ನವದೆಹಲಿ: ಪಾಕಿಸ್ತಾನದಲ್ಲಿ ಬಂಧಿಯಾಗಿರುವ ಭಾರತದ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಅವರ ಪರವಾಗಿ ವಾದ ಮಂಡಿಸುತ್ತಿರುವ, ಮಾಜಿ ಸಾಲಿಸಿಟರ್ ಜನರಲ್, ಹಿರಿಯ ವಕೀಲ ಹರೀಶ್ ಸಾಳ್ವೆ ಅವರು ಇದೀಗ ಎರಡನೆಯ ಮದುವೆಯ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದಾರೆ.
65 ವರ್ಷದ ಹರೀಶ್ ಅವರು ಲಂಡನ್ ಮೂಲದ ಕಲಾವಿದೆ ಕ್ಯಾರೊಲೀನ್ ಬ್ರೊಸ್ಸಾರ್ಡ್ ಅವರನ್ನು ಮುಂದಿನ ವಾರ ಚರ್ಚ್ ಒಂದರಲ್ಲಿ ಮದುವೆಯಾಗಲಿದ್ದಾರೆ ಎನ್ನಲಾಗಿದೆ.
ಕಳೆದ ಜೂನ್‌ನಲ್ಲಿ ಪತ್ನಿ ಮೀನಾಕ್ಷಿ ಅವರಿಗೆ ವಿಚ್ಛೇದನ ನೀಡಿದ್ದಾರೆ. ಇವರಿಗೆ ಸಾಕ್ಷಿ (37) ಹಾಗೂ ಸಾನಿಯಾ (33) ಎಂಬ ಹೆಣ್ಣುಮಕ್ಕಳಿದ್ದಾರೆ. ಇನ್ನು ಕ್ಯಾರೊಲೀನ್ ಅವರಿಗೂ ಇದು ಎರಡನೆಯ ಮದುವೆಯಾಗಿದ್ದು, ಅವರಿಗೆ 18 ವರ್ಷದ ಮಗಳಿದ್ದಾರೆ.
ಕರೊನಾ ನಿರ್ಬಂಧ ಇರುವ ಹಿನ್ನೆಲೆಯಲ್ಲಿ ವಿವಾಹಕ್ಕೆ ಕೇವಲ 15 ಅತಿಥಿಗಳನ್ನು ಮಾತ್ರ ಆಹ್ವಾನಿಸಲಾಗುವುದು ಎಂದು ಆಪ್ತ ಮೂಲಗಳು ತಿಳಿಸಿವೆ.
ಲಂಡನ್ನಲ್ಲಿ ಚಿತ್ರಕಲಾ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದಾರೆ ಕ್ಯಾರೋಲಿನ್ ಅವರನ್ನು ಭೇಟಿಯಾಗಿದ್ದರು. ಸುಮಾರು ಒಂದು ವರ್ಷಗಳಿಂದ ಇಬ್ಬರೂ ಪರಿಚಿತರಾಗಿದ್ದಾರೆ. ಬ್ರಿಟನ್ಲ್ಲಿ ಜನಿಸಿರುವ ಕ್ಯಾರೋಲಿನ್ ಅವರಿಗೆ ತಮ್ಮಂತೆಯೇ ಕಲೆ, ರಂಗಭೂಮಿ ಹಾಗೂ ಶಾಸ್ತ್ರೀಯ ಸಂಗೀತದ ಬಗ್ಗೆ ಅಭಿರುಚಿ ಇದೆ. ಇದೇ ಕಾರಣಕ್ಕೆ ಆಕೆಯನ್ನು ವರಿಸಿರುವುದಾಗಿ ಸಾಳ್ವೆ ಹೇಳಿದ್ದಾರೆ.
ಭಾರತದ ಮಾಜಿ ಸಾಲಿಸಿಟರ್ ಜನರಲ್ ಆಗಿರುವ ಹರೀಶ್ ಸಾಳ್ವೆ, ಜನವರಿಯಲ್ಲಿ ಇಂಗ್ಲೆಂಡ್ ಮತ್ತು ವೇಲ್ಸ್ಕ್ವೀನ್ಸ್ ಕೌನ್ಸೆಲ್ ಆಗಿ ನೇಮಕವಾಗಿದ್ದಾರೆ. ಕುಲಭೂಷಣ್ ಜಾಧವ್ ನೇಣುಶಿಕ್ಷೆ ತಪ್ಪಿಸಲು ಭಾರತದ ಪರ ಅಂತಾರಾಷ್ಟ್ರೀಯ ಕೋರ್ಟ್ನಲ್ಲಿ ಇವರು ವಾದ ಮಂಡಿಸುತ್ತಿದ್ದಾರೆ. ಇವರಿಗೆ ಪದ್ಮಭೂಷಣ ಪ್ರಶಸ್ತಿಯೂ ಲಭಿಸಿದೆ.