ನ್ಯೂಸ್

VIDEO | 'ಕರಿಮಣಿ ಮಾಲೀಕ' ಅಂತ ಕರಿಬೇಡಿ: ಯಾಕೆಂದು ಕಾರಣ ಬಿಚ್ಚಿಟ್ಟ ರಾಹುಲ್ಲಾ!

ಮೋಹನ್​ ಶೆಟ್ಟಿ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಜಗತ್ತಿನ ಯಾವುದೇ ಮೂಲೆಯಲ್ಲಿ ಎಂತಹದ್ದೇ ಘಟನೆ ಸಂಭವಿಸಲಿ ಅದು ಕೆಲವೇ ಕ್ಷಣದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುವ ಮೂಲಕ ಪ್ರತಿಯೊಬ್ಬರ ಗಮನಕ್ಕೂ ಬರುತ್ತದೆ. ನೆಟ್ಟಿಗರ ಗಮನಸೆಳೆಯುವ ವಿಡಿಯೋ ತುಣಕುಗಳು ಕ್ಷಣಮಾತ್ರದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತವೆ. ಕೆಲವು ಘಟನೆಗಳ ವಿಡಿಯೋಗಳು ಸಿಕ್ಕಾಪಟ್ಟೆ ಹರಿದಾಡಿ, ಹೊಸ ಟ್ರೆಂಡ್​ ಸೆಟ್​ ಮಾಡುತ್ತವೆ. ಆ ಪೈಕಿ ಕಳೆದ ತಿಂಗಳು ಕನ್ನಡ ಚಿತ್ರದ ಒಂದು ಹಾಡಿನ ಸಾಲಂತೂ ಅಬ್ಬಬ್ಬಾ ನಿರೀಕ್ಷೆಗೂ ಮೀರಿ ವೈರಲ್ ಆಯಿತು. ಇದು ಟ್ರೆಂಡ್​ ಆಗಿದ್ದೆಷ್ಟು ನಿಜವೋ ಅಷ್ಟೇ ಎಡವಟ್ಟು ಕೂಡ ಮಾಡಿದೆ.

ರಿಯಲ್ ಸ್ಟಾರ್, ನಟ ಉಪೇಂದ್ರ ನಿರ್ದೇಶಿಸಿ, ನಟಿಸಿದ ಉಪೇಂದ್ರ ಸಿನಿಮಾದಲ್ಲಿ 'ಓ ನಲ್ಲ...ನೀನಲ್ಲ, ಕರಿಮಣಿ ಮಾಲೀಕ ನೀನಲ್ಲ' ಎಂಬ ಸಾಲಿನ ಹಾಡಿತ್ತು. ಈ ಹಾಡು ಅಂದು ಅಷ್ಟು ಜನಪ್ರಿಯತೆ ಪಡೆಯಲಿಲ್ಲ. ಆದರೆ, ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಯುವಕನೊಬ್ಬ ಈ ಸಾಂಗ್​ನ ಮೊದಲ ಸಾಲಿಗೆ ಮಾಡಿದ ರೀಲ್ಸ್​ವೊಂದು ಅದೇನೋ ನೆಟ್ಟಿಗರ ಗಮನಸೆಳೆದು ಸಿಕ್ಕಾಪಟ್ಟೆ ಟ್ರೆಂಡಿಂಗ್ ಆಯಿತು. ಇದಾದ ಕೂಡಲೇ ರಾಹುಲ್ಲಾ ಎಂಬ ಯುವಕನ ಹೆಸರು ಕೂಡ ಭಾರೀ ಟ್ರೆಂಡ್ ಆಗಲು ಪ್ರಾರಂಭವಾಯಿತು.

'ಓ ನಲ್ಲ...ನೀನಲ್ಲ. ಕರಿಮಣಿ ಮಾಲೀಕ ರಾಹುಲ್ಲಾ' ಎಂದು ಹಾಡಲು ಪ್ರಾರಂಭಿಸಿದರು. ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿತು. ಆದ್ರೆ, ನೀನಲ್ಲ ಬದಲಿಗೆ ರಾಹುಲ್ಲಾ ಅನ್ನೋ ಟ್ರೆಂಡ್​ ಯಾಕೋ ರಾಹುಲ್ ಎಂಬ ಯುವಕನಿಗೆ ತೊಂದರೆಯಾಗುತ್ತಿದೆ ಎಂಬುದು ಕೆಲವು ದಿನಗಳಿಂದ ಸ್ಪಷ್ಟವಾಗುತ್ತಿದೆ. ಈ ಬೆನ್ನಲ್ಲೇ ಮಾತನಾಡಿದ ರಾಹುಲ್ಲಾ, 'ನನ್ನನ್ನು ರಾಹುಲ್ಲಾ ಅಂತ ಕರೆಯಬೇಡಿ' ಎಂದರು.

ಅಸಲಿಗೆ ರಾಹುಲ್ಲಾ ಹೇಳಿದ್ದೇನು? ತನ್ನ ಮದುವೆ ವಿಚಾರದ ಬಗ್ಗೆ ಹೇಳಿಕೊಂಡಿದ್ದೇನು? ಎಂಬುದನ್ನು ತಿಳಿಯಲು ಈ ಕೆಳಗಿನ ವಿಡಿಯೋ ಮೇಲೆ ಕ್ಲಿಕ್ ಮಾಡಿ.