ಹೈದರಾಬಾದ್: ಮುಂಬರುವ ಕೆಲವೇ ದಿನಗಳಲ್ಲಿ ಚುನಾವಣೆ ನಡೆಯಲಿರುವ ತೆಲಂಗಾಣದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಆಡಳಿತರೂಢ ಬಿಆರ್ಎಸ್, ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.
ಚುನಾವಣೆಯ ಹೊಸ್ತಿಲಲ್ಲಿ ಮತದಾರರನ್ನು ತಮ್ಮತ್ತ ಸೆಳೆಯಲು ಒಂದಿಲ್ಲೊಂದು ತಂತ್ರಕ್ಕೆ ಕೈ ಹಾಕುತ್ತಿರುವ ಕಾಂಗ್ರೆಸ್ ಪಕ್ಷದ ನಾಯಕರು ತುಸು ಭಿನ್ನವಾಗಿ ಪ್ರಚಾರ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ.
ಇದನ್ನೂ ಓದಿ: ಲಾಂಚ್ಗೂ ಮುನ್ನವೇ ರೋಲ್ ರಾಯ್ಸ್ ಸ್ಪೆಕ್ಟರ್ ಕಾರು ಖರೀದಿಸಿದ ಬಿಲ್ಡರ್; ಈ ಕಾರಣಕ್ಕೆ ಸ್ವ್ಯಾಗ್ ಎಂದ ನೆಟ್ಟಿಗರು
ಇದೀಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಚುನಾವಣಾ ಪ್ರಚಾರದ ವೇಳೆ ಹೈದರಾಬಾದಿನ ಪ್ರತಿಷ್ಠಿತ ಹೋಟೆಲ್ ಒಂದಕ್ಕೆ ಭೇಟಿ ನೀಡಿದ್ದು, ಅವರಿಗೆ ಭರ್ಜರಿ ಸ್ವಾಗತ ದೊರೆತಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆರೆದಿದ್ದವರು ರಾಹುಲ್ ಅವರನ್ನು ಪಿಎಂ ಪಿಎಂ ಎಂದು ಕರೆಯುತ್ತಿರುವುದನ್ನು ನೋಡಬಹುದಾಗಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಾಥ್ ನೀಡಿದ್ದು, ಈ ವೇಳೆ ಅವರು ಯುವಕರ ಜೊತೆ ಸಂವಾದ ನಡೆಸಿದ್ದಾರೆ. ಇತ್ತ ಈ ವಿಡಿಯೋ ಕುರಿತು ಪ್ರತಿಕ್ರಿಯಿಸಿರುವ ಬಿಆರ್ಎಸ್ ನಾಯಕರು ಈ ರೀತಿಯ ಕೆಲಗಳನ್ನು ಮಾಡಿ ಮತ ಪಡೆಯಬಹುದು ಎಂದು ಊಹಿಸಿದ್ದರೆ ಅದು ನಿಮ್ಮ ತಪ್ಪು. ಜನ ಮಾತನಾಡುವವರಿಗಿಂತ ಕೆಲಸ ಮಾಡುವವರಿಗೆ ಮತ ಹಾಕುವುದು ಎಂದು ಪ್ರತಿಕ್ರಿಯಿಸಿದ್ದಾರೆ.