ನಾಗರಕೋಯಿಲ್: ತಮಿಳುನಾಡಿನ ನಟೋರಿಯಸ್ ಕ್ರಿಮಿನಲ್ ರೋಮಿಯೋ ಕಾಶಿಗೆ ಮಹಿಳಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ರೋಮಿಯೋ ಕಾಶಿಗೆ ಕೇವಲ 29 ವರ್ಷ. ಮಹಿಳೆಯರ ಜತೆ ದೈಹಿಕ ಸಂಬಂಧ ಹೊಂದುತ್ತಿದ್ದ ಆರೋಪಿ, ಅವರಿಗೆ ಗೊತ್ತಿಲ್ಲದ ಹಾಗೇ ವಿಡಿಯೋ ರೆಕಾರ್ಡ್ ಮಾಡಿಕೊಂಡು ಹಣಕ್ಕಾಗಿ ಬೆದರಿಕೆ ಹಾಕುತ್ತಿದ್ದ ಆರೋಪವಿದೆ.
ಇತ್ತೀಚೆಗೆ ವೈದ್ಯೆಯೊಬ್ಬರು ಕಾಶಿ ವಿರುದ್ಧ ದೂರು ನೀಡಿದ್ದರು. ಈ ಪ್ರಕರಣದ ತನಿಖೆಯ ವೇಳೆ ಕಾಶಿಯ ಅಸಲಿ ಮುಖವಾಡ ಕಳಚಿ ಬಿದ್ದಿದೆ. ಈ ಪ್ರಕರಣದಲ್ಲಿ ಕಾಶಿಯ ತಂದೆ ಥಂಕಪಾಂಡಿಯನ್ ಮತ್ತು ಸ್ನೇಹಿತರಾದ ಜಿನೋ ಮತ್ತು ದಿನೇಶ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಗೂಂಡಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆರೋಪಿ ರೋಮಿಯೋ ಕಾಶಿ ವಿರುದ್ಧ ಪೊಲೀಸರಿಗೆ ದೂರು ನೀಡಲು ಹಲವಾರು ಮಹಿಳೆಯರು ಮಂದೆ ಬಂದ ಬಳಿಕ ಪ್ರಕರಣ ವೇಗ ಪಡೆದುಕೊಂಡಿತು. ತನಿಖೆಯ ಭಾಗವಾಗಿ ಕಾಶಿಯ ಲ್ಯಾಪ್ಟಾಪ್ ಓಪನ್ ಮಾಡಿದಾಗ 400 ಸೆಕ್ಸ್ ವಿಡಿಯೋಗಳು ಮತ್ತು ಸಂತ್ರಸ್ತೆಯ 1900 ಫೋಟೋಗಳು ಪತ್ತೆಯಾಗಿವೆ.
ಮೃದುವಾದ ಅಥವಾ ಅಮಾಯಕ ನೋಟ ಮತ್ತು ತೋರಿಕೆಯಲ್ಲಿ ನಿಜವಾದ ಪ್ರಾಮಾಣಿಕತೆಯನ್ನು ನಂಬಿ ಕಾಶಿ ಬಲೆಗೆ ಅನೇಕ ಹೆಣ್ಣು ಮಕ್ಕಳು ಬಿದ್ದು, ಹಣ ಜೊತೆಗೆ ಮಾನವನ್ನು ಕಳೆದುಕೊಂಡಿದ್ದಾರೆ. ಜೀವಾವಧಿ ಶಿಕ್ಷೆಯ ಜೊತೆಗೆ ಕಾಶಿ 1 ಲಕ್ಷ ರೂ. ದಂಡವನ್ನು ಕಟ್ಟಬೇಕಿದೆ. (ಏಜೆನ್ಸೀಸ್)