ನ್ಯೂಸ್

ಮುಂದಿನ ತಿಂಗಳು ಭಾರತದಲ್ಲಿ ಐದು ಲಕ್ಷ ಕರೊನಾ ಕೇಸ್‌! ಆಘಾತಕಾರಿ ಮಾಹಿತಿ ನೀಡಿದ ಆರೋಗ್ಯ ತಜ್ಞ

ನವದೆಹಲಿ: ಕರೊನಾ, ಒಮಿಕ್ರಾನ್‌ ನಡುವೆಯೇ ಇದೀಗ ಕೆಲವು ದೇಶಗಳಲ್ಲಿ ಭಿನ್ನ ವಿಭಿನ್ನ ಎನಿಸುವ ವೈರಸ್‌ಗಳು ಪತ್ತೆಯಾಗುತ್ತಿವೆ. ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಕೂಡ ಕರೊನಾ ಭಾರಿ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದೆ. ಈ ಕರೊನಾಕ್ಕೆ ಕೊನೆ ಎಂದು ಎಂಬ ಬಗ್ಗೆ ಎಲ್ಲರೂ ಚಿಂತೆಯಲ್ಲಿ ಇರುವಾಗಲೇ ತಜ್ಞರೊಬ್ಬರು ಆಘಾತಕಾರಿ ಮಾಹಿತಿ ನೀಡಿದ್ದಾರೆ.

ಆರೋಗ್ಯ ಮೆಟ್ರಿಕ್ಸ್ ಮತ್ತು ಮೌಲ್ಯಮಾಪನ ಸಂಸ್ಥೆಯ ನಿರ್ದೇಶಕ ಡಾ. ಕ್ರಿಸ್ಟೋಫರ್ ಮುರ್ರೆ ಈ ಒಂದು ಶಾಕಿಂಗ್‌ ಸುದ್ದಿ ಕೊಟ್ಟಿದ್ದಾರೆ. ಅವರು ಹೇಳಿಕೆ ಪ್ರಕಾರ, ಭಾರತದಲ್ಲಿ ಮುಂದಿನ ತಿಂಗಳಲ್ಲಿ ಗರಿಷ್ಠ 5 ಲಕ್ಷ ಕೋವಿಡ್‌ ಪ್ರಕರಣಗಳು ದಾಖಲಾಗಬಹುದು. ಈಗಿರುವ ಪರಿಸ್ಥಿತಿಯನ್ನು ಅವಲೋಕಿಸಿದರೆ ಮುಂದಿನ ತಿಂಗಳಿನಲ್ಲಿ ಇವುಗಳ ಸಂಖ್ಯೆ ವಿಪರೀತಕ್ಕೆ ಹೋಗಬಹುದು ಎಂದಿದ್ದಾರೆ ಅವರು.

ಇದೇ ವೇಳೆ ಒಮಿಕ್ರಾನ್ ಬಗ್ಗೆಯೂ ಮಾತನಾಡಿರುವ ಡಾ.ಕ್ರಿಸ್ಟೋಫರ್‌, ಒಮಿಕ್ರಾನ್‌ ಕರೊನಾಗೆ ಹೋಲಿಸಿದರೆ ಕಡಿಮೆ ಗಂಭೀರತೆ ಹೊಂದಿದೆ ಹಾಗೂ ಕಡಿಮೆ ಸಂಖ್ಯೆಯಲ್ಲಿ ಜನ ಆಸ್ಪತ್ರೆಗೆ ದಾಖಲಾಗುತ್ತಾರೆ ಎಂದಿದ್ದಾರೆ.