ನ್ಯೂಸ್

ಬೆನ್ನು ನೋವಿನ ಭಯ; ಇನ್ಮುಂದೆ ಸಾಮಿ..ಸಾಮಿ ಎಂದು ಕುಣಿಯಲ್ಲ ಎಂದ ರಶ್ಮಿಕಾ!

ಬೆಂಗಳೂರು: ನಟಿ ರಶ್ಮಿಕಾ ಮಂದಣ್ಣ ತೆಲುಗಿನ "ಪುಷ್ಪ' ಚಿತ್ರದ ಮೂಲಕ ಮನೆ ಮಾತಾಗಿದ್ದಾರೆ. ಅಭಿಮಾನಿಗಳು ರಶ್ಮಿಕಾ ಅವರಲ್ಲಿ ಪುಷ್ಪ ಸಿನಿಮಾದ ಸಾಮಿ..ಸಾಮಿ ಹಾಡಿಗೆ ಹೆಜ್ಜೆ ಹಾಕಲು ಡಿಮ್ಯಾಂಡ್ ಮಾಡುತ್ತಾರೆ. ಆದರೆ ಇನ್ಮುಂದೆ ಈ ಹಾಡಿಗೆ ಡಾನ್ಸ್​​ ಮಾಡುವುದಿಲ್ಲ ಎಂದು ಹೇಳುವ ಮೂಲಕವಾಗಿ ರಶ್ಮಿಕಾ ಸುದ್ದಿಯಾಗಿದ್ದಾರೆ.

ಆಗಾಗ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಜತೆ ಚಾಟ್​ ಮಾಡುವ ರಶ್ಮಿಕಾ, ಇತ್ತೀಚೆಗೆ ಅಭಿಮಾನಿಯೊಬ್ಬರ ಪ್ರಶ್ನೆಗೆ ಹೀಗೆ ಹೇಳಿಕೊಂಡಿದ್ದಾರೆ. ಇತ್ತೀಚೆಗಷ್ಟೆ ಫ್ಯಾನ್​ ಒಬ್ಬರು ರಶ್ಮಿಕಾ ಮಂದಣ್ಣ ಬಳಿ, "ಮುಂದಿನ ನಿಮ್ಮನ್ನು ಭೇಟಿಯಾದಾಗ ನನ್ನ ಜತೆ ನೀವು "ಸಾಮಿ..ಸಾಮಿ' ಹಾಡಿಗೆ ಕುಣಿಯಬೇಕು' ಎಂದಿದ್ದಾರೆ.

ಅದಕ್ಕೆ ರಶ್ಮಿಕಾ, "ನಾನು ಆ ಹಾಡಿಗೆ ಡಾನ್ಸ್​ ಮಾಡಿ ಸಾಕಾಗಿಹೋಗಿದೆ. ಆ ಡಾನ್ಸ್​ನಿಂದಲೇ ನನಗೆ ವಯಸ್ಸಾದ ಬಳಿಕ ಬೆನ್ನು ನೋವು ಬರುತ್ತೇನೋ ಅನ್ನುವಷ್ಟರ ಮಟ್ಟಿಗೆ ಕುಣಿದಿದ್ದೇನೆ. ನಾನು, ನೀವು ಭೇಟಿಯಾದಾಗ ಬೇರೆ ಏನಾದರೂ ಮಾಡೋಣ' ಎಂದು ಉತ್ತರಿಸಿದ್ದಾರೆ. ರಶ್ಮಿಕಾ ಈ ರೀತಿ ಹಾಸ್ಯ ಮಾಡಿದ್ದಾರೋ ಅಥವಾ ಗಂಭೀರವಾಗಿ ಹೇಳಿದ್ದಾರೆಯೇ ಎಂಬುದು ತಿಳಿದುಬಂದಿಲ್ಲ.

ಸದ್ಯ ರಶ್ಮಿಕಾ ಮಂದಣ್ಣ ಮುಂಬೈನಲ್ಲಿದ್ದು, ರಣಬೀರ್​ ಕಪೂರ್​ ಜತೆ "ದಿ ಅನಿಮಲ್​' ಹಾಗೆಯೇ ಅಲ್ಲು ಅರ್ಜುನ್​ ಜತೆ "ಪುಷ್ಪ 2 ದಿ ರೂಲ್​' ಚಿತ್ರದಲ್ಲೂ ನಟಿಸುತ್ತಿದ್ದಾರೆ.