ನ್ಯೂಸ್

10 ಸೆಕೆಂಡ್​ ಈ ವಿಡಿಯೋ ಬೆಲೆ ₹48 ಕೋಟಿ! ಇದರಲ್ಲಿರೋದು ಮಲಗಿರುವ ಟ್ರಂಪ್- ನೀವೂ ನೋಡಿ...

suchetana

ವಾಷಿಂಗ್ಟನ್​: ಯುವಕನೊಬ್ಬ ತಯಾರು ಮಾಡಿರುವ ವಿಡಿಯೋ ಒಂದು 48 ಕೋಟಿ ರೂಪಾಯಿಗೆ ಮಾರಾಟವಾಗಿದೆ. ಅದರಲ್ಲೇನು ವಿಶೇಷ ಎಂದುಕೊಂಡ್ರಾ? ಈ ವಿಡಿಯೋ ಇರುವುದು ಕೇವಲ ಹತ್ತೇ ಹತ್ತು ಸೆಕೆಂಡ್​! ಆ ಹತ್ತು ಸೆಕೆಂಡ್​ನಲ್ಲಿ ಇರುವುದು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​!

ಮಿಯಾಮಿಯ ನಿವಾಸಿ ಪಬ್ಲೊ ರೋಡ್ರಿಗಸ್ ಫ್ರೈಲ್​ ಎಂಬ ಯುವಕ ಈ ವಿಡಿಯೋ ತಯಾರಿಸಿದ್ದರು. ಇದಕ್ಕೆ ಆತ ಖರ್ಚು ಮಾಡಿರುವ ಹಣ 67 ಸಾವಿರ ಡಾಲರ್. ರೂಪಾಯಿ ಲೆಕ್ಕದಲ್ಲಿ ಹೇಳುವುದಾದರೆ ಸುಮಾರು 49.23 ಲಕ್ಷ ರೂಪಾಯಿ. ಆದರೆ ಈ ವಿಡಿಯೋ ಇದೀಗ ಮಾರಾಟ ಆಗಿರುವುದು 6.6 ಮಿಲಿಯನ್​ ಡಾಲರ್​ಗೆ ಅಮದರೆ ಸುಮಾರು 48.47 ಕೋಟಿ ರೂಪಾಯಿಗೆ!

ಸದ್ಯ ಇಡೀ ಜಗತ್ತಿನಾದ್ಯಂತ ಈ ವಿಡಿಯೋ ಭಾರಿ ಸದ್ದು ಮಾಡುತ್ತಿದೆ. ಅಷ್ಟಕ್ಕೂ ಈ ವಿಡಿಯೋದಲ್ಲಿ ಇರುವುದು ಮೊದಲೇ ಹೇಳಿದಂತೆ ಟ್ರಂಪ್​. ಈ ವಿಡಿಯೋದಲ್ಲಿ ಟ್ರಂಪ್​ ಮಲಗಿಕೊಂಡಿದ್ದಾರೆ. ಅವರ ಶರೀರದ ಮೇಲೆ ಹಲವಾರು ಸಂದೇಶಗಳನ್ನು ಬರೆಯಲಾಗಿದೆ.

ಲೂಸರ್​, ಶಿಟ್​... ಇತ್ಯಾದಿ ಬರಹಗಳು ಅವರ ಮೈಮೇಲೆ ಬಂದಿದೆ. ಜನ ಅತ್ತಿಂದಿತ್ತ ಇತ್ತಿಂದತ್ತ ತಿರುಗುತ್ತಿರುವುದು ಕೂಡ ಈ ವಿಡಿಯೋದಲ್ಲಿ ನೋಡಬಹುದು.

ವರದಿಯ ಪ್ರಕಾರ ಈ ಡಿಜಿಟಲ್ ವಿಡಿಯೋ ಖರೀದಿಸಲು ಮೊದಲ ಸಲ ಕ್ರಿಪ್ಟೋಕರೆನ್ಸಿ ಬಳಸಲಾಗಿದೆ. ಈ ವಿಡಿಯೋದಲ್ಲೊಂದು ಡಿಜಿಟಲ್ ಹಸ್ತಾಕ್ಷರವಿದೆ. ಈ ಡಿಜಿಟಲ್ ವಿಡಿಯೋದಲ್ಲಿ ಮೊದಲ ಸಲ ನಾನ್ ಪಂಜಿಬಲ್ ಟೋಕನ್ (ಎನ್​ಎಫ್​ಟಿ) ಬಳಕೆಯಾಗಿದೆ.

ನೀವೂ ನೋಡಿ ಈ ವಿಡಿಯೋ... (ಕೃಪೆ ರೈಟರ್ಸ್​)