ನ್ಯೂಸ್

ಸಾಕು ನಾಯಿಗಾಗಿ ಬ್ರಿಟನ್​ ರಾಜಮನೆತನದ ಪ್ರಶಸ್ತಿಯನ್ನೇ ನಿರಾಕರಿಸಿದ್ದರು Ratan Tata

ಮುಂಬೈ: ವಿಶ್ವದ ಟಾಪ್​ಮೋಸ್ಟ್​ ಉದ್ಯಮಿಗಳಲ್ಲಿ ಒಬ್ಬರಾದ ಟಾಟಾ ಸಮೂಹ ಸಂಸ್ಥೆಗಳ ಮಾಜಿ ಅಧ್ಯಕ್ಷ ರತನ್​ ಟಾಟಾ (86) (Ratan Tata) ಇಹಲೋಕ ತ್ಯಜಿಸಿದ್ದು, ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು ಅಕ್ಟೋಬರ್​ 09ರಂದು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಉದ್ಯಮದ ಹೊರತಾಗಿ ಪ್ರಾಣಿಪ್ರಿಯರಾಗಿದ್ದ (Animal Lover) ರತನ್​ ಟಾಟಾ ಈ ಹಿಂದೆ ಹಲವು ಬಾರಿ ಈ ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಆದರೆ, ಸಾಕುನಾಯಿಗಾಗಿ ಪ್ರತಿಷ್ಠಿತ ಪ್ರಶಸ್ತಿಯನ್ನೇ ನಿರಾಕರಿಸಿದ್ದರು ಎಂದರೆ ನೀವು ನಂಬುತ್ತೀರಾ.

ಭಾರತ ಮೂಲದ ಖ್ಯಾತ ಉದ್ಯಮಿ (BusinessMan) ಸುಹೇಲ್​ ಸೇಠ್ (Suhail Sait)​, ಈ ಬಗ್ಗೆ ಮಾತನಾಡಿದ್ದು, 2018ರ ಫೆಬ್ರವರಿ 6ರಂದು ಬ್ರಿಟನ್​ನ (Britain) ರಾಜಮನೆತನ ಬಕಿಂಗ್​ಹ್ಯಾಮ್ (Buckingham) ಅರಮನೆಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು, ಸಮಾರಂಭದಲ್ಲಿ ಬ್ರಿಟನ್ ರಾಯಲ್ ಪ್ರಿನ್ಸ್​​ ಚಾರ್ಲ್ಸ್​ ಅವರು ರತನ್​ ಟಾಟಾ ಅವರು ಲೋಕೋಪಕಾರಿ ಕೆಲಸಕ್ಕೆ ಜೀವಮಾನದ ಸಾಧನೆ ಪ್ರಶಸ್ತಿ ನೀಡಲು ಬಯಸಿದ್ದರು. ಆದರೆ, ಲಂಡನ್​ಗೆ (London) ತೆರಳಿದ ರತನ್​ ಟಾಟಾ ಅವರು ಆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಾಧ್ಯವಾಗಲಿಲ್ಲ. ಅದಕ್ಕೆ ಕಾರಣ ಅವರ ಸಾಕು ನಾಯಿ (Pet Dog).

2018ರ ಫೆಬ್ರವರಿ ತಿಂಗಳಲ್ಲಿ ಬ್ರಿಟಿಷ್ ಏಷ್ಯನ್ ಟ್ರಸ್ಟ್ (British Asian Trust) ಸಹಯೋಗದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿತ್ತು. ಸುದೀರ್ಘ ವಿಮಾನ ಪ್ರಯಾಣದ ನಂತರ ಲಂಡನ್ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ, ನನ್ನ ಫೋನ್‌ನಲ್ಲಿ ರತನ್​ ಟಾಟಾ ಅವರ 11ಕ್ಕೂ ಹೆಚ್ಚು ಮಿಸ್ಡ್​ ಕಾಲ್​ (Missed Call) ಇರುವುದನ್ನು ಗಮನಿಸಿ ವಾಪಸ್​ ಕರೆ ಮಾಡಿ ವಿಚಾರಿಸಿದೆ. ಅವರು ತಮ್ಮ ಸಾಕು ನಾಯಿಗೆ ತೀವ್ರ ಅನಾರೋಗ್ಯ ಕಾಡಿತ್ತು, ಅದಕ್ಕೆ ಕಾಯಿಲೆ ಇದೆ ಹೀಗಾಗಿ ನಾನು ಪ್ರಶಸ್ತಿ ಸ್ವೀಕರಿಸಲು ಬರುವುದಿಲ್ಲ ಎಂದು ಹೇಳಿದರು.

ನಾನು ರತನ್​ ಟಾಟಾ ಅವರ ಮನವೊಲಿಸಲು ಪ್ರಯತ್ನಿಸಿದೆ. ಆದರೆ, ಅವರು ಅದನ್ನು ಬಿಟ್ಟು ಬರಲು ಸಾಧ್ಯವಿಲ್ಲ ಎಂದು ಹೇಳಿದರು. ಆ ಕಾರ್ಯಕ್ರಮಕ್ಕೆ ಪ್ರಶಸ್ತಿ ಸ್ವೀಕರಿಸಲು (Award Ceremony) ಅವರು ಬಂದಿರಲಿಲ್ಲ. ಇದನ್ನು ಗಮನಿಸಿದ ಪ್ರಿನ್ಸ್​ ಚಾರ್ಲ್ಸ್​ (Prince Charles) ಮನುಷ್ಯನೆಂದರೆ ಹೀಗಿರಬೇಕು, ರತನ್ ಟಾಟಾ ಒಬ್ಬ ಅದ್ಭುತ ವ್ಯಕ್ತಿ ಎಂದು ಹಾಡಿಹೊಗಳಿದ್ದರು. ಈ ವಿಚಾರವನ್ನು ಭಾರತ ಮೂಲದ ಉದ್ಯಮಿ ಸುಹೇಲ್​ ಸೇಠ್ ಬಹಿರಂಗಪಡಿಸಿದ್ದು, ಮತ್ತೊಮ್ಮೆ ಅವರು ಪ್ರಾಣಿಪ್ರಿಯ ಎಂಬುದು ಸಾಬೀತಾಗಿದೆ.