More

    ಜಗಳ ಮಾಡುವಾಗ ಮೆದುಳಿನಿಂದ ಶಬ್ದ ಬರುತ್ತಿದ್ದು, ಭಯವಾಗುತ್ತಿದೆ; ಪರಿಹಾರ ಏನು?

    ಪ್ರಶ್ನೆ: ನನಗೆ 25 ವರ್ಷ. ಯಾರದ್ದಾದರೂ ಜತೆ ಜಗಳ ಮಾಡುವಾಗ ನನ್ನ ದೇಹವೆಲ್ಲ ನಡುಗುತ್ತದೆ. ಹಾಗೂ ಮೆದುಳಿನಿಂದ ಗುಂಯ್ ಎನ್ನುವ ಸದ್ದು ಬರುತ್ತದೆ. ಇದರಿಂದ ಮಾತು ಸ್ಪಷ್ಟವಾಗಿ ಕೇಳಿಸುವುದಿಲ್ಲ. ನಾನು ಆತಂಕ ಪಡದೆ ಇರಲು ಏನಾದರೂ ಔಷಧ ಇದೆಯೇ? ನಾನು ಮಾನಸಿಕ ರೋಗಿಯಾಗಿದ್ದು, ಸಣ್ಣ ಕಿರಿಕಿರಿ ಆದರೂ ತುಂಬ ಕೋಪ ಬರುತ್ತದೆ. ಆದರೆ, ಕೋಪವನ್ನು ನಿಯಂತ್ರಿಸಿ ಶಾಂತವಾಗಿರಲು ಪ್ರಯತ್ನಿಸುತ್ತೇನೆ.

    ಉತ್ತರ: ನಿಮಗೆ ಆತಂಕ ಮತ್ತು ಉದ್ವೇಗದಿಂದ ನಡುಕ, ಕೋಪ ಉಂಟಾಗುತ್ತದೆ. ಮನೋವೈದ್ಯರ ಬಳಿ ಚಿಕಿತ್ಸೆ ಮುಂದುವರೆಸಿ.

    ಸಾರಸ್ವತಾರಿಷ್ಟವನ್ನು ದಿನಕ್ಕೊಂದು ಬಾರಿ ಮೂರು ಚಮಚೆಯಷ್ಟು ನೀರನ್ನು ಬೆರೆಸಿ, ಊಟದ ನಂತರ ಸೇವಿಸಿ. ಬ್ರಾಹ್ಮಿವಟಿಯನ್ನು ದಿನಕ್ಕೆ ಮೂರು ಬಾರಿ ಎರಡು ಮಾತ್ರೆಯಂತೆ ತೆಗೆದುಕೊಳ್ಳಿ.

    ಧ್ಯಾನ, ನಡಿಗೆ, ಯೋಗ ಮಾಡುವುದು ಉತ್ತಮ. ವರ್ಷಕ್ಕೊಮ್ಮೆ ಪಂಚಕರ್ಮ ಚಿಕಿತ್ಸೆ, ನಸ್ಯ-ಶಿರೋಧಾರ ಒಂದು ವಾರ ತೆಗೆದುಕೊಳ್ಳುವುದು ಒಳ್ಳೆಯದು. 7-8 ಬಾದಾಮಿಯನ್ನು ರಾತ್ರಿ ಕುಡಿಯುವ ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ತಿನ್ನಿ.

    ಆಯುರ್ವೇದಕ್ಕೆ ಸಂಬಂಧಿಸಿದಂತೆ ಡಾ.ವಸುಂಧರಾ ಭೂಪತಿ ಅವರು ಬರೆದಿರುವ ವಿವಿಧ ರೀತಿಯ ಪರಿಹಾರಕ್ಕಾಗಿ https://www.vijayavani.net/ ಕ್ಲಿಕ್ಕಿಸಿ ಆರೋಗ್ಯ ವಿಭಾಗ ನೋಡಿ…

    ಗುಪ್ತಾಂಗದಲ್ಲಿ ತುರಿಕೆ, ಮೂತ್ರ ವಿಸರ್ಜನೆಯಲ್ಲಿ ಉರಿ- ಸಮಸ್ಯೆಯಾದರೆ ಹೀಗೆ ಮಾಡಿ…

    ಮೆನೋಪಾಸ್ ನಂತರ ಲೈಂಗಿಕಕ್ರಿಯೆಯಲ್ಲಿ ತೊಂದರೆಯಾದರೆ ಆಯುರ್ವೇದದಲ್ಲಿದೆ ಪರಿಹಾರ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts