ನ್ಯೂಸ್

ರೌಡಿಶೀಟರ್​ ಜತೆ ಸಂಬಂಧ! ಪತಿ-ಮಕ್ಕಳು ಬಿಟ್ಟು ಹೋಗಲು ಸಿದ್ಧ: ಕೊನೆಗೂ ಗಂಡ ಮಾಡಿದ್ದೇನು? | Relationship

ತಮಿಳುನಾಡು: ರೌಡಿಶೀಟರ್​ ಜತೆ ಪತ್ನಿ ಸಂಬಂಧ(Relationship) ಹೊಂದಿದ್ದಾಳೆ ಎಂದು ಆಕೆಯ ಪತಿಯೇ ಆಕೆಯನ್ನು ಹತ್ಯೆ ಮಾಡಿದ ಘಟನೆ ತಮಿಳುನಾಡಿನ ತಿರುವಲ್ಲೂರು ಜಿಲ್ಲೆಯಲ್ಲಿ ಶನಿವಾರ ನಡೆದಿದೆ.

ತಿರುನಲ್ವೇಲಿ ಪೆದ್ದ ಕಾಲೋನಿಯ ಕೋಮತಿ (28) ಮೃತೆ. ಈಕೆ ತಿರುನಲ್ವೇಲಿ 26ನೇ ವಾರ್ಡ್​ನ ಪುರಸಭೆ ಕಾರ್ಪೋರೇಟರ್​​ ಆಗಿದ್ದರು. ಅಲ್ಲದೆ, ಕೊಲೆಗೈದ ಆರೋಪಿ ಪತಿ ಸ್ಟೀಫನ್​ ರಾಜ್​(38) ಕೂಡ ಪುರಸಭೆಯ ಕಾರ್ಯದರ್ಶಿಯಾಗಿದ್ದಾರೆ. ಆರೋಪಿ ಸ್ಟೀಫನ್​ ರಾಜ್​ ಮತ್ತು ಈತನ ತಾಯಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್​ಸ್ಟಾಗ್ರಾಮ್​ನಲ್ಲಿ ರೌಡಿಶೀಟರ್​ ಪರಿಚಯ

ಕೋಮತಿ ಮತ್ತು ಸ್ಟೀಫನ್​ರಾಜ್​ 2015ರಲ್ಲಿ ಲವ್​ ಮ್ಯಾರೇಜ್​ ಆಗಿದ್ದಾರೆ. ಇಬ್ಬರು ಗಂಡು ಮಕ್ಕಳು ಕೂಡ ಇದ್ದಾರೆ. ಕೋಮತಿಗೆ ಕೆಲ ದಿನಗಳಿಂದೆ ಇಲ್ಲಿನ ರಾಮದಾಸಪುರಂನ ರೌಡಿಶೀಟರ್​ ಮೋಸಸ್ದೇವ ಜತೆ ಇನ್​ಸ್ಟಾಗ್ರಾಮ್​ನಲ್ಲಿ ಪರಿಚಯವಾಗಿದೆ. ಇದು ಆಕ್ರಮ ಸಂಬಂಧಕ್ಕೆ ಕಾರಣವಾಗಿದೆ. ಈ ಬಗ್ಗೆ ಕೆಲ ದಿನಗಳಿಂದ ಗಂಡ-ಹೆಂಡತಿ ನಡುವೆ ಜಗಳ ಏರ್ಪಟ್ಟಿದೆ. ಈ ಹಿಂದೆ ಗಂಡ ಈ ಸಂಬಂಧ ಬಿಡುವಂತೆ ವಾರ್ನಿಂಗ್​ ಮಾಡಿದ್ದಾನೆ ಎನ್ನಲಾಗಿದೆ. ಇದಕ್ಕೂ ಮೀರಿ ಆಕೆ ಮಕ್ಕಳನ್ನು ಮತ್ತು ಪತಿಯನ್ನು ಬಿಟ್ಟು ಓಡಿ ಹೊಗಲು ಸಿದ್ಧಳಾಗಿದ್ದಳು. ಹೀಗಾಗಿ, ಕೋಪಗೊಂಡ ಸ್ಟೀಫನ್​​ರಾಜ್​ ಕತ್ತಿಯಿಂದ ಚುಚ್ಚಿ ಕೊಲೆ ಮಾಡಿದ್ದಾನೆ ಎಂದು ವರದಿಯಾಗಿದೆ. (ಏಜೆನ್ಸೀಸ್​​)