More

    ಅ.1ರಿಂದ ಹೊಸಹೊಸ ನಿಯಮಗಳು ಜಾರಿ, ಇಲ್ಲಿದೆ ನೋಡಿ ಸಂಪೂರ್ಣ ವಿವರ…

    ನವದೆಹಲಿ: ಗ್ಯಾಸ್ ಸಿಲಿಂಡರ್‌, ಆರೋಗ್ಯ ವಿಮೆ, ಸಿಹಿತಿಂಡಿ, ವಿಮಾನ ಸಂಚಾರ ಸೇರಿದಂತೆ ಬರುವ ಒಂದನೇ ತಾರೀಖಿನಿಂದ ಮಹತ್ತರ ಬದಲಾವಣೆ ಆಗಲಿದೆ. ಅದರಲ್ಲಿಯೂ ಮುಖ್ಯವಾಗಿ 8 ಬದಲಾವಣೆಗಳು ಆಗಲಿದ್ದು, ನಿಮಗೆ ಈ ಪೈಕಿ ಎಷ್ಟು ಅನ್ವಯ ಆಗುತ್ತದೆ ಎಂಬುದನ್ನು ನೋಡಿಕೊಳ್ಳಿ.
    ಇದೇ ಸಮಯದಲ್ಲಿ ಅನ್​ಲಾಕ್​ 5.0 ಕೂಡ ಜಾರಿಯಾಗಲಿದ್ದು, ಒಟ್ಟಾರೆಯಾಗಿ ಮಹತ್ತರ ಬದಲಾವಣೆಗಳು ಆಗಲಿವೆ. ಅವುಗಳನ್ನು ಇಲ್ಲಿ ಒಂದೊಂದಾಗಿ ವಿವರಿಸಲಾಗಿದೆ.

    1) ಚಾಲನಾ ಪರವಾನಗಿ ಮತ್ತು ಇ-ಚಲನ್ ನಿಯಮಗಳಲ್ಲಿ ಬದಲಾವಣೆ:
    ಕೇಂದ್ರ ಸರ್ಕಾರ ಮೋಟಾರು ವಾಹನ ಕಾಯ್ದೆ 1989ಕ್ಕೆ ತಿದ್ದುಪಡಿ ಮಾಡಿದೆ. ಚಾಲನಾ ಪರವಾನಗಿ ಮತ್ತು ಇ-ಚಲನ್ ಸೇರಿದಂತೆ ವಾಹನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಮಾಹಿತಿ ತಂತ್ರಜ್ಞಾನ ಪೋರ್ಟಲ್ ಮೂಲಕ ನಿರ್ವಹಿಸಲಾಗುತ್ತದೆ. ಈ ಸಮಯದಲ್ಲಿ ದೇಶಾದ್ಯಂತ ಏಕರೂಪದ ವಾಹನ ಚಾಲನಾ ಪರವಾನಗಿ (ಡಿಎಲ್​​) ಮತ್ತು ನೋಂದಣಿ ಪ್ರಮಾಣ ಪತ್ರಗಳನ್ನು(ಆರ್​​​​​​ಸಿ) ವಿತರಣೆ ಮಾಡಲಾಗುತ್ತದೆ. ಹೀಗಾಗಿ ವಾಹನ ಸವಾರರು ಡ್ರೈವಿಂಗ್ ಲೈಸೆನ್ಸ್​​​​ ಹಾಗೂ ಆರ್​​ಸಿಗಳನ್ನು ಅಪ್​​ಡೇಟ್ ಮಾಡಿಕೊಳ್ಳಬೇಕಿದೆ.

    ಕೇಂದ್ರ ರಸ್ತೆ ಸಾರಿಗೆ ಸಚಿವಾಲಯವು ಏಕರೂಪದ ಡ್ರೈವಿಂಗ್​ ಲೈಸೆನ್ಸ್​​​ ಮತ್ತು ರಿಜಿಸ್ಟ್ರೇಷನ್ ಸರ್ಟಿಫಿಕೇಟ್​​ಗಳ ವಿತರಣೆಗೆ ಮುಂದಾಗಿದೆ. ಹೊಸದಾಗಿ ಬರುವ ಡಿಎಲ್ ಮತ್ತು ಆರ್​​​ಸಿಗಳು ಸ್ಮಾರ್ಟ್​ ತಂತ್ರಜ್ಞಾನವನ್ನು ಹೊಂದಿವೆ. ಅಂದರೆ ಹೊಸ ಕಾರ್ಡ್​​​​​​ನಲ್ಲಿ ಅತ್ಯಾಧುನಿಕ ಮೈಕ್ರೋ ಚಿಪ್​ ಇರಲಿದೆ. ಕ್ಯೂಆರ್​​​ ಕೋಡ್​ ಹಾಗೂ ನಿಯರ್​ ಫೀಲ್ಡ್​ ಕಮ್ಯುನಿಕೇಷನ್​ಗಳು ಇರಲಿದೆ. ಈ ಕಾರ್ಡ್​​​​ಗಳು ಎಟಿಎಂ ಕಾರ್ಡ್​​​ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ.

    2) ಕ್ರೆಡಿಟ್​ ಕಾರ್ಡಿಗಿಲ್ಲ ರಿಯಾಯಿತಿ
    ವಾಹನ ಸವಾರರು ಕ್ರೆಡಿಟ್​ ಕಾರ್ಡ್​​​ಗಳ ಮೂಲಕ ಪೆಟ್ರೋಲ್​ ಬಂಕ್​​ಗಳಲ್ಲಿ ಇಂಧನ ತುಂಬಿಸಿದ ಪಾವತಿ ಮಾಡಿದರೆ, ಅಕ್ಟೋಬರ್ 1ರಿಂದ ಅದಕ್ಕೆ ರಿಯಾಯಿತಿ ದೊರೆಯುವುದಿಲ್ಲ.

    3) ಡ್ರೈವಿಂಗ್​ ವೇಳೆ ಮೊಬೈಲ್​ ಬಳಕೆ ಆಗಲಿದೆ ದುಬಾರಿ!

    ಇನ್ನು ಮುಂದೆ ವಾಹನ ಚಲಾಯಿಸುವಾಗ ಮೊಬೈಲ್‌ನೊಂದಿಗೆ ಮಾತನಾಡಿದರೆ 1 ಸಾವಿರದಿಂದ 5 ಸಾವಿರ ರೂಪಾಯಿಗಳ ದಂಡ ವಿಧಿಸಬಹುದು. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಈ ಹೊಸ ನಿಯಮವನ್ನು ಜಾರಿಗೆ ತಂದಿದೆ.

    4) ಸಿಹಿತಿನಿಸಿನಲ್ಲಿ ಎಕ್ಸ್​ಪೈರಿ ಡೇಟ್​
    ಅಕ್ಟೋಬರ್ 1ರಿಂದ ಸ್ವೀಟ್​ ಸ್ಟಾಲ್​ಗಳಲ್ಲಿ ಅ.1ರಿಂದ ಹಳೆಯ ಸಿಹಿತಿಂಡಿಗಳನ್ನು ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ. ಏಕೆಂದರೆ ಹೊಸ ನಿಯಮದ ಅಡಿಯಲ್ಲಿ ಸಿಹಿತಿಂಡಿಗಳನ್ನು ಮಾರಾಟ ಮಾಡುವ ಅಂಗಡಿಯವರು ತಮ್ಮ ಎಲ್ಲಾ ಉತ್ಪನ್ನಗಳಿಗೆ ಎಕ್ಸ್​ಪೈರಿ ಡೇಟ್​ ಹಾಕಬೇಕಾಗುತ್ತದೆ.
    ಫುಡ್ ಸೇಫ್ಟಿ ಅಂಡ್ ಸ್ಟ್ಯಾಂಡರ್ಡ್ಸ್ ಅಥಾರಿಟಿ ಆಫ್ ಇಂಡಿಯಾದ (FSSAI) ಹೊಸ ನಿಯಮಗಳ ಪ್ರಕಾರ, ಅಂಗಡಿಗಳಲ್ಲಿನ ಸಿಹಿತಿಂಡಿಗಳ ಮೇಲೆ ‘ಬೆಸ್ಟ್ ಬಿಫೋರ್ ಹಲ್ವಾಯ್’ಗಾಗಿ ಬರೆಯುವುದು ಕಡ್ಡಾಯವಾಗಿರುತ್ತದೆ. ಅಂದರೆ, ಸ್ವೀಟ್​ಸ್ಟಾಲ್​ಗಳಲ್ಲಿ​ ತಯಾರಿಸಿ ಇಟ್ಟಿರುವ ಸಿಹಿ ಪದಾರ್ಥಗಳನ್ನು ಎಲ್ಲಿಯವರೆಗೆ ಬಳಸಬಹುದು ಎನ್ನುವುದನ್ನು ನಮೂದಿಸುವುದು ಕಡ್ಡಾಯ.

    5) ಆರೋಗ್ಯ ವಿಮೆಯಡಿ ಹೆಚ್ಚಿನ ಸೌಲಭ್ಯಗಳು ಲಭ್ಯ:
    ವಿಮಾ ನಿಯಂತ್ರಕ ಐರ್​ಡಿಎಐ ನಿಯಮಗಳ ಪ್ರಕಾರ ಆರೋಗ್ಯ ವಿಮಾ ಪಾಲಿಸಿಯಲ್ಲಿ ಪ್ರಮುಖ ಬದಲಾವಣೆ ತರಲಾಗಿದೆ. ಅಸ್ತಿತ್ವದಲ್ಲಿರುವ ಮತ್ತು ಹೊಸ ಆರೋಗ್ಯ ವಿಮಾ ಪಾಲಿಸಿಗಳ ವ್ಯಾಪ್ತಿಗೆ ಅಧಿಕ ರೋಗಗಳನ್ನು ತರಲಾಗಿದೆ. ಆರೋಗ್ಯ ವಿಮಾ ಪಾಲಿಸಿಯನ್ನು ಪ್ರಮಾಣೀಕೃತ ಮತ್ತು ಗ್ರಾಹಕ ಕೇಂದ್ರಿತವಾಗಿಸಲು ಈ ಬದಲಾವಣೆಯನ್ನು ಮಾಡಲಾಗುತ್ತಿದೆ.

    ಇದನ್ನೂ ಓದಿ: ಹೆಂಡ್ತಿ ಜತೆ ಜಗಳವಾಡಿ ಗಂಡ ಹೀಗೆ ಮಾಡೋದಾ? ಪೊಲೀಸರೇ ಕಕ್ಕಾಬಿಕ್ಕಿ

    6) ವಿದೇಶಕ್ಕೆ ಹಣ ಕಳುಹಿಸಲು ಹೆಚ್ಚು ಹಣ
    ವಿದೇಶಕ್ಕೆ ಹಣ ಕಳುಹಿಸುವ ತೆರಿಗೆ ಸಂಗ್ರಹಕ್ಕೆ ಸಂಬಂಧಿಸಿದ ಹೊಸ ನಿಯಮವನ್ನು ಕೇಂದ್ರ ಸರ್ಕಾರ ಮಾಡಿದೆ. ಇದು ಅ.1ರಿಂದ ಜಾರಿಗೆ ಬರಲಿದೆ. ವಿದೇಶದಲ್ಲಿ ವ್ಯಾಸಂಗ ಮಾಡುತ್ತಿರುವ ನಿಮ್ಮ ಮಗುವಿಗೆ ಹಣವನ್ನು ಕಳುಹಿಸಿದರೆ ಅಥವಾ ಸಂಬಂಧಿಕರಿಗೆ ಹಣ ಕಳುಹಿಸುವುದಿದ್ದರೆ ಮೂಲದಲ್ಲಿ (ಟಿಸಿಎಸ್) ಸಂಗ್ರಹಿಸಿದ 5% ತೆರಿಗೆಯನ್ನು ಹೆಚ್ಚುವರಿಯಾಗಿ ಪಾವತಿಸಲಾಗುತ್ತದೆ. ಹಣಕಾಸು ಕಾಯ್ದೆ 2020ರ ಪ್ರಕಾರ ಭಾರತೀಯ ರಿಸರ್ವ್ ಬ್ಯಾಂಕ್​ನ ಲಿಬರಲೈಸ್ಡ್ ರೆಮಿಟನ್ಸ್ ಸ್ಕೀಮ್ (ಎಲ್‌ಆರ್‌ಎಸ್) ಪ್ರಕಾರ ವಿದೇಶಕ್ಕೆ ಹಣ ಕಳುಹಿಸುವ ವ್ಯಕ್ತಿ ಟಿಸಿಎಸ್ ಪಾವತಿಸಬೇಕಾಗುತ್ತದೆ.

    7) ಎಲ್​ಪಿಜಿ ಸಿಲಿಂಡರ್​:
    ಮನೆ ಬಳಕೆಗೆ ಬಳಸುವ ಎಲ್​ಪಿಜಿ ಸಿಲಿಂಡರ್​ ಬೆಲೆಯಲ್ಲಿ ಕಳೆದ ಕೆಲ ತಿಂಗಳಿನಿಂದ ಭಾರಿ ಏರಿಳಿತ ಕಂಡುಬರುತ್ತಿದೆ. ತೈಲ ಮಾರುಕಟ್ಟೆ ಕಂಪನಿಗಳು ಪ್ರತಿ ತಿಂಗಳ ಮೊದಲ ದಿನಾಂಕದಂದು ಎಲ್​ಪಿಜಿ ಸಿಲಿಂಡರ್ ಮತ್ತು ವಾಯು ಇಂಧನದ ಹೊಸ ಬೆಲೆಗಳನ್ನು ಪ್ರಕಟಿಸುತ್ತವೆ. ಆದ್ದರಿಂದ ಈ ಬಗ್ಗೆ ಮಾನಸಿಕವಾಗಿ ಮತ್ತು ಆರ್ಥಿಕವಾಗಿ ಸನ್ನದ್ಧರಾಗಿ. ಸಿಲಿಂಡರ್​ ಬೆಲೆ ಏರಲೂಬಹುದು, ಇಳಿಯಲೂಬಹುದು.

    8) ವಾಹನಗಳಿಗೆ ಭದ್ರತಾ ನಂಬರ್ ಪ್ಲೇಟ್ 
    ಇದು ಸದ್ಯ ದೆಹಲಿ ನಿವಾಸಿಗಳಿಗೆ ಮಾತ್ರ ಅನ್ವಯ. ಆದ್ದರಿಂದ ಕರ್ನಾಟಕದವರು ಹೆಚ್ಚಿಗೆ ತಲೆಕೆಡಿಸಿಕೊಳ್ಳಬೇಕಿಲ್ಲ. ದೆಹಲಿಯಲ್ಲಿ ಅಕ್ಟೋಬರ್ 1 ರಿಂದ ವಾಹನಗಳಲ್ಲಿ ಹೆಚ್ಚಿನ ಭದ್ರತಾ ಸಂಖ್ಯೆ ಫಲಕಗಳನ್ನು ಕಡ್ಡಾಯಗೊಳಿಸಲಾಗಿದೆ. ಏಪ್ರಿಲ್ 2019ಕ್ಕಿಂತ ಮೊದಲು ಇರುವ ವಾಹನಗಳಿಗೆ, ವಾಹನದಲ್ಲಿ ಈ ನಂಬರ್ ಪ್ಲೇಟ್ ಇರುವುದು ಮುಖ್ಯ. ಪ್ಲೇಟ್ ಅನುಪಸ್ಥಿತಿಯಲ್ಲಿ ಒಂದರಿಂದ ಐದು ಸಾವಿರ ರೂಪಾಯಿಗಳ ದಂಡ ವಿಧಿಸಲಾಗುತ್ತದೆ.

    9) ಗೋ ಏರ್​ಲೈನ್ಸ್​ ಪ್ರಯಾಣ
    ಗೋಏರ್ ಏರ್​ಲೈನ್ಸ್​ನಲ್ಲಿ ದೆಹಲಿಗೆ ಹೋಗುವವರಿಗೆ ಮಾತ್ರ ಇದು ಅನ್ವಯ. ಪ್ರಯಾಣದಲ್ಲಿನ ಯಾವುದೇ ರೀತಿಯ ಅನಾನುಕೂಲತೆಯನ್ನು ತಪ್ಪಿಸಲು, ವಿಮಾನಯಾನವು ಪ್ರಯಾಣಿಕರಿಗೆ ವಿಶೇಷ ದೂರವಾಣಿ ಸಂಖ್ಯೆಗಳು ಮತ್ತು ಸಲಹೆಗಳನ್ನು ನೀಡಿದೆ. ಗೋ ಏರ್ ಪ್ರಯಾಣಿಕರಿಗೆ ಮನೆಯಿಂದ ಹೊರಡುವ ಮೊದಲು ತಮ್ಮ ವಿಮಾನ ಮತ್ತು ಟರ್ಮಿನಲ್ ಅನ್ನು ಪರೀಕ್ಷಿಸಲು ಸೂಚಿಸಿದೆ. ಹೆಚ್ಚಿನ ಮಾಹಿತಿಗಾಗಿ ಟೋಲ್​ ಫ್ರೀ ಸಂಖ್ಯೆಯಾದ 1800 2100 999 ಮತ್ತು +91 22 6273 2111 ಕರೆ ಮಾಡಬಹುದು.

    ಗ್ಯಾಂಗ್​ರೇಪ್​ ಮಾಡಿ ನಾಲಗೆ ಕಟ್: ಜೀವನ್ಮರಣಗಳ ನಡುವೆ ಹೋರಾಡುತ್ತಿದ್ದ ಯುವತಿ ಸಾವು!

    ಬಾಬ್ರಿ ಮಸೀದಿ ಧ್ವಂಸ ಪ್ರಕರಣ: ನಾಳೆ ಐತಿಹಾಸಿಕ ತೀರ್ಪು- ಎಲ್ಲೆಡೆ ಕಟ್ಟೆಚ್ಚರ

    ಉಗುಳಬೇಡ ಎಂದದ್ದೇ ತಪ್ಪಾಯ್ತು… ಮನೆಯಲ್ಲಿದ್ದ ಪಾರಿವಾಳಗಳನ್ನೆಲ್ಲಾ ಕೊಂದುಹಾಕಿದ ಯುವಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts