ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಗೆಳತಿ ರಿಯಾ ಚಕ್ರವರ್ತಿಗೆ ಸಿಬಿಐ ಜತೆಗೆ ಜಾರಿ ನಿರ್ದೇಶನಾಲಯ (ಎನ್ಫೋರ್ಸ್ಮೆಂಟ್ ಡೈರೆಕ್ಟರೇಟ್- ಇ.ಡಿ. ) ಉರುಳು ಕೂಡ ಸುತ್ತಿಕೊಂಡಿದೆ.
ವಿಚಾರಣೆಗೆ ಹಾಜರಾಗಲು ಸಮಯಾವಕಾಶ ಕೋರಿ ಸಲ್ಲಿಸಿದ್ದ ಮನವಿಗೆ ಪುರಸ್ಕಾರ ದೊರೆಯದ ಕಾರಣ ರಿಯಾ ಶುಕ್ರವಾರ ಇ.ಡಿ. ಕಚೇರಿಗೆ ಹಾಜರಾದರು. ಆಗ ಅವರು ಆಗಮಿಸಿದ್ದು, ಯಾರ ಕಾರಿನಲ್ಲಿ ಎಂಬುದು ಕುತೂಹಲ ಕೆರಳಿಸಿತ್ತು.
ತನಿಖೆ ಬಳಿಕ ಗೊತ್ತಾಗಿದ್ದೇನೆಂದರೆ, ಹೋಟೆಲ್ ಉದ್ಯಮಿ ಸುವೇದ್ ಎಂಬುವರಿಗೆ ಫೋರ್ಡ್ ಎಂಡಿವರ್ ಕಾರಾಗಿತ್ತು. ಈತ ಸುಶಾಂತ್ ಜತೆಯಲ್ಲಿ ಚಿತ್ರವೊಂದರಲ್ಲಿ ನಟಿಸಿದ್ದ. ಬಾಲಿವುಡ್ನ ಹಲವು ಕಲಾವಿದರೊಂದಿಗೆ ಗೆಳೆತನ ಹೊಂದಿದ್ದಾನೆ.
ಇ.ಡಿ ವಿಚಾರಣೆಯಲ್ಲಿ ಮುಖ್ಯವಾಗಿ ರಿಯಾ ಚಕ್ರವರ್ತಿ ಮುಂಬೈನಲ್ಲಿ ಖರೀದಿಸಿದ ಎರಡು ಐಷಾರಾಮಿ ಫ್ಲ್ಯಾಟ್ಗಳ ಬಗ್ಗೆ ಮಾಹಿತ ಕಲೆ ಹಾಕಲಾಗುತ್ತಿದೆ ಎನ್ನಲಾಗಿದೆ. ಈ ಪೈಕಿ ಒಂದು ಫ್ಲ್ಯಾಟ್ ಮುಂಬೈನ ಖಾರ್ ಪ್ರದೇಶದಲ್ಲಿದೆ ಎಂದು ಹೇಳಲಾಗಿದೆ. ಫ್ಲ್ಯಾಟ್ ಖರೀದಿಸಲು ಈಕೆ ಸುಶಾಂತ್ನಿಮದ ಹಣ ಪಡೆದಿದ್ದಳೇ ಎಂಬುದು ಗೊತ್ತಾಗಬೇಕಿದೆ.
ಇದನ್ನೂ ಓದಿ; ಎರಡು ಮದುವೆಗಳಿಂದ 1.5 ಕೋಟಿ ರೂ. ಕಮಾಯಿ; ಮೂರನೇ ಮದುವೆಯಾಗಿ ವಿದೇಶಕ್ಕೆ ಹಾರಬೇಕಿದ್ದ ವಧುವಿಗೆ ಕೈಕೊಟ್ಟಿದ್ದೇನು?
ಇದಲ್ಲದೇ. ತನ್ನ ಬ್ಯಾಂಕ್ ಖಾತೆ ಹಾಗೂ ಹಣಕಾಸಿನ ವಹಿವಾಟಿನ ಬಗ್ಗೆಯೂ ಕೂಡ ಜಾರಿ ನಿರ್ದೇಶನಾಲಯಕ್ಕೆ ಮಾಹಿತಿ ನೀಡಬೇಕಿದೆ. ಸುಶಾಂತ್ ಸಿಂಗ್ಗೆ ಸೇರಿದ 15 ಕೋಟಿ ರೂ.ಗೂ ಹೆಚ್ಚು ಮೊತ್ತದ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾಳೆ ಎಂದು ಸುಶಾಂತ್ ತಂದೆ ಕೆ.ಕೆ. ಸಿಂಗ್ ಆರೋಪ ಮಾಡಿ ರಿಯಾ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಕಾರಣಕ್ಕೆ ಇಡಿ ಇದರ ವಿಚಾರಣೆಯನ್ನು ಕೈಗೆತ್ತಿಕೊಂಡಿದೆ.