ಹೈದರಾಬಾದ್: ಕಳೆದ ನಾಲ್ಕು ವರ್ಷಗಳಿಂದ ನಟ ವಿಜಯ್ ದೇವರಕೊಂಡ ಮತ್ತು ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ನಡುವಿನ ಸಂಬಂಧದ ಬಗ್ಗೆ ಸಾಕಷ್ಟು ಸುದ್ದಿಗಳು ಪ್ರಕಟವಾಗುತ್ತಲೇ ಇವೆ. ಈ ಬಗ್ಗೆ ಪ್ರಶ್ನಿಸಿದಾಗ ವಿಜಯ್ ಆಗಲಿ, ರಶ್ಮಿಕಾ ಆಗಲಿ ಪ್ರತಿಕ್ರಿಯೆ ನೀಡದೇ ನಿರಾಕರಿಸುತ್ತಾರೆ. ಇನ್ನು ಕೆಲವು ಸಂದರ್ಭಗಳಲ್ಲಿ ನಾವು ಬೆಸ್ಟ್ ಫ್ರೆಂಡ್ಸ್ ಅಷ್ಟೇ ಎಂದು ಹೇಳಿಕೊಂಡಿದ್ದಾರೆ.
ಇದೀಗ ಇಬ್ಬರ ಸಂಬಂಧದ ಕುರಿತು ಮತ್ತಷ್ಟು ಪ್ರಶ್ನೆಗಳು ಹುಟ್ಟಿಕೊಳ್ಳುವಂತಹ ಪ್ರಸಂಗ ಜರುಗಿದೆ. ವಿಜಯ್ ಮತ್ತು ರಶ್ಮಿಕಾ ತಮ್ಮ ತಮ್ಮ ಕುಟುಂಬ ಮತ್ತು ಫ್ರೆಂಡ್ಸ್ ಜೊತೆ ಹೈದರಾಬಾದ್ನ ಕೆಫೆ ಒಂದರಲ್ಲಿ ಭೋಜನ ಸವಿದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಸಾಕಷ್ಟು ಚರ್ಷೆ ಹುಟ್ಟುಕೊಂಡಿದೆ. ಬಹುಶಃ ಮದುವೆ ಬಗ್ಗೆ ಚರ್ಚಿಸಲು ಒಂದೆಡೆ ಸೇರಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ವಿಡಿಯೋ ನೋಡಿದ ನೆಟ್ಟಿಗರು ಸಹ ಮದುವೆ ಬಗ್ಗೆ ಮಾತುಕತೆ ನಡೆಯುತ್ತಿರಬಹುದೆಂದು ಎಂದು ಕಾಮೆಂಟ್ಗಳ ಮೂಲಕ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ವಿಜಯ್ ಆಗಲಿ ಅಥವಾ ರಶ್ಮಿಕಾ ಆಗಲಿ ಮಾತನಾಡಿಲ್ಲ. ಆದರೆ, ಯಾವುದೋ ದೊಡ್ಡ ದಿನಕ್ಕೆ ಭರ್ಜರಿ ತಯಾರಿ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.
ಅಂದಹಾಗೆ ಟಾಲಿವುಡ್ನ ಜನಪ್ರಿಯ ಜೋಡಿಗಳಲ್ಲಿ ವಿಜಯ್ ದೇವರಕೊಂಡ, ರಶ್ಮಿಕಾ ಜೋಡಿ ಸಹ ಒಂದು. ಈ ಜೋಡಿ ‘ಗೀತ ಗೋವಿಂದಂ’ ಮತ್ತು ‘ಡಿಯರ್ ಕಾಮ್ರೇಡ್’ ಚಿತ್ರಗಳಲ್ಲಿ ನಟಿಸಿದ್ದಾರೆ. ಆ ನಂತರ ಅವರಿಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಇದೆಯಾದರೂ, ಇಬ್ಬರೂ ತಾವು ಒಳ್ಳೆಯ ಸ್ನೇಹಿತರು ಎಂದು ಹೇಳಿಕೊಂಡೇ ಬರುತ್ತಿದ್ದಾರೆ. ಆದರೆ, ಸದ್ಯ ಹರಿದಾಡುತ್ತಿರುವ ವಿಡಿಯೋ ಇನ್ನುಷ್ಟು ಚರ್ಚೆಗೆ ಅಡಿ ಮಾಡಿಕೊಟ್ಟಿದೆ. ಅಲ್ಲದೆ, ಇಬ್ಬರು ಮತ್ತೆ ಒಟ್ಟಿಗೆ ಇರುವುದನ್ನು ನೋಡಿ ಅಭಿಮಾನಿಗಳು ತುಂಬಾ ಖುಷಿಯಾಗಿದ್ದಾರೆ.
ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, 2023ರ ಸೆಪ್ಟೆಂಬರ್ 1 ರಂದು ಸಮಂತಾ ರುತ್ ಪ್ರಭು ಜೊತೆಗಿನ ‘ಕುಶಿ’ ಚಿತ್ರದ ಬಿಡುಗಡೆಗೆ ದೇವರಕೊಂಡ ಸಜ್ಜಾಗುತ್ತಿದ್ದಾರೆ. ರಶ್ಮಿಕಾ ಅವರು ಮುಂದಿನ ‘ಅನಿಮಲ್’ ಚಿತ್ರದಲ್ಲಿ ರಣಬೀರ್ ಕಪೂರ್ ಎದುರು ಕಾಣಿಸಿಕೊಳ್ಳಲಿದ್ದಾರೆ. (ಏಜೆನ್ಸೀಸ್)