ನ್ಯೂಸ್

3ನೇ ಚಿತ್ರಕ್ಕೂ ವಿವಾದವೇ ಶಾಪ! ಮಲ್ಟಿಪ್ಲೆಕ್ಸ್​ನಿಂದ ಹೊರಬಿತ್ತು ಯುವ ನಟನ ಸಿನಿಮಾ

ತೆಲಂಗಾಣ: ಕಳೆದ ಒಂದೂವರೆ ತಿಂಗಳಿಂದ ಟಾಲಿವುಡ್​ನಲ್ಲಿ ದೊಡ್ಡ ವಿವಾದವೊಂದು ಹರಿದಾಡುತ್ತಿದ್ದು, ಇದು ತೆಲುಗು ಚಿತ್ರರಂಗದವರಿಗೆ ಬಗೆಹರಿಯದ ತಲೆನೋವಾಗಿ ಪರಿಣಮಿಸಿದೆ. ಪ್ರೀತಿ ಹೆಸರಲ್ಲಿ ನಂಬಿಕೆ ದ್ರೋಹ ಬಗೆದಿರುವ ಯುವನಟ ರಾಜ್ ತರುಣ್​, ವಂಚನೆ ಮಾಡಿ, ಸಹ ನಟಿ ಮಾಳ್ವಿ ಮಲ್ಹೋತ್ರಾ ಜತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ನಟನ ಪ್ರೇಯಸಿ ಲಾವಣ್ಯ ನರಸಿಂಗಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸದ್ಯ ಇವರಿಬ್ಬರ ಪ್ರಕರಣದಲ್ಲಿ ದಿನಕ್ಕೊಂದು ಟ್ವಿಸ್ಟ್​ ಎದುರಾಗುತ್ತಿದ್ದು, ಅದ್ಯಾಕೋ ನಂಬಿಕೆ ದ್ರೋಹ ಕೇಸ್​ಗೆ ಮುಕ್ತಿ ಸಿಗುವ ಯಾವ ಲಕ್ಷಣಗಳು ಕಂಡುಬಂದಿಲ್ಲ. ಈ ವಿವಾದದಲ್ಲಿ ಸಿಲುಕಿರುವ ರಾಜ್​ ಹೆಗಲೇರಿರುವ ಸಂಕಷ್ಟದ ಮೂಟೆ ಕೆಳಗಿಳಿಯುವ ಯಾವ ಮುನ್ಸೂಚನೆಯು ಸಿಗುತ್ತಿಲ್ಲ ಎಂಬುದೇ ಆಶ್ಚರ್ಯ.

ವಿವಾದದ ಅಲೆಯಲ್ಲಿ ಸಿಲುಕಿರುವಾಗಲೇ ರಾಜ್ ತರುಣ್ ಅಭಿನಯದ ಮೂರು ಸಿನಿಮಾಗಳ ಪೈಕಿ ಎರಡು ಬಹುನಿರೀಕ್ಷಿತ ಚಿತ್ರಗಳನ್ನು ಆಯಾ ನಿರ್ಮಾಪಕರ ಪ್ಲ್ಯಾನಿಂಗ್ ಮೇರೆಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳಿಸಲಾಯಿತು. ಆದ್ರೆ, ನಿರ್ಮಾಪಕರ ಉದ್ದೇಶ, ಲೆಕ್ಕಾಚಾರಗಳೆಲ್ಲವೂ ಇಲ್ಲಿ ತಲೆಕೆಳಗಾಯಿತು. ರಾಜ್ ಮತ್ತು ಲಾವಣ್ಯ ಪ್ರೇಮ ವಿವಾದವನ್ನು ತಮ್ಮ ಚಿತ್ರದ ಪ್ರಚಾರಕ್ಕೆ ಬಳಸಿಕೊಂಡ ಚಿತ್ರ ತಯಾರಕರಿಗೆ ಎದುರಾಗಿದ್ದು ಸೋಲು ಮಾತ್ರ. ನಟನ ಎರಡು ಸಿನಿಮಾಗಳು ಕೂಡ ಜನರಿಲ್ಲದೆ ಥಿಯೇಟರ್​ನಿಂದ ಹೊರಬಿತ್ತು. ಇದೀಗ ಆ ಸಾಲಿಗೆ ಮತ್ತೊಂದು ಚಿತ್ರ ಸೇರ್ಪಡೆಗೊಂಡಿದೆ.

ರಾಜ್ ತರುಣ್ ಅಭಿನಯದ ಕಾಮಿಡಿ ಜಾನರ್​ನ 'ಭಲೇ ಉನ್ನಾದೆ' ಸಿನಿಮಾ ಇದೇ ಸೆ.13ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿದ್ದೇ ಆದರೂ ಪ್ರೇಕ್ಷಕರಿಲ್ಲದೆ ಖಾಲಿ ಹೊಡೆಯುತ್ತಿದೆ. ಅದರಲ್ಲೂ ಮಲ್ಟಿಪ್ಲೆಕ್ಸ್​ಗಳಲ್ಲಿ ಹಾಕಲಾಗಿದ್ದ ಸಿನಿಮಾವನ್ನು ನೋಡಲು ಜನರು ಬಾರದ ಹಿನ್ನೆಲೆ ಇದೀಗ ಚಿತ್ರವನ್ನು ಬೇರೆ ಯಾವುದೇ ಆಯ್ಕೆ ಇಲ್ಲದೆ ಕೆಲವು ಚಿತ್ರಮಂದಿರದಿಂದ ಕಿತ್ತು ಹಾಕಲಾಗಿದೆ. ಸದ್ಯ ಇದು ಚಿತ್ರತಂಡಕ್ಕೆ ದೊಡ್ಡ ಹೊಡೆತವನ್ನೇ ನೀಡಿದ್ದು, ಯುವ ನಟನ ಕರಿಯರ್​ಗೆ ಪೆಟ್ಟು ನೀಡಿದೆ,(ಏಜೆನ್ಸೀಸ್).