ನ್ಯೂಸ್

ಬಾಲಿವುಡ್ ನಟ ಜಾಕಿ ಭಗ್ನಾನಿ ಜತೆ ಸಪ್ತಪದಿ ತುಳಿದ ರಾಕುಲ್ ಪ್ರೀತ್ ಸಿಂಗ್

ಮುಂಬೈ: ಬಹುಭಾಷಾ ನಟಿ ರಾಕುಲ್​ ಪ್ರೀತ್​ ಸಿಂಗ್​ ಬುಧವಾರ ಬಾಲಿವುಡ್​ನ ಖ್ಯಾತ ನಟ, ನಿರ್ಮಾಪಕ ಜಾಕಿ ಭಗ್ನಾನಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಗೋವಾದಲ್ಲಿ ನಡೆದ ವಿವಾಹ ಮಹೋತ್ಸವ ಎರಡು ಕಡೆಯ ಕುಟುಂಬಸ್ಥರು ಹಾಗೂ ಕೆಲವೇ ಕೆಲವು ಆಪ್ತರು ಉಪಸ್ಥಿತರಿದ್ದರು. ರಾಕುಲ್ ಪ್ರೀತ್ ಸಿಂಗ್ ಹಾಗೂ ಭಗ್ನಾನಿ ಹಲವು ದಿನಗಳಿಂದ ಡೇಟಿಂಗ್‌ ಮಾಡುತ್ತಿದ್ದರು.

ಕಲ್ಕತ್ತಾ ಮೂಲದ ಜಾಕಿ ಭಗ್ನಾನಿ ಬಾಲಿವುಡ್​ನಲ್ಲಿ ನಟ ಹಾಗೂ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. 33 ವರ್ಷದ ರಾಕುಲ್​ ಪ್ರೀತ್​ ಸಿಂಗ್​ ಸೌತ್​ ಸಿನಿ ಇಂಡಸ್ಟ್ರಿ ಸೇರಿದಂತೆ ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

2001ರಲ್ಲಿ ರೆಹನಾ ಹೈ ತೆರೆ ದಿಲ್ ಮೇನ್ ಸಿನಿಮಾ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದ್ದರು. ಫಾಲ್ತು, ಅಜಬ್ ಗಜಬ್, ಮೋಹಿನಿ, ವೆಲ್‌ ಕಮ್ ಟು ಕರಾಚಿ, ರಂಗ್ರೇಜ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದು, ಕೂಲಿ ನಂ 1, ವೆಲ್‌ ಕಮ್ ಟು ನ್ಯೂಯಾರ್ಕ್, ಬೆಲ್ ಬಾಟಮ್ ಸೇರಿದಂತೆ ಜಾಕಿ ಭಗ್ನಾನಿ ಹಲವು ಸಿನಿಮಾಗಳನ್ನು ನಿರ್ಮಿಸಿದ್ದಾರೆ. ರಾಕುಲ್ ಕೂಡ ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಕೆಲವು ಸಿನಿಮಾಗಳು ಪೂರ್ಣಗೊಳ್ಳುವ ಹಂತದಲ್ಲಿವೆ.