ಬೆಂಗಳೂರು: ಜನಸಾಮಾನ್ಯರ ಮನಸ್ಸನ್ನು ಗೆಲ್ಲುತ್ತಿರುವ ಕಾಂತಾರ ಚಿತ್ರವನ್ನು ಖ್ಯಾತ ನಿರ್ಮಾಪಕ ಹಾಗೂ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಹೊಗಳಿದ್ದಾರೆ. 'ಈ ಚಿತ್ರ 500 ಕೋಟಿ ರೂ. ಸಿನಿಮಾ ಮಾಡುವವರಿಗೆ ಆಘಾತ ನೀಡಿದೆ' ಎಂದು ಹೇಳಿದ್ದಾರೆ.
ಕಾಂತಾರ ಅಕ್ಟೋಬರ್ 14ರಂದು ಹಿಂದಿ, ತಮಿಳು ಹಾಗೂ ತೆಲುಗಿನಲ್ಲಿ ಬಿಡುಗಡೆಗೊಂಡಿತ್ತು. ಈ ವಾರದಲ್ಲಿ ಮಲಯಾಳಮ್ನಲ್ಲೂ ಬಿಡುಗಡೆಗೊಳ್ಳಲಿದೆ. ಪ್ರಭಾಸ್, ಧನುಷ್, ಅನುಷ್ಕಾ ಶೆಟ್ಟಿ ಕಾಂತಾರದ ಬಗ್ಗೆ ಮಾತನಾಡಿದ ನಂತರ ಈಗ ರಾಜ್ ಗೋಪಾಲ್ ವರ್ಮಾ ಚಿತ್ರದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
'ರಿಷಭ್ ಶೆಟ್ಟಿ ಈಗ ಸಿನಿಮಾ ರಂಗದಲ್ಲಿ ಗುಳಿಗ ದೈವದ ಹಾಗೆ ಆಗಿದ್ದಾರೆ. 300, 400, 500 ಕೋಟಿ ರೂ. ಸಿನಿಮಾ ಮಾಡುವವರು ವಿಲನ್ಗಳ ಹಾಗೆ ತೋರುತ್ತಿದ್ದಾರೆ. ಅವರನ್ನು ಕಾಂತಾರದ ಕಲೆಕ್ಷನ್ ಕೊಲ್ಲುತ್ತಿದೆ' ಎಂದು ರಾಮ್ ಗೋಪಾಲ್ ವರ್ಮಾ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ.