳ ನಡುವೆ ಹೋರಾಡುತ್ತಿದ್ದ ಯುವತಿ ಸಾವು!

    ಬಾಬ್ರಿ ಮಸೀದಿ ಧ್ವಂಸ ಪ್ರಕರಣ: ನಾಳೆ ಐತಿಹಾಸಿಕ ತೀರ್ಪು- ಎಲ್ಲೆಡೆ ಕಟ್ಟೆಚ್ಚರ

    ಕಾಲಿನಿಂದ ಒದ್ದ, ಹೊಟ್ಟೆಗೆ, ಮುಖಕ್ಕೆ ಗುದ್ದಿದ- ಕ್ಯಾಮೆರಾಮನ್​ನಿಂದ ಪತ್ರಕರ್ತನ ಮೇಲೆ ಹಲ್ಲೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts