34 ಕೋಟಿ ರೂ. ಬ್ಲೂಫಿಲ್ಮಂ ದಂಧೆಗಿದ್ಯಾ ಶಿಲ್ಪಾ ಲಿಂಕ್‌? ನಟಿಗೆ ಕ್ಲೀನ್‌ಚಿಟ್‌ ನೀಡಲ್ಲ ಎಂದ ಪೊಲೀಸರು

raj kundra
Published on

ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಇದೀಗ ಪೇಚಿಗೆ ಸಿಲುಕಿದ್ದಾರೆ. ಅವರ ಪತಿ ಉದ್ಯಮಿ, ರಾಜ್‌ಕುಂದ್ರಾ ಅವರು ಬ್ಲೂ ಫಿಲ್ಮ್‌ ಹಗರಣದಲ್ಲಿ ಬಂಧಿಯಾಗಿರುವ ಹಿನ್ನೆಲೆಯಲ್ಲಿ ಇದರಲ್ಲಿ ಶಿಲ್ಪಾ ಶೆಟ್ಟಿಯ ಪಾತ್ರವೂ ಇದ್ದಿರಬಹುದೆ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇನ್ನೆರಡು ವರ್ಷಗಳಲ್ಲಿ ಅಂದರೆ 2023ರ ಗುರಿಯೊಂದಿಗೆ ಶುರು ಮಾಡಿದ್ದ ಈ ಬ್ಲೂ ಫಿಲ್ಮ್‌ಂ ದಂಧೆಯಿಂದ 34 ಕೋಟಿ ರೂಪಾಯಿ ದುಡಿಯುವ ಅಂದಾಜನ್ನು ರಾಜ್‌ ಕುಂದ್ರಾ ಹೊಂದಿದ್ದರು. ಆದರೆ ಈಗ ಸಿಕ್ಕಿಬಿದ್ದಿದ್ದು ಸದ್ಯ 14 ದಿನಗಳ ವರೆಗೂ ಮತ್ತೆ ಅವರನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಈ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿ ಕೈವಾಡ ಇಲ್ಲ ಎಂದು ಹೇಳಲಾಗುತ್ತಿದ್ದರೂ, ಪೊಲೀಸರು ಅವರ ವಿಚಾರಣೆಯನ್ನೂ ತೀವ್ರಗೊಳಿಸಿದ್ದಾರೆ. ಯಾವುದೇ ಕಾರಣಕ್ಕೆ ಅವರಿಗೆ ಈಗಲೇ ಕ್ಲೀನ್‌ ಚಿಟ್‌ ನೀಡಲು ಸಾಧ್ಯವಿಲ್ಲ. ಅವರ ಲಿಂಕ್‌ ಇದೆಯಾ ಎನ್ನುವುದನ್ನು ನೋಡಬೇಕಿದೆ. ಪ್ರಾಥಮಿಕ ತನಿಖೆ ವೇಳೆ ಶಿಲ್ಪಾ ಶೆಟ್ಟಿ ಪಾತ್ರ ಇರುವ ಬಗ್ಗೆ ಯಾವುದೇ ಸಾಕ್ಷ್ಯಗಳು ಇಲ್ಲ ಎನ್ನುವುದು ಸಾಬೀತಾಗಿದೆ. ಆದರೆ ಈಗಲೇ ಅವರು ನಿರಪರಾಧಿ ಎಂದು ಹೇಳಲಾಗಲು ಎಂದು ಮುಂಬೈ ಕ್ರೈಂ ಬ್ರ್ಯಾಂಚ್‌ ಪೊಲಿಸರು ಹೇಳಿದ್ದಾರೆ.

ಈಗಾಗಲೇ ಸಾಕ್ಷಿಯಾಗಿ ನಟ ಶರ‍್ಲಿನ್ ಚೋಪ್ರಾ ಅವರನ್ನು ಹೇಳಿಕೆ ಪಡೆಯಲಾಗಿದೆ. ಇವರು ಶಿಲ್ಪಾ ಶೆಟ್ಟಿ ಜತೆ ಸಂಪರ್ಕದಲ್ಲಿ ಇರುವುದು ತಿಳಿದಿದೆ. ಬೇರೆ ವಿಷಯಕ್ಕೆ ಸಂಬಂಧಿಸಿದಂತೆ ತಾನು ಶಿಲ್ಪಾ ಜತೆ ಸಂಪರ್ಕದಲ್ಲಿ ಇರುವುದನ್ನು ಚೋಪ್ರಾ ಒಪ್ಪಿಕೊಂಡಿದ್ದಾರೆ. ಆದರೆ ಬ್ಲೂ ಫಿಲ್ಮ್‌ಂಗೂ ತಮಗೂ ಸಂಬಂಧ ಇಲ್ಲ ಎಂದಿದ್ದಾರೆ. ಸದ್ಯ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net