ನ್ಯೂಸ್

ಅಂತ್ಯಕ್ರಿಯೆ ಮುಗಿಸಿ ಬರುವಾಗ ಭೀಕರ ಅಪಘಾತ: 6 ಮಂದಿ ಸ್ಥಳದಲ್ಲೇ ಸಾವು

ಜಲಾಲ್​ಪುರ (ಉತ್ತರ ಪ್ರದೇಶ): ಟ್ರಕ್​​ ಮತ್ತು ಜೀಪ್​ ಮುಖಾಮುಖಿ ಡಿಕ್ಕಿಯಾಗಿ ಆರು ಮಂದಿ ಮೃತಪಟ್ಟಿರುವ ಘಟನೆ ಉತ್ತರಪ್ರದೇಶದ . ಜೌನ್​ಪುರ ಜಿಲ್ಲೆಯ ಜಲಾಲ್​ಪುರ ​ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇಂದು ಬೆಳ್ಳಂಬೆಳಗ್ಗೆ ಈ ಭೀಕರ ಅಪಘಾತ ಸಂಭವಿಸಿದೆ.

11 ಮಂದಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಂಜಯ್ ಕುಮಾರ್ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಮೃತಪಟ್ಟವರನ್ನು ಅಮರ್ ಬಹದ್ದೂರ್ ಯಾದವ್ (58), ರಾಮ್ ಸಿಂಗಾರ್ ಯಾದವ್ (38), ಮುನ್ನಿಲಾಲ್ (38), ಇಂದ್ರಜಿತ್ ಯಾದವ್ (48), ಕಮಲಾ ಪ್ರಸಾದ್ ಯಾದವ್ (60) ಮತ್ತು ರಾಮ್‌ಕುಮಾರ್ (65) ಎಂದು ಗುರುತಿಸಲಾಗಿದೆ.

ಒಟ್ಟು 17 ಮಂದಿ ಜೀಪಿನಲ್ಲಿದ್ದರು. ಇವರೆಲ್ಲರೂ ವಾರಣಾಸಿಯಲ್ಲಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ವಾಪಸಾಗುತ್ತಿದ್ದರು. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.