ಕೋಲ್ಕತ್ತಾ: ಕಳೆದ ತಿಂಗಳು ನ.30ರಂದು ನಗರದಲ್ಲಿ 7 ತಿಂಗಳ ಮಗುವಿನ ಮೇಲೆ ಅತ್ಯಾಚಾರವಾಗಿರುವ ಅಘಾತಕಾರಿ ಘಟನೆ ಇದೀಗ ಬೆಳಕಿಗೆ ಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು(Arrest) ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಂದ ಹಿನ್ನೆಲೆ..
ಇದೇ ನ.30 ರಂದು ನಗರದ ಪೂರ್ವ ಭಾಗದಲ್ಲಿರುವ ಬುರ್ಟೋಲ್ಲ ಪ್ರದೇಶದಲ್ಲಿ ಮಗು ಆಳುತ್ತಿರುವುದು ಕಂಡು ಬಂದಿದೆ. ಅಲ್ಲಿನ ಸ್ಥಳೀಯರು ಮಗುವನ್ನು ರಕ್ಷಣೆ ಮಾಡಿದ್ದಾರೆ. ಬಳಿಕ ಪೊಲೀಸರುಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಮಗುವನ್ನು ಠಾಣೆಗೆ ಕರೆದೊಯ್ದಿದ್ದಾರೆ. ಕೆಲ ಸಮಯದ ನಂತರ ಇಬ್ಬರು ಪುಟ್ಪಾತ್ ನಿವಾಸಿಗಳು ಠಾಣೆಗೆ ಬಂದು ಮಗು ಕಳೆದಿರುವ ಬಗ್ಗೆ ದೂರು ನೀಡಿದ್ದಾರೆ. ಇದನ್ನು ಗಮನಿಸಿದ ಪೊಲೀಸರು ಮಗುವನ್ನು ಆ ಇಬ್ಬರಿಗೆ ತೋರಿಸಿದ್ದಾರೆ. ನಿವಾಸಿಗಳಿಬ್ಬರು ಮಗುವನ್ನು ಗುರುತಿಸಿದ್ದಾರೆ. ಬಳಿಕ ಮಗುವನ್ನು ಪರೀಕ್ಷೆಗೆಂದು ಆಸ್ಪತ್ರಗೆ ದಾಖಲಿಸಿದಾಗ ಅತ್ಯಾಚಾರ ನಡೆದಿರುವುದರ ಬಗ್ಗೆ ಗೊತ್ತಾಗಿದೆ.
ತತಕ್ಷಣ ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ, ಕೂಡಲೇ ಬಂಧಿಸಿದ್ದಾರೆ. ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯ ವಿವಿಧ ಸೆಕ್ಷನ್ಗಳಡಿ ಪ್ರಕರಣ ದಾಖಲಾಗಿದೆ.(ಏಜೆನ್ಸೀಸ್).