ನ್ಯೂಸ್

ನಟಿಯರಿಗಿಂತ ನಾನೇನೂ ಕಮ್ಮಿ ಇಲ್ಲ ಎಂದು ಸಂಪೂರ್ಣ ನಗ್ನರಾಗಿ ರಣವೀರ್ ಫೋಟೋಶೂಟ್​!

ಮುಂಬೈ: ಹಣಕ್ಕಾಗಿಯೋ ಇಲ್ಲವೇ ಪ್ರಚಾರಕ್ಕಾಗಿಯೋ ಕೆಲ ನಟಿಯರು ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಉಡುಗೆಯಲ್ಲಿ ಪೋಸ್​ ಕೊಡುವುದು ಮಾಮೂಲಾಗಿದೆ. ಟ್ರೋಲ್​ ಆದರೆ ಹೆಚ್ಚು ಪ್ರಚಾರಕ್ಕೆ ಬರುತ್ತೇವೆ ಎನ್ನುವ ಕಾರಣಕ್ಕೆ ಈಚಿನ ದಿನಗಳಲ್ಲಿ ಕೆಲ ನಟಿಯರು ಹೀಗೆ ಚಿತ್ರ-ವಿಚಿತ್ರ ಎನ್ನಿಸುವ ಉಡುಗೆ ತೊಟ್ಟು ಸಾಮಾಜಿಕ ಜಾಲತಾಣದಲ್ಲಿ ಪೋಸ್​ ಕೊಡುತ್ತಿದ್ದಾರೆ. ಇದೀಗ ಈ ನಟಿಯರಿಗಿಂತ ತಾನೇನೂ ಕಮ್ಮಿ ಇಲ್ಲ, ಅವರಿಗಿಂತಲೂ ಒಂದು ಕೈ ಮೇಲೆ ಎಂದಿರುವ ನಟ ರಣಬೀರ್​ ಸಿಂಗ್​ ಮಾಡಿಸಿಕೊಂಡಿರೋ ಫೋಟೋಶೂಟ್​ ಜಾಲತಾಣದಲ್ಲಿ ಕೋಲಾಹಲವನ್ನೇ ಸೃಷ್ಟಿಸಿದೆ.

ಇದಕ್ಕೆ ಕಾರಣ, ರಣಬೀರ್​ ಸಿಂಗ್​ ಸಂಪೂರ್ಣ ಬೆತ್ತಲಾಗಿ ಫೋಟೋ ಶೂಟ್​ ಮಾಡಿಸಿಕೊಂಡಿದ್ದಾರೆ. ಇದಾಗಲೇ ಚಿತ್ರ-ವಿಚಿತ್ರ ಡ್ರೆಸ್​ಗೆ ಸಕತ್​ ಫೇಮಸ್​ ಆಗಿರುವ ರಣಬೀರ್​, ತಾನು ಯಾವುದೇ ಬಟ್ಟೆ ಇಲ್ಲದೆಯೂ ಚೆನ್ನಾಗಿ ಕಾಣಿಸಬಲ್ಲೆ ಎಂದು ಸಾಬೀತು ಪಡಿಸಲು ಹೋದಂತಿದೆ!

ಮ್ಯಾಗಜಿನ್‌ ಒಂದರ ಮುಖಪುಟಕ್ಕಾಗಿ ಸಂಪೂರ್ಣ ನಗ್ನವಾಗಿ ಕ್ಯಾಮೆರಾ ಕಣ್ಣಿಗೆ ರಣ್‌ವೀರ್ ಪೋಸ್ ನೀಡಿದ್ದಾರೆ. ಇದನ್ನು ನೋಡಿ ಹಲವರು ಗರಂ ಆಗಿದ್ದಾರೆ. ರಣಬೀರ್​ ಅವರ ಪತ್ನಿ ದೀಪಿಕಾ ಪಡುಕೋಣೆ ಅವರಿಗೆ ಅಭಿಮಾನಿಗಳು ಕ್ಲಾಸ್ ತೆಗೆದುಕೊಂಡಿದ್ದಾರೆ. ನಿಮ್ಮ ಪತಿಗೆ ಸ್ವಲ್ಪ ಬುದ್ಧಿ ಹೇಳಿ ಎಂದಿದ್ದಾರೆ. ಆದರೆ ದೀಪಿಕಾ ಸದ್ಯ ಮೌನ ತಾಳಿದ್ದಾರೆ.

ಮ್ಯಾಗಜೀನ್​ಗೆ ಈ ರೀತಿಯ ಪೋಸ್​ ನೀಡಿದ ನಂತರ ಸಂದರ್ಶನ ಕೂಡ ನೀಡಿರೋ ನಟ ರಣಬೀರ್​, ನಟಿಸುವಾಗ ನನಗೆ ಬೆತ್ತಲಾಗುವುದು ನನಗೆ ತುಂಬಾ ಇಷ್ಟ, ಇದು ಸುಲಭ ಕೂಡ. ಆದರೆ ನೋಡುಗರು ನನ್ನ ನೋಡಿ ಮುಜುಗರ ಪಡುತ್ತಾರೆ ಎಂದು ಬಟ್ಟೆ ಹಾಕಿಕೊಳ್ಳುತ್ತೇನೆ ಎಂದಿದ್ದಾರೆ. ಇವರ ಈ ಫೋಟೋ ಹಾಗೂ ಹೇಳಿಕೆಗೆ ಭಾರಿ ಚರ್ಚೆ ಶುರುವಾಗಿದೆ (ಏಜೆನ್ಸೀಸ್​)