ಪ್ರಧಾನಿ ಮೋದಿ ಫೋಟೋ ಶೇರ್​ ಮಾಡಿದ ಜಾನ್​ ಸೇನಾ! ಯು ಕಾಂಟ್​ ಸೀ ಮಿ ನೆನಪಿಸಿಕೊಂಡ ನೆಟ್ಟಿಗರು ​

Jhon Cena PM Modi
Published on

ನ್ಯೂಯಾರ್ಕ್​: ಅಮೆರಿಕ ಅಧ್ಯಕ್ಷ ಜೋ ಬೈಡೆನ್​ ಮತ್ತು ಪ್ರಥಮ ಮಹಿಳೆ ಜಿಲ್​ ಬೈಡೆನ್ ಅವರೊಂದಿಗೆ ಪ್ರಧಾನಿ ಮೋದಿ ಮಾತುಕತೆ ನಡೆಸಿದ ಸಂದರ್ಭದಲ್ಲಿ ಸೆರೆಹಿಡಿದಂತಹ ಫೋಟೋ ಒಂದನ್ನು ವೃತ್ತಿಪರ ಕುಸ್ತಿಪಟು ಮತ್ತು ಡಬ್ಲ್ಯುಡಬ್ಲ್ಯುಇ ಸ್ಟಾರ್​ ಜಾನ್​ ಸೇನಾ ಅವರು ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿಕೊಂಡಿದ್ದು, ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಜಾನ್​ ಸೇನಾ ಶೇರ್​ ಮಾಡಿಕೊಂಡಿರುವ ಫೋಟೋದಲ್ಲಿ ಪ್ರಧಾನಿ ಮೋದಿ ತಮ್ಮ ಅಂಗೈ ಅನ್ನು ತೋರಿಸುತ್ತಿದ್ದಾರೆ. ಫೋಟೋ ನೋಡಿದ ನೆಟ್ಟಿಗರು ಜಾನ್​ ಸೇನಾ ಅವರ ಡಬ್ಲ್ಯುಡಬ್ಲ್ಯುಇ ಸಿಗ್ನೇಚರ್​ ಆಗಿರುವ "ಯು ಕಾಂಟ್​ ಸೀ ಮಿ" (ನೀನು ನನ್ನನ್ನು ನೋಡಲು ಸಾಧ್ಯವಿಲ್ಲ) ಸ್ಟೈಲ್​ ನೆನಪಿಸಿಕೊಳ್ಳುತ್ತಿದ್ದಾರೆ.

ಡಬ್ಲ್ಯುಡಬ್ಲ್ಯುಇ ಇಂಡಿಯಾ ಕೂಡ ಜಾನ್​ ಸೇನಾ ಶೇರ್​ ಮಾಡಿಕೊಂಡಿರುವ ಫೋಟೋಗೆ ಬಾವುಟಗಳು ಮತ್ತು ಹ್ಯಾಂಡ್​ಶೇಕ್​ ಎಮೋಜಿಯೊಂದಿಗೆ ಪ್ರತಿಕ್ರಿಯೆ ನೀಡಿದೆ. ಇಬ್ಬರ ಫೋಟೋವನ್ನು ಎಡಿಟ್​ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಮಾಡಲಾಗುತ್ತಿದೆ.

ಇತ್ತೀಚೆಗಷ್ಟೇ ಪ್ರಧಾನಿ ಮೋದಿ ನಾಲ್ಕು ದಿನಗಳ ಅಮೆರಿಕ ಪ್ರವಾಸ ಮುಗಿಸಿದ್ದಾರೆ. ತಮ್ಮ ಪ್ರವಾಸದ ವೇಳೆ ಯುಎಸ್​ ಕಾಂಗ್ರೆಸ್​ ಜಂಟಿ ಸದನ ಉದ್ದೇಶಿಸಿ ಭಾಷಣ, ಬೈಡೆನ್​ ಭೋಜನಕೂಟ, ಅಂತಾರಾಷ್ಟ್ರೀಯ ಯೋಗ ದಿನ ಸೇರಿದಂತೆ ಅನೇಕ ಕಾರ್ಯಕ್ರಮಗಳಲ್ಲಿ ಪ್ರಧಾನಿ ಮೋದಿ ಭಾಗಿಯಾದರು. ಅಲ್ಲದೆ, ವಿಶ್ವದ ನಂಬರ್​ 1 ಶ್ರೀಮಂತ ಉದ್ಯಮಿ ಹಾಗೂ ಟೆಸ್ಲಾ ಸಿಇಒ ಮತ್ತು ಟ್ವಿಟರ್​ ಮಾಲೀಕ ಎಲನ್​ ಮಸ್ಕ್ ಸೇರಿದಂತೆ ಉದ್ಯಮಿಗಳು ಹಾಗೂ ವಿವಿಧ ಕ್ಷೇತ್ರದ ಗಣ್ಯರನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಯುಎಸ್​ ಸರ್ಕಾರದ ಜತೆ ಅನೇಕ ಒಪ್ಪಂದಗಳಿಗೂ ಸಹಿ ಹಾಕಿದ್ದಾರೆ.

ಈ ಪ್ರವಾಸ ವೇಳೆ ಬೈಡೆನ್​ ಮತ್ತು ಅವರ ಪತ್ನಿ ಹಾಗೂ ಅಮೆರಿಕ ಪ್ರಥಮ ಮಹಿಳೆ ಜಿಲ್​ ಬೈಡೆನ್​ ಜೊತೆ ಮಾತನಾಡುವಾಗ ಸೆರೆಹಿಡಿದ ಫೋಟೋ ಇದೀಗ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net