ನ್ಯೂಸ್

ಹುಟ್ಟುಹಬ್ಬದಂದು ನಾಗಿನ್​ ಡ್ಯಾನ್ಸ್​​ ಮಾಡುತ್ತಿದ್ದ ವೇಳೆ ನಾಗರಹಾವು ಪ್ರತ್ಯಕ್ಷ: ಅದನ್ನು ಕಂಡು ಆತ ಮಾಡಿದ್ದಿಷ್ಟು..

Webdesk - Naveen Kamakeri

ಅಲ್ವಾರ್​: ಹುಟ್ಟುಹಬ್ಬದ ಮೋಜಿನಲ್ಲಿದ್ದ ಯುವಕನೊಬ್ಬ ಕುಡಿದ ಮತ್ತಿನಲ್ಲಿ ಹಾವನ್ನು ಕೈಯಲ್ಲಿ ಹಿಡಿದು ಕಚ್ಚಿಸಿಕೊಂಡಿರುವ ಘಟನೆ ರಾಜಸ್ಥಾನದ ಅಲ್ವಾರ್​ ಬಳಿ ನಡೆದಿದೆ.

ಜಿಲ್ಲೆಯ ಬನ್ಸೂರ್ ಪಟ್ಟಣಕ್ಕೆ ಸೇರಿದ ದೀಪಕ್ ಮೇಘವಾಲ್ ಎಂಬ ಯುವಕ ತನ್ನ ಹುಟ್ಟುಹಬ್ಬದ ಪಾರ್ಟಿಯಲ್ಲಿ ಡಿಜೆಯಲ್ಲಿ ನಾಗಿನ್ ನೃತ್ಯವನ್ನು ಪ್ರದರ್ಶಿಸುತ್ತಿದ್ದನು. ಈ ವೇಳೆ ನಿಜವಾದ ನಾಗರಹಾವು ಅಲ್ಲಿಗೆ ಬಂದಿದ್ದು, ಕೈಯಲ್ಲಿ ಹಾವನ್ನು ಹಿಡಿದುಕೊಂಡು ನೃತ್ಯ ಮಾಡಲು ಆತ ಶುರು ಮಾಡಿದ್ದಾನೆ.

 ಇದನ್ನೂ ಓದಿ: ಹುಡುಗಿ ಜತೆಗೆ ಪ್ರೀತಿ, ಪ್ರಣಯ: ಕೋಪಗೊಂಡ ಮನೆಯವರು ಯುವಕನಿಗೆ ಮಾಡಿದ್ದಿಷ್ಟು..

ಆದರೆ ಯುವಕನ ಈ ಕೃತ್ಯದಿಂದ ಕೋಪಗೊಂಡ ನಾಗರಾಜ ಕೋಪದಿಂದ ಯುವಕನಿಗೆ ಕಚ್ಚಿದ್ದಾನೆ. ಆತ ಅದನ್ನು ಕೈಯಲ್ಲಿ ಹಿಡಿದು ಡ್ಯಾನ್ಸ್ ಮಾಡಲು ಆರಂಭಿಸಿದಾಗ ಹಾವು ಕಚ್ಚಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ವಿಡಿಯೋದಲ್ಲಿ ಜನರು ದೀಪಕ್ ನನ್ನು ಬೈಕ್ ನಲ್ಲಿ ಕೂರಿಸಿಕೊಂಡು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವುದು ಕಂಡು ಬಂದಿದೆ. ಅಲ್ಲದೇ, ಆಸ್ಪತ್ರೆಗೆ ಹೋಗಬೇಕಾದರೂ ಸಹ ಆತನ ಕೈಯಲ್ಲಿ ಹಾವನ್ನು ಸಹ ನೋಡಬಹುದಾಗಿದೆ.

ಈ ಕುರಿತು ಮಾತನಾಡಿರುವ ಆತನ ಸಂಬಂಧಿಕರು, ಹುಟ್ಟುಹಬ್ಬ ಆಚರಿಸಿಕೊಂಡಿದ್ದ ದೀಪಕ್ ಕುಡಿದ ಅಮಲಿನಲ್ಲಿ ಹಾವನ್ನು ಹಿಡಿದಿದ್ದಾನೆ. ಅವರು ಬಹಳಷ್ಟು ನಿರಾಕರಿಸಿದರೂ ಆತ ಒಪ್ಪಲಿಲ್ಲ. ರಾತ್ರಿಯೇ ಆತನನ್ನು ಜೈಪುರ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಿತಿ ಇನ್ನೂ ಗಂಭೀರವಾಗಿದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್​)