ನ್ಯೂಸ್

ರಸ್ತೆ ಅಗಲೀಕರಣಕ್ಕಾಗಿ ಪುರಾತನ ಆಂಜನೇಯ ಸ್ವಾಮಿ ದೇಗುಲ ತೆರವು

ಕೋಲಾರ: ರಸ್ತೆ ಅಗಲೀಕರಣಕ್ಕಾಗಿ ಕುರುಬರಪೇಟೆ ಮುಖ್ಯರಸ್ತೆಯಲ್ಲಿರುವ ಆಂಜನೇಯಸ್ವಾಮಿ ದೇವಸ್ಥಾನವನ್ನು ಇಂದು ತೆರವುಗೊಳಿಸಲಾಯಿತು. ಸ್ಥಳೀಯರು ವಿರೋಧಿಸಿದರೂ, ಪೊಲೀಸ್​ ಬಿಗಿ ಬಂದೋಬಸ್ತ್​ನಲ್ಲಿ ದೇವಸ್ಥಾನವನ್ನು ಒಡೆಯಲಾಗಿದೆ.

ಕೋಲಾರದ ಮೆಕ್ಕೆವೃತ್ತದಿಂದ ಹಿಡಿದು, ಬಂಗಾರಪೇಟೆ ರಸ್ತೆವರೆಗೂ ಅಗಲೀಕರಣ ಕಾರ್ಯ ನಡೆಯುತ್ತಿದೆ. ಹಾಗಾಗಿ ರಸ್ತೆ ಬದಿಯಲ್ಲಿದ್ದ ಪುರಾತನ ಆಂಜನೇಯಸ್ವಾಮಿ ದೇವಾಲಯ ತೆರವು ಮಾಡಲಾಗಿದೆ.  ಇದನ್ನೂ ಓದಿ: Photos: ಗೋಶಾಲೆಗೆ ಭೇಟಿ ಕೊಟ್ಟು ಕರುಗಳಿಗೆ ನಾಮಕರಣ ಮಾಡಿ ಬಂದ ಸಂಯುಕ್ತಾ

ಸಾರ್ವಜನಿಕರು ವಿರೋಧ ಮಾಡಿದ ಹಿನ್ನೆಲೆಯಲ್ಲಿ ನಗರಸಭೆ ಬೆಳ್ಳಂಬೆಳಗ್ಗೆಯೇ ಕಾರ್ಯಾಚರಣೆ ನಡೆಸಿದೆ. ಮೊದಲು ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಮೂಲ ವಿಗ್ರಹವನ್ನು ಸ್ಥಳಾಂತರಗೊಳಿಸಲಾಯಿತು. ಅದಾದ ಬಳಿಕವಷ್ಟೇ ಗೋಡೆಗಳನ್ನೆಲ್ಲ ಜೆಸಿಬಿ ಮೂಲಕ ತೆರವುಗೊಳಿಸಲಾಗಿದೆ.