ಉತ್ತರ: ನಿಮಗೆ ಸ್ವಲ್ಪ ಮಟ್ಟಿನ ಬಿಳುಪು ಹೋಗುತ್ತಿದ್ದಲ್ಲಿ ಅದರ ಬಗ್ಗೆ ಚಿಂತೆ ಬೇಡ. ಬಿಳುಪು ಅತಿಯಾಗಿ ಸ್ರವಿಸುತ್ತಿದ್ದಲ್ಲಿ ಹಳದಿ ಬಣ್ಣದಿಂದ ಕೂಡಿದ್ದಲ್ಲಿ, ನವೆ ಯಾಗುತ್ತಿದ್ದಲ್ಲಿ ಸೋಂಕು ತಗುಲಿರುವ ಸಾಧ್ಯತೆಯಿರುತ್ತದೆ.
ನೀವು ಧರಿಸುವ ಒಳ ಉಡುಪನ್ನು ಬಿಸಿ ನೀರಿನಲ್ಲಿ ತೊಳೆದು, ಬಿಸಿಲಿನಲ್ಲಿ ಒಣಗಿಸಿ. ಒಳ ಉಡುಪುಗಳು ಹಳೆಯದಾಗಿದ್ದು 3 ತಿಂಗಳಿಗೂ ಮೇಲ್ಪಟ್ಟು ಅವುಗಳನ್ನು ಬಳಸುವುದು ಬೇಡ. ಒಂದು ಲೀಟರ್ ನೀರಿಗೆ 2 ಚಮಚ ಅರಿಶಿಣ ಪುಡಿ ಹಾಕಿ ಕುದಿಸಿ ಆರಿಸಿ ನಂತರ ಆ ಕಷಾಯದಿಂದ ಜನನಾಂಗವನ್ನು ತೊಳೆದುಕೊಳ್ಳಿ. ಮಿಲನದ ನಂತರ ಪ್ರತಿ ಬಾರಿಯೂ ಸ್ವಚ್ಛಗೊಳಿಸುತ್ತಿರಿ.
ಆಯುರ್ವೇದಕ್ಕೆ ಸಂಬಂಧಿಸಿದಂತೆ ಡಾ.ವಸುಂಧರಾ ಭೂಪತಿ ಅವರು ಬರೆದಿರುವ ವಿವಿಧ ರೀತಿಯ ಪರಿಹಾರಕ್ಕಾಗಿ https://www.vijayavani.net/ ಕ್ಲಿಕ್ಕಿಸಿ ಆರೋಗ್ಯ ವಿಭಾಗ ನೋಡಿ…