ಹುಡುಗಿ ಜತೆಗೆ ಪ್ರೀತಿ, ಪ್ರಣಯ: ಕೋಪಗೊಂಡ ಮನೆಯವರು ಯುವಕನಿಗೆ ಮಾಡಿದ್ದಿಷ್ಟು..

police
ಸಾಂದರ್ಭಿಕ ಚಿತ್ರ
Published on

ನಾಸಿಕ್: ಪ್ರೇಮ ಪ್ರಕರಣದಲ್ಲಿ ಯುವಕನೊಬ್ಬ ಹತ್ಯೆಗೀಡಾದ ಆಘಾತಕಾರಿ ಘಟನೆ ಮಹಾರಾಷ್ಟ್ರದ ನಾಸಿಕ್​ ಬಳಿ ನಡೆದಿದೆ.

ಘಟನೆಗೆ ಸಂಬಂಧಿಸಿದಂತೆ ವಸಂತ ಕೇಶವ ಜಾಧವ್, ಸಂದೀಪ್ ವಸಂತ ಜಾಧವ್, ಸುನೀಲ್ ವಸಂತ ಜಾಧವ್ ಮತ್ತು ನಿಖಿಲ್ ಸಂದೀಪ್ ಜಾಧವ್ ಎಂಬ ಆರೋಪಿಗಳನ್ನು ಬಂಧಿಸಲಾಗಿದ್ದು, ಪ್ರತೀಕ್ ಸುದಮ್ ಅಹೆರ್ ಎಂಬಾತನೇ ಮೃತ ದುರ್ದೈವಿಯಾಗಿದ್ದಾನೆ.

ಯೆವಲ ತಾಲೂಕಿನ ಮುಖೇಡ್‌ನ ಪ್ರತೀಕ್ ಸುದಮ್ ಅಹೆರ್ ಅದೇ ಗ್ರಾಮದ ಹುಡುಗಿಯನ್ನು ಪ್ರೀತಿಸುತ್ತಿದ್ದನು. ಅವಳ ಮನೆಯವರು ಕೋಪಗೊಂಡು ಆತನನ್ನು ಏಕಾಂತ ಸ್ಥಳಕ್ಕೆ ಕರೆಸಿ ತೀವ್ರವಾಗಿ ಥಳಿಸಿದ್ದಾರೆ. ಶನಿವಾರ ನಡೆದ ಘಟನೆಯ ಬಳಿಕ ಗಂಭೀರವಾಗಿ ಗಾಯಗೊಂಡಿದ್ದ ಯುವಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ನಾಸಿಕ್‌ಗೆ ಸ್ಥಳಾಂತರಿಸಲಾಗಿತ್ತು. ಆದರೆ, ಚಿಕಿತ್ಸೆ ವೇಳೆ ಆತ ಮೃತಪಟ್ಟಿದ್ದಾನೆ.

ಬಳಿಕ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಪ್ರಕರಣದಲ್ಲಿ ಶಂಕಿತ ಆರೋಪಿಗಳ ವಿರುದ್ಧ ಯೇವಳ ತಾಲೂಕಾ ಪೊಲೀಸ್ ಠಾಣೆಯಲ್ಲಿ ಬಲವಂತವಾಗಿ ಹೊಡೆದು ಕೊಲೆ ಮಾಡಿರುವ ಪ್ರಕರಣ ದಾಖಲಾಗಿದೆ. ಇದೇ ವೇಳೆ ಈ ಘಟನೆಯಿಂದ ಮುಖೇಡ್ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net