ನ್ಯೂಸ್

ಮಕ್ಕಳಲ್ಲಿ ಜೀರ್ಣಕ್ರಿಯೆ ಸರಿಯಾಗಲು ಆಯುರ್ವೇದದಲ್ಲಿ ಇರುವ ಪರಿಹಾರವೇನು?

suchetana
ಪ್ರಶ್ನೆ: ನನ್ನ ಮಗನಿಗೆ ಪದೇ ಪದೆ ಭೇದಿಯಾಗುತ್ತದೆ. ಆಹಾರ ತಿಂದ ತಕ್ಷಣ ಭೇದಿ ಮಾಡಿಕೊಳ್ಳುತ್ತಾನೆ. ಸರಿಯಾಗಿ ಜೀರ್ಣವಾಗಿರುವುದಿಲ್ಲ. ಹೀಗಾಗಿಯೋ ಏನೋ, ಆಗಾಗ ತಿನ್ನುತ್ತಲೇ ಇರುತ್ತಾನೆ. ಸಿಹಿ ಅಂದರೆ ಬಹಳ ಪ್ರೀತಿ. ಅದರಿಂದ ಏನಾದರೂ ಸಮಸ್ಯೆ ಆಗುವುದೇ? ಅವನಿಗೆ ಈಗ ಮೂರು ವರ್ಷ.

ಉತ್ತರ: ನಿಮ್ಮ ಮಗನಿಗೆ ದಾಡಿಮಾವಲೇಹವನ್ನು ಒಂದು ಚಮಚೆಯಷ್ಟನ್ನು ಊಟಕ್ಕೆ ಮುಂಚೆ ಎರಡು ಬಾರಿ ಸೇವಿಸಲು ಕೊಡಿ. ಅಲ್ಲದೆ, ಪದೇ ಪದೇ ತಿನ್ನುವ ಅಭ್ಯಾಸವನ್ನು ತಿಳಿಹೇಳಿ ಬಿಡಿಸಿ.

ಕನಿಷ್ಠ 3-4 ಗಂಟೆಗಳ ಅಂತರದಲ್ಲಿ ಆಹಾರ ಸೇವನೆ ಮಾಡಿಸಿ. ಸಿಹಿ ಸೇವನೆಯನ್ನೂ ಮಿತಿಗೊಳಿಸಿ. ಊಟದ ನಂತರ ನೇರಳೆ ಶರಬತ್ತನ್ನು ಎರಡು ಚಮಚೆಯಷ್ಟನ್ನು ನೀರು ಬೆರೆಸಿ ಕುಡಿಯಲು ಕೊಡಿ. ಕಾಯಿಸಿ ಆರಿಸಿದ ನೀರನ್ನೇ ಕುಡಿಸಿ.

ಆಯುರ್ವೇದಕ್ಕೆ ಸಂಬಂಧಿಸಿದಂತೆ ಡಾ.ವಸುಂಧರಾ ಭೂಪತಿ ಅವರು ಬರೆದಿರುವ ವಿವಿಧ ರೀತಿಯ ಪರಿಹಾರಕ್ಕಾಗಿ https://www.vijayavani.net/ ಕ್ಲಿಕ್ಕಿಸಿ ಆರೋಗ್ಯ ವಿಭಾಗ ನೋಡಿ…