ನ್ಯೂಸ್

ರಮೇಶ್‌ ಕುಮಾರ್‌ಗೆ ರಾಜಕೀಯ ವೈರಾಗ್ಯ ಮೂಡಿದ್ದು ಏಕೆ? ಅವರೇ ಹೇಳಿದ್ದಾರೆ ಕಾರಣ!

Mandara

ಕೋಲಾರ: ಪ್ರಸಕ್ತ ರಾಜಕಾರಣ ಬೇಸರ ತಂದಿದೆ, ಕಳೆದ 40 ವರ್ಷಗಳಲ್ಲಿ ಇಂತಹ ಕಲುಷಿತ ರಾಜಕಾರಣ ನೋಡಿರಲಿಲ್ಲ, ಮರ್ಯಾದೆಯಿಂದ ಬದುಕಿರುವೆ, ಕೆಟ್ಟ ರಾಜಕಾರಣದ ನಡುವೆ ಇದ್ದು ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ಮಾಡಿಕೊಳ್ಳಲು ಇಷ್ಟವಿಲ್ಲ, ಇದೇ ನನ್ನ ಕೊನೇ ಚುನಾವಣೆ, ಮುಂದಿನ ಚುನಾವಣೆಗೆ ಸ್ಪರ್ಧಿಸಲ್ಲ...

ಇದು ಜಿಲ್ಲೆಯ ಹಿರಿಯ ರಾಜಕಾರಣಿ, ಮಾಜಿ ಸ್ಪೀಕರ್, ಶ್ರೀನಿವಾಸಪುರ ಶಾಸಕ ಕೆ.ಆರ್. ರಮೇಶ್ ಕುಮಾರ್ ಆತ್ಮೀಯರ ಬಳಿ ಹೇಳಿಕೊಂಡ ಮಾತು. ನಗರದ ಹೊರವಲಯದಲ್ಲಿರುವ ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಅವರ ತೋಟದ ಮನೆಯಲ್ಲಿ ಮಾಜಿ ಶಾಸಕ ಚಿಂತಾಮಣಿ ಸುಧಾಕರ್ ಮತ್ತು ಇತರರೊಂದಿಗೆ ಅನೌಪಚರಿಕವಾಗಿ ಮಾತನಾಡುತ್ತಿದ್ದಾಗ ಭಾವುಕರಾದರು ರಮೇಶ್ ಕುಮಾರ್.

‘‘ನಾನು ಯಾವತ್ತ್ತೂ ಗ್ರಾಪಂ ಚುನಾವಣೆ ವಿಚಾರದಲ್ಲಿ ತಲೆ ಹಾಕಿದವನಲ್ಲ, ಕಾರ್ಯಕರ್ತರೇ ತಮಗೆ ಬೇಕಾದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಚುನಾವಣೆ ನಡೆಸುತ್ತಿದ್ದರು. ಆದರೆ ಕಾಂಗ್ರೆಸ್ ಉಳಿವಿವಾಗಿ ನಾನೀಗ ಗ್ರಾಪಂ ಚುನಾವಣೆಗೆ ಎಂಟ್ರಿ ಕೊಡಬೇಕಾಗಿದೆ, ಮುಂದಿನ ದಿನಗಳಲ್ಲಿ ರಾಜಕೀಯ ಇನ್ನಷ್ಟು ಹೊಲಸಾಗಬಹುದು, ನನಗೂ ವಯಸ್ಸಾಗಿದೆ, ಇನ್ನೆಷ್ಟು ದಿನ ಹೋರಾಟ ಮಾಡೋದು, ಈ ಅವಧಿ ಮುಗಿದ ಮೇಲೆ ಸಕ್ರಿಯ ರಾಜಕಾರಣಕ್ಕೆ ನಿವೃತ್ತಿ ಘೋಷಣೆ ಮಾಡಿ ತೋಟದಲ್ಲಿ ಕಾಲ ಕಳೆಯುವೆ’’ ಎಂದು ಅಸಮಾಧಾನ ಹೊರ ಹಾಕಿದರು.

‘‘ಬಿಜೆಪಿಯಿಂದ ರಾಜ್ಯದಲ್ಲಿ ರಾಜಕೀಯ ಕಲುಷಿತವಾಗುತ್ತಿದೆ. ಅಭಿವೃದ್ಧಿ ಕಡೆಗೆ ಗಮನ ನೀಡುತ್ತಿಲ್ಲ, ಹಣಕ್ಕಾಗಿ ನಮ್ಮ ಕೆಲವರು ಬಿಜೆಪಿಗೆ ಹೋದರು. ಕಾಂಗ್ರೆಸ್ ಸಂಕಷ್ಟದಲ್ಲಿರುವುದರಿಂದ ಗ್ರಾಪಂ ಚುನಾವಣೆಯಲ್ಲಿ ನಮ್ಮ ಕಾರ್ಯಕರ್ತರನ್ನು ಗೆಲ್ಲಿಸಿಕೊಳ್ಳಲು ಅಖಾಡಕ್ಕೆ ಇಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ’’ ಎಂದು ಹೇಳಿಕೊಂಡರು ಎನ್ನಲಾಗಿದೆ.

ನನ್ನಂತವರಿಗೆ ಮುಂದಿನ ಚುನಾವಣೆ ಕಷ್ಟ: ಇದೇ ವೇಳೆ, ಕೋಲಾರ- ಚಿಕ್ಕಬಳ್ಳಾಪುರದಲ್ಲಿ ಆಗಿರುವ ರಾಜಕೀಯ ಬೆಳವಣಿಗೆ ಕುರಿತು ಅಭಿಪ್ರಾಯ ಮಂಡಿಸಿದ ರಮೇಶ್‌ಕುಮಾರ್, ‘‘ಹಣ ಇಲ್ಲದೆ ರಾಜಕಾರಣ ಮಾಡಲು ಮುಂದಿನ ದಿನಗಳಲ್ಲಿ ನನ್ನಂತಹವರಿಗೆ ಕಷ್ಟವಾಗಬಹುದು, ಚುನಾವಣೆಯಲ್ಲಿ ಗೆಲ್ಲೋದಕ್ಕೆ ಕೋಟಿ ಕೋಟಿ ರೂ. ಖರ್ಚು ಮಾಡಬೇಕಾಗುತ್ತದೆ, ಈವರೆಗೆ ಯಾರಿಂದಲೂ ಹಣ ಪಡೆದಿಲ್ಲ, ಮುಂದೆಯೂ ಪಡೆಯಲ್ಲ, ರಾಜಕೀಯ ನಿವೃತ್ತಿ ಘೋಷಣೆ ಮಾಡಿ ಮನೆಯಲ್ಲಿ ಇರುತ್ತೇನೆ’’ ಎಂದು ನೋವು ಹೇಳಿಕೊಂಡರು.

ರಮೇಶ್‌ಕುಮಾರ್ ಈ ರೀತಿಯ ಹೇಳಿಕೆ ನೀಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಇದೇ ರೀತಿ ಹೇಳಿದ್ದರು. ಆದರೆ ಶ್ರೀನಿವಾಸಪುರ ಕ್ಷೇತ್ರದ ಮತದಾರರು ರಾಜಕೀಯ ನಿವೃತ್ತಿಗೆ ಬಿಡಲಿಲ್ಲ, ಶ್ರೀನಿವಾಸಪುರಕ್ಕೆ ಮಾತ್ರವಲ್ಲ, ಜಿಲ್ಲೆಗಷ್ಟೇ ಅಲ್ಲ, ರಾಜ್ಯದ ಅಭಿವೃದ್ಧಿಗೆ ರಮೇಶ್ ಕುಮಾರ್ ಬೇಕು, ಗ್ರಾಪಂ ಚುನಾವಣೆ ಬಳಿಕ ಎಲ್ಲವೂ ಸರಿ ಹೋಗುತ್ತದೆ ಎಂದು ಹೆಸರು ಹೇಳಲಿಚ್ಛಿಸದ ರಮೇಶ್ ಕುಮಾರ್ ಬೆಂಬಲಿಗರೊಬ್ಬರು ತಿಳಿಸಿದ್ದಾರೆ.

ಕೋ