More

    ಬಾಹ್ಯಾಕಾಶದಲ್ಲಿ ಘಮಘಮಿಸಲಿದೆ ಮೈಸೂರಿನ ಎಗ್‌ರೋಲ್ಸ್, ವೆಜ್‌ರೋಲ್ಸ್, ಇಡ್ಲಿ, ಹಲ್ವಾ‌…

    ಮೈಸೂರು: 2022ರಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮೊದಲ ಬಾರಿಗೆ ಮಾನವರನ್ನು ಅಂತರಿಕ್ಷಕ್ಕೆ ಕಳುಹಿಸಲು ಉದ್ದೇಶಿಸಿದೆ. ಭಾರತದ ಚೊಚ್ಚಲ ಗಗನಯಾತ್ರೆಗೆ ನಾಲ್ವರನ್ನು ಆಯ್ಕೆ ಮಾಡಿ ಅವರಿಗೆ ರಷ್ಯಾದಲ್ಲಿ ತರಬೇತಿ ನೀಡಲಾಗಿದೆ.

    2022ರ ಆಗಸ್ಟ್‌ 15ರಂದು ಈ ಯಾನ ನಡೆಯಲಿದೆ. ಯಾತ್ರಿಗಳು 5 ರಿಂದ 7 ದಿನಗಳ ಕಾಲ ಬಾಹ್ಯಾಕಾಶದಲ್ಲಿ ವಾಸ್ತವ್ಯ ಹೂಡಲಿದ್ದು, ಅಧ್ಯಯನಗಳನ್ನು ನಡೆಸಲಿದ್ದಾರೆ.

    ಇವರಿಗೆ ಅಲ್ಲಿಯ ಹವಾಗುಣಕ್ಕೆ ಅನುಗುಣವಾಗುವ ಆಹಾರಗಳ ಅಗತ್ಯವಿದೆ. ಇದೀಗ ಮೈಸೂರಿನಲ್ಲಿ ಇವರ ಆಹಾರದ ಸಿದ್ಧತೆ ನಡೆಸಲಾಗುತ್ತಿದೆ. ಮೈಸೂರು ನಗರದಲ್ಲಿರುವ ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯ (ಡಿಎಫ್‌ಆರ್‌ಎಲ್)ನಲ್ಲಿ ಆಹಾರ ತಯಾರಾಗುತ್ತಿದೆ ಎಂದು ಇಸ್ರೋ ಹೇಳಿದೆ. ಬಾಹ್ಯಾಕಾಶಕ್ಕೆ ಹೊಂದಾಣಿಕೆಯಾಗುವಂತಹ ಆಹಾರವನ್ನು ತಯಾರಿಸಲಾಗಿದ್ದು, ಉಡಾವಣೆಗೆ ಆಹಾರ ಸಜ್ಜಾಗಿ ನಿಂತಿದೆ.

    ಎಗ್‌ರೋಲ್ಸ್, ವೆಜ್‌ರೋಲ್ಸ್, ಇಡ್ಲಿ, ವೆಜ್ ಪಲಾವ್, ಹೆಸರುಬೇಳೆ ಹಲ್ವಾ, ತೆಂಗಿನ ಕಾಯಿ ಚಟ್ನಿ ಸೇರಿದಂತೆ 35 ಬಗೆಯ ಆಹಾರಗಳನ್ನು ತಯಾರಿಸಲಾಗಿದೆ. ಗಗನಯಾತ್ರಿಗಳ ಜತೆಗೆ ಸುಮಾರು 60 ಕೆಜಿಯಷ್ಟು ಆಹಾರ ಹಾಗೂ 100 ಲೀಟರ್ ನೀರು ರವಾನೆಯಾಗಲಿದೆ.

    ಡಿಎಫ್‌ಆರ್‌ಎಲ್‌ನಲ್ಲಿ ಒಟ್ಟು 20 ವಿಜ್ಞಾನಿಗಳು ಗಗನಯಾತ್ರಿಗಳಿಗೆ ಆಹಾರ ತಯಾರಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಈ ಆಹಾರಗಳನ್ನು ಬಿಸಿ ಮಾಡಿಕೊಳ್ಳಲು ಹೀಟರ್‌ಗಳನ್ನು ಕೂಡ ಇಸ್ರೋ ಬಾಹ್ಯಾಕಾಶಕ್ಕೆ ರವಾನಿಸುತ್ತಿದೆ. ಈಗಾಗಲೇ ನಾಲ್ವರು ಗಗನಯಾತ್ರಿಗಳನ್ನು ಇಸ್ರೋ ಆಯ್ಕೆ ಮಾಡಿದ್ದು, ಜನವರಿ ಮೂರನೇ ವಾರದಿಂದ ರಷ್ಯಾದಲ್ಲಿ ಅವರಿಗೆ ತರಬೇತಿ ಪ್ರಾರಂಭವಾಗಿದೆ.

    ಶೂನ್ಯ ಗುರುತ್ವವಿರುವ ಬಾಹ್ಯಾಕಾಶದಲ್ಲಿ ದ್ರವ ಪದಾರ್ಥಗಳನ್ನು ಸೇವಿಸಲು ಅನುಕೂಲವಾಗುವಂತೆ ನೀರು ಮತ್ತು ಜ್ಯೂಸ್ ನಂತಹ ಪಾಕೆಟ್‌ಗಳನ್ನು ಸಹ ತಯಾರಿಸಲಾಗಿದೆ. ಇದಕ್ಕಾಗಿ ವಿಶೇಷ ಕಂಟೈನರ್‌ಗಳನ್ನು ಸಿದ್ಧಪಡಿಸಲಾಗುತ್ತದೆ.
    ಅಮೆರಿಕದ ಗಗನಯಾತ್ರಿಗಳಿಗೆ ನೀಡಿದ ಗುಣಮಟ್ಟದಷ್ಟೇ ಆಹಾರ ಹಾಗೂ ಅತ್ಯುತ್ತಮ ದರ್ಜೆಯ ಪ್ಯಾಕಿಂಗ್ ತಯಾರಿಸಲು ಡಿಎಫ್‌ಆರ್‌ಎಲ್ ಶ್ರಮಿಸುತ್ತಿದೆ.

    ಗಗನ ಯಾತ್ರಿಗಳು ಭೂಮಿಗೆ ಹಿಂದಿರುಗುವ ದಿನ ಬಂದಾಗ ಅವರು ಕುಳಿತ ಕ್ಯಾಪ್ಸೂಲ್ ಮುಖ್ಯ ಸೇವಾ ಘಟಕದಿಂದ ಭೂಮಿಗೆ 120 ಕಿ. ಮೀ. ಇರುವಾಗಲೇ ಬೇರ್ಪಡಲಿದೆ. ಆಗ ಪ್ಯಾರಾಚೂಟ್ ಕಟ್ಟಿಕೊಂಡು ಗಗನಯಾತ್ರಿಗಳು ಹೊರಕ್ಕೆ ಜಿಗಿದು ಭೂಮಿಗೆ ಮರಳುತ್ತಾರೆ. ಖಾಲಿ ಕ್ಯಾಪ್ಸೂಲ್ ಗುಜರಾತ್ ಬಳಿ ಅರಬ್ಬಿ ಸಮುದ್ರಕ್ಕೆ ಬೀಳಲಿದೆ.

    ಉತ್ತರಾಖಂಡ: ಹಿಮಸ್ಫೋಟಕ್ಕೆ ಸಿಲುಕಿದವರ ರಕ್ಷಣೆ ಮಾಡುವ ಮೈನವಿರೇಳಿಸುವ ವಿಡಿಯೋ ನೋಡಿ…

    ಈ ಮನೆಯ ಅಳತೆ ಕೇವಲ ಐದಡಿ ಆರಿಂಚು- ಬೆಲೆ ಕೇಳಿದ್ರೆ ನಿಮ್ಮೆದೆ ಧಸಕ್​ ಎನ್ನೋದು ದಿಟ!

    ಗೌರಿ, ಕಲ್ಬುರ್ಗಿಯಂತೆ ನನ್ನ ಹತ್ಯೆ: ವಕೀಲೆಯಿಂದ ಮುಖಕ್ಕೆ ಮಸಿ ಬಳಿಸಿಕೊಂಡ ಭಗವಾನ್​ ಆರೋಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts