ನ್ಯೂಸ್

ಕರ್ನಾಟಕ ಭವನದಲ್ಲೇ ಸಚಿವರ ಕಾಮದಾಟ! ರಮೇಶ್​ ಜಾರಕಿಹೊಳಿಗೆ ಖೆಡ್ಡಾ ತೋಡಿದ್ದು ಕೈ ಮುಖಂಡ?

arunakunigal

ಬೆಂಗಳೂರು: ಕಾಮದಾಟದ ದೃಶ್ಯವುಳ್ಳ ಸಿಡಿ ಸ್ಪೋಟಗೊಳ್ಳುತ್ತಿದ್ದಂತೆ ಸಚಿವ ರಮೇಶ್​ ಜಾರಕಿಹೊಳಿ ಅಜ್ಞಾತ ಸ್ಥಳಕ್ಕೆ ಹೋಗಿದ್ದಾರೆ. ಅಲ್ಲದೆ, ಈ ಬಗ್ಗೆ ಸುದ್ದಿ ಪ್ರಸಾರ ಆಗುತ್ತಿದ್ದಂತೆ ಸಚಿವರ ಕ್ಷೇತ್ರ ಗೋಕಾಕ್​ನಲ್ಲಿ ವಿದ್ಯುತ್​ ಸಂಪರ್ಕ ಕಡಿತ ಮಾಡಲಾಗಿತ್ತು.

ಉತ್ತರ ಕರ್ನಾಟಕ ಮೂಲದ ಬೆಂಗಳೂರಿನಲ್ಲಿ ವಾಸವಿದ್ದ ಯುವತಿಯೊಬ್ಬಳು ಡ್ರೋನ್ ಕ್ಯಾಮರಾಗಳ ಮೂಲಕ ಕರ್ನಾಟಕದ ಡ್ಯಾಂಗಳನ್ನು ಚಿತ್ರೀಕರಣ ಮಾಡಬೇಕು. ಅದಕ್ಕೆ ಅವಕಾಶ ಕೊಡಿ ಎಂದು ರಮೇಶ್​ ಜಾರಕಿಹೊಳಿ ಬಳಿ ಕೇಳಿಕೊಂಡು ಬಂದಿದ್ದಳು. ಆಕೆಯನ್ನು ಪುಸಲಾಯಿಸಿ ಕೆಪಿಟಿಸಿಎಲ್​ನಲ್ಲಿ ಉದ್ಯೋಗ ಕೊಡಿಸುವ ಆಮಿಷ ತೋರಿಸಿ ತನ್ನ ಕಾಮತೃಷೆಗೆ ಬಳಸಿಕೊಂಡಿದ್ದಾರೆ. ಬಳಿಕ ಉದ್ಯೋಗ ನೀಡದೆ ವಂಚಿಸಿದ್ದಾರೆ. ಬಳಿಕ ತನ್ನ ಕಾಮದಾಟದ ವಿಡಿಯೋ ಯುವತಿ ಬಳಿ ಇರುವುದು ಗೊತ್ತಾಗೆ ಆಕೆಗೆ ಜೀವ ಬೆದರಿಕೆ ಹಾಕಿದ್ದಾರೆ. ಸಂತ್ರಸ್ತ ಯುವತಿಯ ಕುಟುಂಬಸ್ಥರು ನನ್ನ ಬಳಿ ಬಂದು ಅಳಲು ತೋಡಿಕೊಂಡರು. ಅಲ್ಲದೆ ಅದಕ್ಕೆ ಸಂಬಂಧಿಸಿದ ಫೋಟೊ, ವಿಡಿಯೋವುಳ್ಳ ಸಿಡಿಯನ್ನು ಕೊಟ್ಟಿದ್ದಾರೆ. ಇದರ ಸತ್ಯಾಸತ್ಯತೆಯನ್ನ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಕಬ್ಬನ್ ಪಾರ್ಕ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದಕ್ಕೂ ಮುನ್ನ ದೂರಿನ ಪ್ರತಿಯನ್ನ ಮಾಧ್ಯಮದವರ ಮುಂದೆ ಓದಿದ್ದರು.

ರಮೇಶ್​ ಜಾರಕಿಹೊಳಿಯದ್ದು ಎನ್ನಲಾದ ಆಡಿಯೋ-ವಿಡಿಯೋದಲ್ಲಿ ಯುವತಿ ಮತ್ತು ಸಚಿವರ ಮಾತುಕತೆ ಗಮನಿಸಿದ್ರೆ ರಮೇಶ್​ ಜಾರಕಿಹೊಳಿ ಹನಿಟ್ರ್ಯಾಪ್​ಗೆ ಒಳಗಾದ್ರಾ? ಎಂಬ ಪ್ರಶ್ನೆ ಮೂಡುತ್ತೆ. ರಮೇಶ್​ ಜಾರಕಿಹೊಳಿ ಅವರನ್ನ ಟಾರ್ಗೆಟ್​ ಮಾಡಿ ಖೆಡ್ಡಾ ತೋಡಲಾಗಿತ್ತಾ? ಕೆಲ ಕಾಂಗ್ರೆಸ್​ ಮುಖಂಡರ ಸೂಚನೆಯಂತೆ ಕೆಲ ದಿನಗಳ ಹಿಂದೆಯೇ ಸ್ಕೆಚ್​ ಹಾಕಿದ್ದರೇ? ಎಂಬಲ್ಲ ಚರ್ಚೆ ಸಾರ್ವಜನಿಕ ವಲಯದಲ್ಲಿ ಶುರುವಾಗಿದೆ.

ಇನ್ನು ಕಾಮದಾಟದ ವಿಡಿಯೋ ಚಿತ್ರೀಕರಣವನ್ನು ದೆಹಲಿಯ ಕರ್ನಾಟಕ ಭವನದಲ್ಲಿ ಚಿತ್ರೀಕರಿಸಲಾಗಿದೆ. ಸಚಿವರ ಈ ನಡತೆ ಕಂಡು ದೆಹಲಿ ಭವನದಿಂದ ಕೆಲ ಸಚಿವರು ಹೊರ ಹೋಗಿದ್ದರು ಎಂದು ಮೂಲಗಳು ತಿಳಿಸಿವೆ.

ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಸರ್ಕಾರ ಅಧಿಕಾರದಲ್ಲಿದ್ದಾಗ ಅಂದಿನ ಸಚಿವ ಎಚ್​.ವೈ.ಮೇಟಿ ಇಂಹತ ಪ್ರಕರಣದಲ್ಲಿ ಸಿಕ್ಕಿಬಿದ್ದು ರಾಜೀನಾಮೆ ನೀಡಿದ್ದರು. ಇದೀಗ ಬಿಜೆಪಿ ಸರ್ಕಾರದ ಪ್ರಭಾವಿ ಸಚಿವ ರಮೇಶ್​ ಜಾರಕಿಹೊಳಿಗೆ ಸಿಡಿ ಕಂಠಕ ಸುತ್ತಿಕೊಂಡಿದೆ. ತನಿಖೆ ಬಳಿಕ ಸತ್ಯಾಸತ್ಯತೆ ಹೊರಬರಲಿದೆ.

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ