ನ್ಯೂಸ್

ಕಾಲಿವುಡ್​ ಎಂಟ್ರಿ ಕುರಿತು ಸ್ಪಷ್ಟನೆ ಕೊಟ್ಟ ರಕ್ಷಿತ್​ ಶೆಟ್ಟಿ …

chetannadiger

ಬೆಂಗಳೂರು: ರಕ್ಷಿತ್​ ಶೆಟ್ಟಿಗೆ ತಮಿಳಿನಿಂದ ಒಂದು ಆಫರ್​ ಬಂದಿದೆ. ಈ ಬಾರಿ ದೊಡ್ಡ ಅವಕಾಶವೇ ಸಿಕ್ಕಿದೆ. ಲೋಕೇಶ್​ ಕನಕರಾಜ್​ ನಿರ್ದೇಶನದಲ್ಲಿ ವಿಜಯ್​ ಅಭಿನಯಿಸುತ್ತಿರುವ 'ದಳಪತಿ 67' ಎಂಬ ಹೊಸ ಚಿತ್ರದಲ್ಲಿ ರಕ್ಷಿತ್​ಗೆ ನಟಿಸುವುದಕ್ಕೆ ಕೇಳಲಾಗಿದೆ ಎಂಬ ಸುದ್ದಿಯೊಂದು ಇತ್ತೀಚೆಗೆ ಕೇಳಿ ಬಂದಿತ್ತು. ಆದರೆ, ಇದು ನಿಜವೋ? ಸುಳ್ಳೋ? ಎಂಬ ಬಗ್ಗೆ ರಕ್ಷಿತ್​ ಸ್ಪಷ್ಟನೆ ನೀಡಿರಲಿಲ್ಲ.

ಈಗ ಅವರು ತಮ್ಮ ಮುಂದಿನ ಚಿತ್ರಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಒಂದು ಟ್ವೀಟ್​ ಮಾಡುವ ಮೂಲಕ ತಾವು ಕಾಲಿವುಡ್​ಗೆ ಹೋಗುತ್ತಿಲ್ಲ, ವಿಜಯ್​ ಚಿತ್ರದಲ್ಲಿ ನಟಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

''ಸಪ್ತ ಸಾಗರದಾಚೆ ಎಲ್ಲೋ' ಚಿತ್ರದ ನಂತರ ಮುಂದಿನ ಚಿತ್ರಗಳ ಬಗ್ಗೆ ಸ್ಪಷ್ಟತೆ ಇದೆ. ಮೊದಲು 'ಆರ್​ಎ', 'ಪಿಕೆ 1 ಮತ್ತು 2', 'ಎಂ2ಎಂ'. ಈ ನಾಲ್ಕು ಚಿತ್ರಗಳಿಂದ ನನಗೆ ನಿದ್ದೆಯೇ ಬರುತ್ತಿಲ್ಲ. ಸದ್ಯಕ್ಕೆ 'ಕಿರಿಕ್​ ಪಾರ್ಟಿ 2' ಬಗ್ಗೆಯೂ ಯೋಚನೆ ಇಲ್ಲ. ಮಿಕ್ಕಂತೆ ಇಂಟರ್​ನೆಟ್​ನಲ್ಲಿ ಬರುವ ಸುದ್ದಿಗಳೆಲ್ಲ ಸುಳ್ಳು' ಎಂದು ಬರೆದುಕೊಂಡಿದ್ದಾರೆ.

ಈ ಪೈಕಿ, 'ಆರ್​ಎ' ಎಂದರೆ 'ರಿಚರ್ಡ್​ ಆಂಟನಿ'. 'ಪಿಕೆ 1 ಮತ್ತು 2' ಅಂದರೆ 'ಪುಣ್ಯಕೋಟಿ 1 ಮತ್ತು 2'. ಈ ಚಿತ್ರಗಳ ಬಗ್ಗೆ ಈಗಾಗಲೇ ಸುದ್ದಿಯಾಗಿದೆ. ಕೊನೆಯಲ್ಲಿರುವ 'ಎಂ2ಎಂ' ಯಾವುದು? ಎಂಬ ಪ್ರಶ್ನೆ ಎಲ್ಲರಲ್ಲೂ ಇದೆ. ಅದು 'ಮಿಡ್​ನೈಟ್​ ಟು ಮೋಕ್ಷ' ಎಂಬ ಇನ್ನೊಂದು ಚಿತ್ರ ಎಂದು ಹೇಳಲಾಗುತ್ತಿದೆ. ಈ ನಾಲ್ಕು ಚಿತ್ರಗಳು ಮುಗಿಯುವುದಕ್ಕೆ ಐದಾರು ವರ್ಷಗಳಾದರೂ ಬೇಕು. ಅಲ್ಲಿಗೆ ರಕ್ಷಿತ್​ ಶೆಟ್ಟಿ, ಕಾಲಿವುಡ್​ಗೆ ಹೋಗುತ್ತಿರುವ ವಿಷಯವನ್ನು ಸ್ವತಃ ಅಲ್ಲಗೆಳೆದಿದ್ದಾರೆ.

ಇನ್ನು, 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರದ ಚಿತ್ರೀಕರಣ ಅರ್ಧ ಮುಗಿದಿದ್ದು, ಸದ್ಯದಲ್ಲೇ ಸಂಪೂರ್ಣವಾಗಿ, ಈ ವರ್ಷದ ಜುಲೈ ಅಥವಾ ಆಗಸ್ಟ್​ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.