ನ್ಯೂಸ್

ಅಯೋಧ್ಯೆ ವಿಚಾರದಲ್ಲಿ ವಿವಾದ ಸೃಷ್ಟಿಸಿದ ನೇಪಾಳ ಪ್ರಧಾನಿ; ಶ್ರೀರಾಮ ಭಾರತೀಯನೇ ಅಲ್ಲ ಎಂದ ಓಲಿ

ಕಠ್ಮಂಡು: ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರು ಭಾರತದ ವಿರುದ್ಧ ತಿರುಗಿಬಿದ್ದಿರುವುದು ಹಳೇ ವಿಚಾರ. ಚೀನಾ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ಅವರು ಇದೀಗ ಭಾರತದ ಬಗ್ಗೆ ಮಾತನಾಡಿ, ಬಹುದೊಡ್ಡ ವಿವಾದ ಸೃಷ್ಟಿಸಿದ್ದಾರೆ.

ಭಾರತದಲ್ಲಿ ಅಯೋಧ್ಯಾ ವಿವಾದ ಅದೆಷ್ಟು ದೊಡ್ಡ ಮತ್ತು ಸೂಕ್ಷ್ಮ ವಿಷಯ ಎಂಬುದು ಪ್ರತಿಯೊಬ್ಬರಿಗೂ ಗೊತ್ತು. ಈಗ ಅದೇ ಅಯೋಧ್ಯೆ, ಭಗವಂತ ರಾಮನ ವಿಚಾರ ಮಾತನಾಡಿ, ಭಾರತೀಯ ಧಾರ್ಮಿಕ ಭಾವನೆಯನ್ನೇ ಕೆಣಕಿದ್ದಾರೆ.

ನಿಜವಾದ ಅಯೋಧ್ಯೆ ಇರುವುದು ಭಾರತದಲ್ಲಿ ಅಲ್ಲ, ನೇಪಾಳದಲ್ಲಿ. ರಾಮ ಭಾರತೀಯನಲ್ಲ..ನೇಪಾಳದವನು ಎಂದು ಕೆ.ಪಿ.ಶರ್ಮಾ ಓಲಿ ಹೇಳಿದ್ದಾರೆ. ಇದನ್ನೂ ಓದಿ: ಮೀಡಿಯಾಗಳ ಸುಳ್ಳು ಸುದ್ದಿ ನಂಬಬೇಡಿ.. ನಾನೇ ವಿಡಿಯೋ ಮೂಲಕ ಸತ್ಯ ಹೇಳುತ್ತೇನೆ: ರಾಹುಲ್ ಗಾಂಧಿ

ನೇಪಾಳ, ಭಾರತದ ಮೂರು ಭೂಪ್ರದೇಶಗಳನ್ನು ಒಳಗೊಂಡ ಪರಿಷ್ಕೃತ ನಕ್ಷೆಯನ್ನು ತಯಾರಿಸಿ ಸಂವಿಧಾನ ತಿದ್ದುಪಡಿ ಮಾಡಿದೆ. ಈ ಮೂಲಕ ಭಾರತದ ಲಿಪುಲೇಖ್, ಕಾಲಾಪಾನಿ ಮತ್ತು ಲಿಂಪಿಯಾಧುರ ಪ್ರದೇಶಗಳು ತನ್ನದು ಎಂದು ಬಲವಾಗಿ ವಾದಿಸುತ್ತಿದೆ. ಇದೀಗ ನೇಪಾಳ ಪ್ರಧಾನಿ ಹೊಸ ಕ್ಯಾತೆ ತೆಗೆದಿದ್ದಾರೆ. ಅಯೋಧ್ಯೆ ಇರುವುದು ನೇಪಾಳದಲ್ಲಿ ಎಂದು ಪ್ರಧಾನಮಂತ್ರಿ ಹೇಳಿದ್ದನ್ನು ಅಲ್ಲಿಯ ಮಾಧ್ಯಮಗಳು ವರದಿ ಮಾಡಿವೆ. (ಏಜೆನ್ಸೀಸ್​)