ನವದೆಹಲಿ: ರಿಲಯನ್ಸ್ ಫೌಂಡೇಷನ್ ಅಧ್ಯಕ್ಷೆ ನೀತಾ ಅಂಬಾನಿ ಇಂದು ಬನಾರಸಿ ಬ್ರೊಕೇಡ್ ಸೀರೆಯಲ್ಲಿ ಮಿಂಚಿದ್ದಾರೆ. ನವದೆಹಲಿಯಲ್ಲಿ ಇಂದು ನಡೆದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ 46ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅವರು ಹೀಗೆ ವಿಶಿಷ್ಟವಾದ ಸೀರೆಯಲ್ಲಿ ಕಾಣಿಸಿಕೊಂಡರು.
ಆರ್ಐಎಲ್ನ 46ನೇ ಎಜಿಎಂನಲ್ಲಿ ರಿಲಯನ್ಸ್ ಕುಟುಂಬವನ್ನು ಉದ್ದೇಶಿಸಿ ವರ್ಚುವಲ್ ಆಗಿ ಮಾತನಾಡಿದರು, ಅಲ್ಲಿ ಅವರು ಎನ್ಎಂಎಸಿಸಿ ಪ್ರಾರಂಭ ಮತ್ತು ರಿಲಯನ್ಸ್ ಫೌಂಡೇಷನ್ ಕಾರ್ಯಗಳ ಕುರಿತು ಪ್ರಸ್ತಾಪಿಸಿದರು.
ನುರಿತ ಕುಶಲಕರ್ಮಿ ಇಕ್ಬಾಲ್ ಅಹ್ಮದ್ ಎಂಬವರು ಕೈಯಿಂದ ನೇಯ್ದ ಈ ಬನಾರಸಿ ಬ್ರೊಕೇಡ್ ಸೀರೆಯಲ್ಲಿ ನೀತಾ ಅಂಬಾನಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಈ ಸೊಗಸಾದ ಲ್ಯಾವೆಂಡರ್ ನೇಯ್ಗೆಯ ಈ ಸೀರೆ ವಾರಣಾಸಿಯ ಶತಮಾನಗಳಷ್ಟು ಹಳೆಯ ಕರಕುಶಲತೆಯ ಪ್ರತೀಕವಾಗಿ. ಇದರ ಸಂಕೀರ್ಣ ವಿನ್ಯಾಸವು ಬರ್ಫಿ ಬೂಟಿ, ಕೊನಿಯಾ ಪೈಸ್ಲೆ ಮೋಟಿಫ್ಗಳು ಮತ್ತು ಸಾಂಪ್ರದಾಯಿಕ ಜರಿ ಭಾರತೀಯ ಕಲಾತ್ಮಕತೆಯ ವೈವಿಧ್ಯತೆಯನ್ನು ಪ್ರತಿಬಿಂಬಿಸುತ್ತದೆ.
ಭಾರತದ ಸಾಂಪ್ರದಾಯಿಕ ಕಲೆಗಳು ಮತ್ತು ಕರಕುಶಲ ವಸ್ತುಗಳನ್ನು ಸಂರಕ್ಷಿಸುವ ಮತ್ತು ಉತ್ತೇಜಿಸುವ ನಮ್ಮ ವಿನಮ್ರ ಉಪಕ್ರಮವಾದ ರಿಲಯನ್ಸ್ ಫೌಂಡೇಷನ್ನ ಸ್ವದೇಶ್ ಬೆಂಬಲಿತ ಅನೇಕ ಪ್ರಾದೇಶಿಕ ಕಲಾ ಪ್ರಕಾರಗಳಲ್ಲಿ ಬನಾರಸಿ ನೇಯ್ಗೆಯೂ ಒಂದಾಗಿದೆ ಎಂದು ಅವರು ತಿಳಿಸಿದರು. ಸಾಂಪ್ರದಾಯಿಕ ಕುಶಲಕರ್ಮಿಗಳಿಗೆ ಮತ್ತು ಅವರು ತಲೆಮಾರುಗಳಿಂದ ಮುಂದುವರಿಸಿಕೊಂಡು ಬಂದ ಪರಂಪರೆಗೆ ತಮ್ಮ ಇತ್ತೀಚಿನ ಪ್ರದರ್ಶನಗಳ ಮೂಲಕ ನೀತಾ ಅಂಬಾನಿ ಗೌರವ ಸಲ್ಲಿಸಿದ್ದಾರೆ.