ನ್ಯೂಸ್

ದೇವರ ಮನೆಯಲ್ಲಿ ಹೀರೋಯಿನ್​: ದಿನವೂ ಈಕೆಗೆ ಪೂಜೆ, ಪುನಸ್ಕಾರ- ನಟಿಯೂ ಫುಲ್​ ಖುಷ್​!

ಕೊಯಮತ್ತೂರು: ಚಿತ್ರ ತಾರೆಯರು ಎಂದರೆ ಕೆಲವರ ಅಭಿಮಾನ ಅತಿರೇಕಕ್ಕೆ ಹೋಗುವುದು ಇದೆ. ಇದಾಗಲೇ ಖುಷ್ಬು ಸೇರಿದಂತೆ ಕೆಲವರು ತಾರೆಯರ ದೇವಾಲಯಗಳನ್ನು ಕಟ್ಟಿ ಪೂಜೆ ಮಾಡಿರುವುದನ್ನು ಕೇಳಿರಬಹುದು. ಇದೀಗ ಬಹುಭಾಷಾ ನಟಿಯೊಬ್ಬರನ್ನು ದೇವರ ಕೋಣೆಯಲ್ಲಿ ಇಟ್ಟು ನಿತ್ಯವೂ ಪೂಜೆ ಪುನಸ್ಕಾರ ಮಾಡುತ್ತಿದ್ದಾನೆ ಇಲ್ಲೊಬ್ಬ ಅಭಿಮಾನಿ.

ಸದ್ಯ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮಲಯಾಳದ 'ಪ್ರೇಮಂ' ಸಿನಿಮಾದ ಮೂಲಕ ಸಿನಿ ಪ್ರಿಯರ ಮನಸ್ಸನ್ನು ಗೆದ್ದ ಚೆಲುವೆ ಅನುಪಮಾ ಪರಮೇಶ್ವರನ್. ಇದು ಇವರ ಮೊದಲ ಸಿನಿಮಾವಾದರೂ ಸೂಪರ್​ ಹಿಟ್​ ಆಗಿದ್ದೂ ಅಲ್ಲದೇ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದ್ದಾರೆ.

ಒಬ್ಬಾತ ಅನುಪಮಾ ಅವರ ಎಷ್ಟು ಅಭಿಮಾನಿಯಾಗಿದ್ದಾನೆ ಎಂದರೆ ಅವರ ಫೋಟೋ ಇಟ್ಟುಕೊಂಡು ಪೂಜಿಸುತ್ತಿದ್ದಾನೆ. ಸದ್ಯ ಈ ಫೋಟೋವನ್ನು ಅಭಿಮಾನಿ ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದಾನೆ. ಇದಕ್ಕೆ ನಟಿ ಅನುಪಮಾ ಕೂಡ ಸಕತ್​ ಖುಷಿಯಾಗಿದ್ದು, ಫೋಟೋಗೆ ಲೈಕ್​ ಮಾಡಿದ್ದಾರೆ. ನಾನು ಅನುಪಮಾ ಪರಮೇಶ್ವರ್ ಅವರ ದೊಡ್ಡ ಅಭಿಮಾನಿ ಎಂದು ಬರೆದುಕೊಂಡಿದ್ದಾನೆ ಈತ.

ಇದಾಗಲೇ ಅನುಪಮಾ ಅವರು ಮಲಯಾಳಿ, ತಮಿಳು ಮತ್ತು ತೆಲುಗಿನಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸಿದ್ದು, ಪುನೀತ್ ರಾಜ್‌ಕುಮಾರ್‌ಗೆ ಜೋಡಿಯಾಗಿ ನಟಸಾರ್ವಭೌಮ ಸಿನಿಮಾದಲ್ಲಿಯೂ ನಟಿಸಿದ್ದಾರೆ.