More

    ಡಾ: ವಿಷ್ಣು ಸ್ಮಾರಕ ಉದ್ಘಾಟನೆ; ಇದು ಹೋರಾಟವಲ್ಲ, ತಪಸ್ಸು ಎಂದ ಡಾ. ಭಾರತಿ ವಿಷ್ಣುವರ್ಧನ್​

    ಮೈಸೂರು: ’13 ವರ್ಷದ ಹೋರಾಟ ಅಂತ ನಾನು ಹೇಳುವುದಿಲ್ಲ. ನಾನು ಇದನ್ನು ತಪಸ್ಸು ಅಂತ ಹೇಳೋದಕ್ಕೆ ಇಷ್ಟಪಡುತ್ತೇನೆ’ ಎಂದು ಹಿರಿಯ ನಟಿ ಡಾ. ಭಾರತಿ ವಿಷ್ಣುವರ್ಧನ್​ ಅಭಿಪ್ರಾಯಪಟ್ಟಿದ್ದಾರೆ.

    ಇದನ್ನೂ ಓದಿ: ಅಭಿಮಾನ್ ಸ್ಟುಡಿಯೋದಲ್ಲಿರುವ ಡಾ. ವಿಷ್ಣುವರ್ಧನ್​ ಪುಣ್ಯಭೂಮಿ ತೆರವು ಮಾಡೋದಕ್ಕೆ ಬಿಡುವುದಿಲ್ಲ ಎಂದು ಅನಿರುದ್ಧ

    ಮೈಸೂರು ಮತ್ತು ನಂಜನಗೂಡು ಮಾರ್ಗ ಮಧ್ಯೆ ಇರುವ ಹಾಲಾಳು ಗ್ರಾಮದಲ್ಲಿ ಸ್ಮಾರಕ ನಿರ್ಮಾಣವಾಗಿದೆ. 13 ವರ್ಷಗಳ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದ್ದು, ಭವ್ಯ ಸ್ಮಾರಕ ಉದ್ಘಾಟನೆಗೆ ಅಸಂಖ್ಯಾತ ವಿಷ್ಣು ಅಭಿಮಾನಿಗಳು ಸಾಕ್ಷಿಯಾಗಿದ್ದಾರೆ.

    ಸ್ಮಾರಕ ಉದ್ಘಾಟನೆ ನಂತರ ಮಾತನಾಡಿದ ಭಾರತಿ ವಿಷ್ಣುವರ್ಧನ್, ‘ಇವತ್ತು ಮುಖ್ಯಮಂತ್ರಿಗಳು ಸ್ಮಾರಕ ಲೋಕಾರ್ಪಣೆ ಮಾಡಿದ್ದಾರೆ. ಒಬ್ಬ ತಾಯಿ ಮಗುವಿಗೆ ಜನ್ಮಕೊಡುವಾಗ ಎಷ್ಟು ಸಂಕಟ ಪಡುತ್ತಾಳೋ, ಮಗು ಮಡಿಲಿಗೆ ಬಂದಾಗ ಆ ನೋವನ್ನೆಲ್ಲಾ ಮರೆಯುತ್ತಾಳೆ. ಅದರಂತೆ ನಾವು, ನೀವೆಲ್ಲರೂ ಕಷ್ಟಪಟ್ಟು ಸ್ಮಾರಕ ನಿರ್ಮಾಣಕ್ಕೆ ಹೋರಾಟ ಮಾಡಿದ್ದೇವೆ. ತಾಳ್ಮೆ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಈ ಸ್ಮಾರಕವೇ ಒಂದು ಉದಾಹರಣೆ’ ಎಂದರು.

    ಇದನ್ನೂ ಓದಿ: ವಿಷ್ಣು ಸ್ಮಾರಕ ಉದ್ಘಾಟನೆಗೆ ಕ್ಷಣಗಣನೆ: ಅಭಿಮಾನಿಗಳ ಆರಾಧ್ಯ ದೈವನ ಭವ್ಯ ಸ್ಮಾರಕದಲ್ಲಿ ಏನೇನಿದೆ?

    ಸ್ಮಾರಕ ಪ್ರತಿಷ್ಠಾನ ಮಾಡುವುದು ಹೆಚ್ಚಲ್ಲ, ಅದನ್ನ ನಡೆಸಿಕೊಂಡು ಹೋಗೋದು ನಿಮ್ಮ ಜವಾಬ್ದಾರಿ ಎಂದ ಅವರು, ‘ನಿಧಾನವಾದರೂ ಒಳ್ಳೆಯದೇ ಆಗಿದೆ. ಎಲ್ಲರೂ ನಮ್ಮ ಜೊತೆಗಿರಿ. ಎಲ್ಲರೂ ಒಗ್ಗಟ್ಟಾಗಿರಿ, ಇದೇ ಒಗ್ಗಟ್ಟನ್ನ ಕಾಪಾಡಿಕೊಳ್ಳಿ. ಬೊಮ್ಮಾಯಿ ಅವರು ಚಿತ್ರರಂಗದ ಪರವಾಗಿದ್ದಾರೆ. ಅವರೇ ಮುಂದುವರೆದರೆ ಒಳ್ಳೆಯ ಕೆಲಸಗಳನ್ನು ಮಾಡುತ್ತಾರೆ. ಅವರನ್ನೂ ನಾವು ಉಳಿಸಿಕೊಳ್ಳೋಣ. ಅವರಿಗೆ ಒಳ್ಳೆಯದಾಗಲಿ’ ಎಂದು ಭಾರತಿ ಅವರು ಈ ಸಂದರ್ಭದಲ್ಲಿ ಹೇಳಿದರು.

    ವಿಷ್ಣು ಸ್ಮಾರಕ ಉದ್ಘಾಟನೆ: ಬೆಂಗಳೂರಿಂದ ಮೈಸೂರಿನವರೆಗೆ 1000 ರಥಯಾತ್ರೆ, ದಾರಿಯುದ್ದಕ್ಕೂ ಕಟೌಟ್ ಜಾತ್ರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts