More

    VIDEO: ಆಹಾರಗಳ ಮೇಲಾಯ್ತು- ತಲೆಯ ಮೇಲೂ ಉಗುಳಿದ ಸುಪ್ರಸಿದ್ಧ ಕೇಶ ವಿನ್ಯಾಸಕಾರ! ಎಲ್ಲೆಡೆ ಭಾರಿ ಆಕ್ರೋಶ

    ನವದೆಹಲಿ: ಸುಪ್ರಸಿದ್ಧ ಕೇಶ ವಿನ್ಯಾಸಕಾರನೊಬ್ಬ ಮಹಿಳೆಯೊಬ್ಬರ ಕೇಶವನ್ನು ವಿನ್ಯಾಸಗೊಳಿಸುವಾಗ ನೀರಿನ ಬದಲು ಎಂಜಲು ಉಗಿದಿದ್ದು, ಇದರ ವಿಡಿಯೋ ವೈರಲ್‌ ಆಗಿದೆ. ‘ಹಲಾಲ್‌‘ ಹೆಸರಿನಲ್ಲಿ ಇದಾಗಲೇ ಕೆಲವೆಡೆ ಆಹಾರದ ಮೇಲೆ ಎಂಜಲು ಉಗುಳುತ್ತಿರುವ ವಿಡಿಯೋ ವೈರಲ್‌ ಆಗುತ್ತಿವೆ. ಕೇರಳ ಸೇರಿದಂತೆ ಹಲವೆಡೆಗಳಲ್ಲಿ ಇದರ ಚರ್ಚೆ ಇನ್ನೂ ನಡೆಯುತ್ತಿರುವಾಗಲೇ ಸುಪ್ರಸಿದ್ಧ ಕೇಶವಿನ್ಯಾಸಕಾರ ಜಾವೇದ್ ಹಬೀಬ್ ಮಾಡಿರುವ ಈ ಕಾರ್ಯಕ್ಕೆ ನೆಟ್ಟಿಗರು ಛೀಮಾರಿ ಹಾಕುತ್ತಿದ್ದಾರೆ.

    ಮುಜಾಫರ್‌ನಗರದ ಕಿಂಗ್ ವಿಲ್ಲಾ ಹೋಟೆಲ್‌ನಲ್ಲಿ ಕೂದಲ ರಕ್ಷಣೆಯ ಕುರಿತು ಖಾಸಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು, ಇದರಲ್ಲಿ ಮುಖ್ಯ ಅತಿಥಿಯಾಗಿ ಈತನನ್ನು ಆಹ್ವಾನಿಸಲಾಗಿತ್ತು. ಆ ಸಂದರ್ಭದಲ್ಲಿ ಮಹಿಳೆಯೊಬ್ಬರಿಗೆ ಈತ ಕೇಶ ವಿನ್ಯಾಸ ಮಾಡುತ್ತಿದ್ದ. ಕೇಶ ವಿನ್ಯಾಸ ಮಾಡುವಾಗ ಸ್ಪ್ರೇ ಮಾಡಲು ನೀರಿನ ಅವಶ್ಯಕತೆ ಇತ್ತು. ಆದರೆ ಅಲ್ಲಿ ನೀರು ಇರದ ಹಿನ್ನೆಲೆಯಲ್ಲಿ ಮಹಿಳೆಯ ತಲೆಯ ಮೇಲೆ ಎಂಜಲು ಉಗಿದಿದ್ದಾನೆ.

    ಇದರ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಈತ ಕ್ಷಮೆ ಕೋರಿದ್ದಾನೆ. ಆದರೆ ಈತನ ವಿರುದ್ಧ ಮನ್ಸೂರ್‌ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಭಾರತೀಯ ದಂಡ ಸಂಹಿತೆ, ಸಾಂಕ್ರಾಮಿಕ ಕಾಯ್ದೆ ಸೇರಿದಂತೆ ವಿವಿಧ ಕಲಮುಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.

    ಹೀಗೆ ಎಂಜಲು ಉಗುಳುವಾಗ ಸ್ವಲ್ಪವೂ ಮುಜುಗರ ಪಟ್ಟುಕೊಳ್ಳದೇ ತನ್ನ ಹೇರ್‌ಸ್ಟೈಲ್‌ ಪರಿಯನ್ನು ವರ್ಣಿಸುತ್ತಿರುವ ಜಾವೇದ‌, ‘ನೀರಿಲ್ಲದಿದ್ದರೆ ಎಂಜಲು ಉಗುಳಬಹುದು’ ಎಂದೂ ಹೇಳಿದ್ದಾನೆ. ಹೇಳುವುದನ್ನು ಕೇಳಬಹುದು. ಈ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮಹಿಳೆ, ‘ಜಾವೇದ್ ಹಬೀಬ್‌ನಂತ ಪ್ರಖ್ಯಾತ ತಾರೆಯ ಬಳಿ ಹೇರ್‌ಕಟ್‌ ಮಾಡಿಸಿಕೊಳ್ಳುವುದು ಎಂದು ತುಂಬಾ ಸಂತೋಷ ಪಟ್ಟಿದ್ದೆ. ಇಷ್ಟು ನೀಚ ಕಾರ್ಯ ಆತ ಮಾಡುತ್ತಾನೆ ಎಂದು ಅಂದುಕೊಂಡಿರಲಿಲ್ಲ. ಇಂಥ ಅನುಚಿತ ವರ್ತನೆ ನನಗೆ ಬೇಸರ ತರಸಿದೆ. ನಿಮ್ಮ ಬಳಿ ನೀರಿಲ್ಲದಿದ್ದರೆ, ಕೂದಲು ಕತ್ತರಿಸಲು ನೀವು ಉಗುಳನ್ನು ಸಹ ಬಳಸಬಹುದು ಎಂದಾಗ ನನಗೆ ಗಾಬರಿಯಾಯಿತು. ಇದೊಂದು ಅಸಹ್ಯ ಕೃತ್ಯ’ ಎಂದಿದ್ದಾರೆ.

    ರಾಷ್ಟ್ರೀಯ ಮಹಿಳಾ ಆಯೋಗವೂ ಘಟನೆಯ ಬಗ್ಗೆ ಗಮನಹರಿಸಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಜಾವೇದ್‌, ಇದು ಜೋಕ್‌ಗಾಗಿ ಮಾಡಿದ್ದೆ. ಯಾರಿಗಾದರೂ ಬೇಸರವಾಗಿದ್ದರೆ, ನೋವಾಗಿದ್ದರೆ ಹೃದಯದಿಂದ ಕ್ಷಮೆ ಕೇಳುತ್ತೇನೆ’ ಎಂದಿದ್ದಾನೆ!

    ಇಲ್ಲಿದೆ ನೋಡಿ ವಿಡಿಯೋ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts