More

    ಬೆಂಗಳೂರಿಗೆ ಬೈ ಬೈ: ಜ್ಯೋತಿಷಿಯ ಅಣತಿಯಂತೆ ಚೆನ್ನೈನತ್ತ ಚಿನ್ನಮ್ಮ- ಕುಂಬಳಕಾಯಿ ಸ್ವಾಗತ

    ಬೆಂಗಳೂರು: ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ನಾಲ್ಕು ವರ್ಷಗಳವರೆಗೆ ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿದ್ದು ಕಳೆದ ವಾರ ಬಿಡುಗಡೆಗೊಂಡಿರುವ ಎಐಎಡಿಎಂಕೆಯ ಉಚ್ಛಾಟಿತ ನಾಯಕಿ ವಿ.ಕೆ. ಶಶಿಕಲಾ ಇಂದು ಬೆಳಗ್ಗೆ 7.30ಕ್ಕೆ ಬೆಂಗಳೂರಿನಿಂದ ಚೆನ್ನೈ ಕಡೆ ಮುಖ ಮಾಡಿದ್ದಾರೆ.

    ತಿರುವಣಮಲೈ ದೇವಸ್ಥಾನದ ಪ್ರಖ್ಯಾತ ಜ್ಯೋತಿಷಿಯನ್ನು ಸಂಪರ್ಕಿಸಿದ್ದ ಶಶಿಕಲಾ ಕುಟುಂಬಸ್ಥರು ಚಿನ್ನಮ್ಮನನ್ನು ಯಾವಾಗ ಚೆನ್ನೈಗೆ ಕರೆದುಕೊಂಡು ಬರಬಹುದು ಎಂದು ಕೇಳಿದ್ದರು. ಆಗ ಅವರು ದಿನಾಂಕಗಳನ್ನು ನೀಡಿದ್ದರು. ಫೆ. 8 ಮತ್ತು 11ನೇ ತಾರೀಖು ಸೂಕ್ತವೆಂದು ಹೇಳಿದ್ದರು. ಆದ್ದರಿಂದ ಇಂದು ಶಶಿಕಲಾ ಚೆನ್ನೈಗೆ ತೆರಳುತ್ತಿದ್ದಾರೆ.

    ಕಳೆದೊಂದು ವಾರದಿಂದ ನಗರದ ಪ್ರೆಸ್ಟಿಜ್ ಗಾಲ್ಫ್ ಶೈರ್ ಕ್ಲಬ್ ನಲ್ಲಿ ಕಾಲ ಕಳೆದಿದ್ದ ಶಶಿಕಲಾ ಅತ್ತಿಬೆಲೆ, ಹೊಸೂರು ಮಾರ್ಗವಾಗಿ ಶಶಿಕಲಾ ತಮಿಳುನಾಡನ್ನು ಸೇರಲಿದ್ದಾರೆ. ಅವರನ್ನು ಕರೆದೊಯ್ಯಲು ಖಾಸಗಿ ಎಸ್ಕಾರ್ಟ್​ ಆಗಮಿಸಿದ್ದು, ಎಐಡಿಎಂಕೆ ಬಾವುಟವಿರುವ ಕಾರಿನಲ್ಲಿ ಶಶಿಕಲಾ ತಮಿಳುನಾಡಿನತ್ತ ಹೊರಟಿದ್ದಾರೆ. ಪೊಲೀಸರು ಮತ್ತು ಬೆಂಬಲಿಗರ ಭದ್ರತೆಯಲ್ಲಿ ಇಂದು ಚೆನ್ನೈಗೆ ಪ್ರಯಾಣಿಸಲಿದ್ದಾರೆ.

    ನಂದಿಬೆಟ್ಟದ ಬಳಿ ಇರುವ ರೆಸಾರ್ಟ್​ನಿಂದ ಹೊರಟ ಶಶಿಕಲಾ ಅವರಿಗೆ ಬೆಂಬಲಿಗರು ಕುಂಬಳಕಾಯಿ ಒಡೆದು, ಬೆಂಗಳೂರಿನಿಂದ ಬೀಳ್ಕೊಟ್ಟು, ಚೆನ್ನೈಗೆ ಸ್ವಾಗತಿಸಿದ್ದಾರೆ.

    ಮಾರ್ಗಮಧ್ಯೆ ಸಾವಿರಾರು ಮಂದಿ ಬೆಂಬಲಿಗರು ಸೇರಿದ್ದು, ಶಶಿಕಲಾ ಅವರನ್ನು ವೈಭವದಿಂದ ಸ್ವಾಗತಿಸಲು ಸಿದ್ದತೆ ನಡೆಸಿದ್ದಾರೆ. ಶಶಿಕಲಾ ಬೆಂಬಲಿಗರು ಬೆಂಗಳೂರಿನಲ್ಲಿ ಹಾಕಿದ್ದ ತಮಿಳು ಬ್ಯಾನರ್ ಗಳನ್ನು ಕನ್ನಡ ಪರ ಸಂಘಟನೆ ಕಾರ್ಯಕರ್ತರು ರವಿವಾರ ಕಿತ್ತು ಹಾಕಿದ ಘಟನೆಯೂ ನಡೆದಿತ್ತು.

    ಇಂದು ಬೆಳಗ್ಗೆ 7.30ಕ್ಕೆ ನಂದಿಬೆಟ್ಟದ ಬಳಿ ಇರುವ ರೆಸಾರ್ಟ್​ನಿಂದ ಹೊರಟ ಶಶಿಕಲಾ ಅವರಿಗೆ ಬೆಂಬಲಿಗರು ಕುಂಬಳಕಾಯಿ ಒಡೆದು, ಕುಣಿದು ಕುಪ್ಪಳಿಸಿ ಸ್ವಾಗತ ಕೋರಿದ್ದಾರೆ. ಶಶಿಕಲಾ ಜೊತೆ ಜೈಲು ಸೇರಿದ್ದ ಅವರ ಆಪ್ತೆ ಇಳವರಸಿ ಮತ್ತು ಸಂಬಂಧಿ ಟಿ.ಟಿ ದಿನಕರನ್ ಕೂಡ ಜೈಲಿನಿಂದ ಬಿಡುಗಡೆ ಆಗಿದ್ದು, ಅವರು ಕೂಡ ಚೆನ್ನೈಗೆ ತೆರಳುತ್ತಿದ್ದಾರೆ.

    ರೆಸಾರ್ಟ್ ಬಳಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ವಹಿಸಲಾಗಿದೆ. ನಗರ ವ್ಯಾಪ್ತಿಯಲ್ಲಿ ಮೆರವಣಿಗೆ, ಸಂಭ್ರಮಾಚರಣೆಗೆ ಬ್ರೇಕ್ ಹಾಕಲಾಗಿದೆ. ಶಶಿಕಲಾ ಬೆಂಬಲಿಗರಿಂದ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಸಂಭ್ರಮಾಚರಣೆ ಮಾಡಲು ಪೊಲೀಸರು ಅನುಮತಿ ನೀಡಿಲ್ಲ.

    ಹೊಸೂರಿನಿಂದ 15 ಕಡೆ ಶಶಿಕಲಾರಿಗೆ ಭವ್ಯ ಸ್ವಾಗತಕ್ಕೆ ಸಿದ್ದತೆ ನಡೆಸಲಾಗಿದೆ. ನಿನ್ನೆ ರಾತ್ರಿಯಿಂದಲೇ ರೆಸಾರ್ಟ್ ಬಳಿ ಜಮಾಯಿಸಿದ ಶಶಿಕಲಾ ಬೆಂಬಲಿಗರ ದಂಡು ಕಾರು, ಕ್ಯಾಬ್, ಟಿಟಿಗಳಲ್ಲಿ ತಂಡೋಪತಂಡವಾಗಿ ಆಗಮಿಸಿದ್ದಾರೆ. ಇಂದು ಶಶಿಕಲಾ ಕಾರಿನ ಹಿಂದೆಯೇ ನೂರಾರು ಕಾರುಗಳು ಸಾಗಲಿವೆ. ಎಐಎಡಿಎಂಕೆ ಪಕ್ಷದಿಂದ ಶಶಿಕಲಾ ಅವರನ್ನು ಉಚ್ಛಾಟನೆ ಮಾಡಿದ್ದರೂ ಅವರ ಬೆಂಬಲಿಗರು ಎಐಎಡಿಎಂಕೆ ಪಕ್ಷದ ಬಾವುಟ ಹಿಡಿದು ರೆಸಾರ್ಟ್​ ಹೊರಗೆ ಸ್ವಾಗತ ಕೋರಿದ್ದಾರೆ.

    ಮೊದಲು ಜಯಲಲಿತಾ ಅವರ ಸಮಾಧಿಗೆ ಶಶಿಕಲಾ ನಮಸ್ಕರಿಸಲಿದ್ದಾರೆ. ನಂತರ ತಮಿಳುನಾಡಿನ ಚುನಾವಣೆಗೆ ರಣತಂತ್ರ ರೂಪಿಸಲಿದ್ದಾರೆ ಎನ್ನಲಾಗಿದೆ. ಸದ್ಯ ರಾಜಕೀಯ ವಲಯದಲ್ಲಿ ಇವರ ಮುಂದಿನ ನಡೆಯ ಬಗ್ಗೆ ಭಾರಿ ಚರ್ಚೆ ಶುರುವಾಗಿದೆ.

    ಬಾಹ್ಯಾಕಾಶದಲ್ಲಿ ಘಮಘಮಿಸಲಿದೆ ಮೈಸೂರಿನ ಎಗ್‌ರೋಲ್ಸ್, ವೆಜ್‌ರೋಲ್ಸ್, ಇಡ್ಲಿ, ಹಲ್ವಾ‌…

    ಉತ್ತರಾಖಂಡ: ಹಿಮಸ್ಫೋಟಕ್ಕೆ ಸಿಲುಕಿದವರ ರಕ್ಷಣೆ ಮಾಡುವ ಮೈನವಿರೇಳಿಸುವ ವಿಡಿಯೋ ನೋಡಿ…

    ಪತ್ನಿ, ಲವರ್‌ ಮಧ್ಯೆ ಸಿಲುಕಿ ಹೈರಾಣಾಗಿದ್ದೇನೆ, ಇಬ್ಬರೂ ಬೇಕು… ಏನು ಮಾಡಲಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts