More

    ಹಾನಗಲ್ಲ ಗ್ಯಾಂಗ್‌ರೇಪ್ ಪ್ರಕರಣದ ಚಾರ್ಜ್‌ಶೀಟ್ ಸಲ್ಲಿಕೆ; 19 ಆರೋಪಿತರ ಮೇಲೆ ತನಿಖೆ; 873 ಪುಟಗಳ ದೋಷಾರೋಪಣ ಪಟ್ಟಿ ಸಲ್ಲಿಕೆ

    ಹಾವೇರಿ: ಹಾನಗಲ್ಲ ತಾಲೂಕು ನಾಲ್ಕರ ಕ್ರಾಸ್ ಬಳಿ ಜನವರಿ 8ರಂದು ನಡೆದಿದ್ದ ನೈತಿಕ ಪೊಲೀಸ್‌ಗಿರಿ ಮತ್ತು ಸಾಮೂಹಿಕ ಅತ್ಯಾಚಾರ ಪ್ರಕರಣದ ತನಿಖೆಯನ್ನು ಪೊಲೀಸರು ಪೂರ್ಣಗೊಳಿಸಿದ್ದು, 19 ಆರೋಪಿತರ ಮೇಲೆ ಬರೋಬ್ಬರಿ 873 ಪುಟಗಳ ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ದೇಶಾದ್ಯಂತ ಸುದ್ದಿಯಾಗಿದ್ದ ಗ್ಯಾಂಗ್ ರೇಪ್ ಪ್ರಕರಣ ರಾಜ್ಯ ಸರ್ಕಾರಕ್ಕೆ ಭಾರಿ ಮುಜುಗರಕ್ಕೆ ಕಾರಣವಾಗಿತ್ತು. ಘಟನೆ ನಡೆದು 58 ದಿನದೊಳಗೆ ಎಸ್‌ಪಿ ಅಂಶುಕುಮಾರ ಅವರ ಮಾರ್ಗದರ್ಶನದಲ್ಲಿ ಪ್ರಕರಣದ ತನಿಖಾಧಿಕಾರಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿ. ಗೋಪಾಲ ನೇತೃತ್ವದ ತಂಡ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದೆ. ಪ್ರಕರಣದ ಇಂಚಿಂಚು ಮಾಹಿತಿಯನ್ನು ಕಲೆ ಹಾಕಿರುವ ಪೊಲೀಸರು ಆರೋಪಿತರ ವಿರುದ್ಧದ ಆರೋಪದ ತನಿಖೆ, ಪ್ರಮುಖ ಸಾಕ್ಷಾಧಾರಗಳನ್ನು ಕಲೆ ಹಾಕಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಏಳು ಜನರು ಗ್ಯಾಂಗ್ ರೇಪ್ ಮಾಡಿದ ಆರೋಪ ಎದುರಿಸುತ್ತಿದ್ದು, ಉಳಿದ 12 ಆರೋಪಿತರು ಹಲ್ಲೆ, ಜೀವ ಬೆದರಿಕೆ, ಅಪಹರಣ ಮತ್ತು ಮಾನಭಂಗ ಮಾಡಿದ ಆರೋಪದಲ್ಲಿ ಬಂಧಿತರಾಗಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಪೊಲೀಸರ ಎದುರು ನಡೆದ ಐಡೆಂಟಿಫಿಕೇಶನ್ ಪರೇಡ್‌ನಲ್ಲಿ ಸಂತ್ರಸ್ತೆ ಪ್ರಮುಖ ಏಳು ಆರೋಪಿತರನ್ನು ಗುರುತಿಸಿದ್ದಾರೆ. ಉಳಿದ 12 ಆರೋಪಿತರಲ್ಲಿ ಕೆಲವರನ್ನು ಗುರುತಿಸಿದ್ದಾರೆ. ಸಿಸಿಟಿವಿ ಕ್ಯಾಮರಾದಲ್ಲಿ ಕೆಲವರ ಸಾಕ್ಷೃಗಳು ದೊರೆತಿವೆ. 20 ದಿನಗಳ ಹಿಂದೆಯೇ ತನಿಖೆ ಪೂರ್ಣಗೊಂಡಿತ್ತು. ವಿಧಿವಿಜ್ಞಾನ ಪ್ರಯೋಗಾಲಯದ ಹಾಗೂ ಡಿಎನ್‌ಎ ವರದಿಗಾಗಿ ಕಾಯುತ್ತಿದ್ದರು. ವರದಿ ಕೈಗೆ ಸಿಕ್ಕ ಕೂಡಲೇ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ ಎನ್ನಲಾಗಿದೆ.

    ಪ್ರಕರಣದ ಹಿನ್ನೆಲೆ

    ನಾಲ್ಕರ ಕ್ರಾಸ್‌ನ ಈಡಿಗಾಸ್ ಲಾಡ್ಜ್‌ನಲ್ಲಿ ಜ.8ರಂದು ಮುಸ್ಲಿಂ ಮಹಿಳೆಯೊಬ್ಬರು ಪುರುಷರೊಬ್ಬರೊಂದಿಗೆ ರೂಮ್‌ನಲ್ಲಿದ್ದಾಗ ಯುವಕರ ಗುಂಪೊಂದು ದಾಳಿ ನಡೆಸಿ ಇಬ್ಬರ ಮೇಲೆಯೂ ಹಲ್ಲೆ ನಡೆಸಿತ್ತು. ರೂಮ್‌ನಿಂದ ಹೊರಗೆ ಎಳೆತಂದು ಮತ್ತೆ ಹಲ್ಲೆಗೈದು ಜೀವಬೆದರಿಕೆ ಹಾಕಿದ್ದರು. ಪುರುಷನನ್ನು ಅಪಹರಿಸಿ ಆತನನ್ನು ಕೊಲ್ಲಲು ಯತ್ನಿಸಿ ನಂತರ ಬಸ್ ನಿಲ್ದಾಣದ ಬಳಿ ಬಿಟ್ಟಿದ್ದರು. ಮಹಿಳೆಯನ್ನು ಬಾಳೂರ ಕೆರೆ ಸಮೀಪ ಕಚ್ಚಾ ರಸ್ತೆಯಲ್ಲಿ ಕರೆದೊಯ್ದು ಹಲ್ಲೆ ಮಾಡಿದ್ದರು. ನಂತರ ಮಾವಕೊಪ್ಪ ಅರಣ್ಯ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಎರಡು ಕಡೆಗಳಲ್ಲಿ ಏಳು ಜನರು ಸೇರಿ ಸಾಮೂಹಿಕ ಅತ್ಯಾಚಾರ ಮಾಡಿ ಪೈಶಾಚಿಕ ಕೃತ್ಯ ಎಸಗಿದ್ದರು. ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    86 ಸಾಕ್ಷಿ ಸಂಗ್ರಹ
    ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 86 ಸಾಕ್ಷಿಗಳನ್ನು ಸಂಗ್ರಹಿಸಿದ್ದಾರೆ. ಲಾಡ್ಜ್‌ನ ಸಿಬ್ಬಂದಿ, ರಕ್ತದ ಮಾದರಿ, ಕ್ರೈಂ ಸೀನ್‌ನಲ್ಲಿ ಸಿಕ್ಕ ಬಟ್ಟೆಗಳ ಮಾದರಿ, ಸಂತ್ರಸ್ತೆ ಹಾಗೂ ಆರೋಪಿತರ ಕೂದಲು ಮಾದರಿಯ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಗಳು, ಮತ್ತಿತರ ಅಂಶಗಳು ಸಾಕ್ಷಿಗಳಾಗಿವೆ. ಡಿಎನ್‌ಎ ಪರೀಕ್ಷೆಯನ್ನೂ ಮಾಡಿಸಿದ್ದು, ಅತ್ಯಾಚಾರ ನಡೆದಿರುವುದು ವರದಿಯಲ್ಲಿ ಖಚಿತವಾಗಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts