More

    ಮದರಸಾದ ಮೇಲೆ ಬಾಂಬ್​ ದಾಳಿ: ಏಳು ಮಕ್ಕಳು ಬಲಿ- ಉಳಿದವರ ಸ್ಥಿತಿ ಚಿಂತಾಜನಕ

    ಪೇಶಾವರ : ವಾಯುವ್ಯ ಪಾಕಿಸ್ತಾನದ ಪೇಶಾವರ ಹೊರವಲಯದಲ್ಲಿರುವ ಮದರಸಾದ ಮೇಲೆ ಬಾಂಬ್​ ದಾಳಿ ನಡೆದಿದೆ.

    ಜಾಮಿಯಾ ಜುಬೈರಿಯಾ ಮದರಸಾದ ಮುಖ್ಯ ಸಭಾಂಗಣದಲ್ಲಿ ಧರ್ಮಗುರು ಇಸ್ಲಾಂ ಧರ್ಮದ ಬೋಧನೆಗಳ ಕುರಿತು ಉಪನ್ಯಾಸ ನೀಡುತ್ತಿರುವಾಗ ಬಾಂಬ್ ಸ್ಫೋಟ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿ ವಾಕರ್ ಅಜೀಮ್ ತಿಳಿಸಿದ್ದಾರೆ.

    ಪ್ಲಾಸ್ಟಿಕ್​ ಚೀಲದಲ್ಲಿ ಬಾಂಬ್​ ಇಟ್ಟು ಹೋದ ಕೆಲವೇ ಕ್ಷಣದಲ್ಲಿ ಅದು ಸ್ಫೋಟಗೊಂಡಿದೆ. ಈ ಘಟನೆಯಲ್ಲಿ ಏಳು ಮಕ್ಕಳು ಬಲಿಯಾಗಿದ್ದಾರೆ. ಅನೇಕ ಮಕ್ಕಳೂ ಸೇರಿ 70ಕ್ಕೂ ಅಧಿಕ ಗಂಭೀರವಾಗಿ ಗಾಯಗೊಂಡಿದ್ದು, ಹಲವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗಬಹುದೆಂದು ವೈದ್ಯರು ಹೇಳಿದ್ದಾರೆ.

    ಇದನ್ನೂ ಓದಿ: ಫ್ಲ್ಯಾಟ್ ಲಭ್ಯವಿದೆ… ಮುಸ್ಲಿಮರು, ಪ್ರಾಣಿಗಳಿಗೆ ಪ್ರವೇಶವಿಲ್ಲ…

    ಪೇಶಾವರ ಅಫ್ಘಾನಿಸ್ತಾನದ ಗಡಿಯಲ್ಲಿರುವ ಪಾಕಿಸ್ತಾನದ ಖೈಬರ್ ಪಖ್ತುನ್​ಖ್ವಾ ಪ್ರಾಂತ್ಯದ ಪ್ರಾಂತೀಯ ರಾಜಧಾನಿ. ಇತ್ತೀಚಿನ ವರ್ಷಗಳಲ್ಲಿ ಈ ಪ್ರಾಂತ್ಯದಲ್ಲಿ ಉಗ್ರಗಾಮಿಗಳ ಕುಕೃತ್ಯ ಹೆಚ್ಚಾಗಿ ನಡೆಯುತ್ತಿದೆ. ಈ ಹಿಂದೆ ಕೂಡ ಮಸೀದಿಗಳು ಅಥವಾ ಸೆಮಿನರಿಗಳನ್ನು ಟಾರ್ಗೆಟ್​ ಮಾಡಿಕೊಂಡು ಹಲವಾರು ಮಂದಿಯನ್ನು ಕೊಲ್ಲಲಾಗಿದೆ ಎಂದು ಮೂಲಗಳು ಹೇಳಿವೆ.

    ನೈಋತ್ಯ ನಗರವಾದ ಕ್ವೆಟ್ಟಾದಲ್ಲಿ ಬಾಂಬ್ ಸ್ಫೋಟದಿಂದ ಎರಡು ಜನರು ಮೃತಪಟ್ಟ ಎರಡು ದಿನಗಳ ನಂತರ ಇದೀಗ ಇಂಥದ್ದೊಂದು ದಾಳಿ ನಡೆಸಲಾಗಿದೆ.

    ಕೋಲು ಹಾಕಿ ಸೆಕ್ಸ್​- ರಕ್ತದ ಮಡುವಿನಲ್ಲಿ ನಾಯಿ: ಭಯಾನಕ ವಿಡಿಯೋ ವೈರಲ್​

    ಬಿಜೆಪಿ ನಾಯಕಿ ಖುಷ್ಬೂ ಅರೆಸ್ಟ್​… ನಾನು ಹೆದರಲ್ಲ, ಮಹಿಳೆಯರಿಗಾಗಿ ಕೊನೆವರೆಗೂ ಹೋರಾಟ ಎಂದ ನಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts