Rahul Gandhi : ಸತತ ಮೂರು ಚುನಾವಣೆಗಳ ಸೋಲನ್ನು ಅನುಭವಿಸಿದ ನಂತರ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ತಮ್ಮ ನಿಲುವನ್ನು ಬದಲಾಯಿಕೊಂಡಿರಬಹುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ (ಆಗಸ್ಟ್ 25) ಸಂದರ್ಶನವೊಂದರಲ್ಲಿ ಪ್ರಶ್ನಿಸಿದ್ದಾರೆ.
ಈ ವೇಳೆ 2013 ರಲ್ಲಿ ರಾಹುಲ್ ಗಾಂಧಿ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಜಾರಿಗೆ ತಂದಿದ್ದ ಸುಗ್ರೀವಾಜ್ಞೆಯು ಶಿಕ್ಷೆಗೊಳಗಾದ ಶಾಸಕ ಲಾಲು ಪ್ರಸಾದ್ ಯಾದವ್ರನ್ನು ರಕ್ಷಿಸಲು ಪ್ರಯತ್ನಿಸಿದ್ದು, ಅದನ್ನು ರಾಹುಲ್ ಸಾರ್ವಜನಿಕವಾಗಿ ತಿರಸ್ಕರಿಸಿದ್ದರು. ಆ ಘಟನೆಯನ್ನು ನೆನಪಿಸಿಕೊಂಡ ಅಮಿತ್ ಶಾ, ಗಾಂಧಿ ಅವರ ಈಗಿನ ನಿಲುವಿನ ಬಗ್ಗೆ ತೀವ್ರ ವ್ಯತ್ಯಾಸವನ್ನು ತೋರಿದರು.
ಇದನ್ನೂ ಓದಿ: ನೀವು ಹೆಚ್ಚು REELS ನೋಡುವ ಅಭ್ಯಾಸ ಹೊಂದಿದ್ದೀರಾ? ಹಾಗಿದ್ರೆ ಈ ತೊಂದರೆಗೆ ಸಿಲುಕಬಹುದು ಎಚ್ಚರ| Reels Addiction
ಅಂದು ಮನಮೋಹನ್ ಸಿಂಗ್ ಲಾಲು ಝಿ ಅವರನ್ನು ರಕ್ಷಿಸಲು ತಂದಿದ್ದ ಸುಗ್ರೀವಾಜ್ಞೆಯನ್ನು ರಾಹುಲ್ ಜೀ ಅವರು ಏಕೆ ಹರಿದು ಹಾಕಿದ್ದರು? ಆ ದಿನ ನೈತಿಕತೆ ಇದ್ದಿದ್ದರೆ, ಈಗ ಏನಾಗಿದೆ? ನೀವು ಸತತ ಮೂರು ಚುನವಣೆಗಳಲ್ಲಿ ಸೋತಿದ್ದೀರಿ ಎಂಬ ಕಾರಣಕ್ಕಾಗಿಯೇ? ಎಂದು ಪ್ರಶ್ನಿಸಿದರು. ಇನ್ನು ಈ ನೈತಿಕ ಮಾನದಂಡಗಳು ಚುನಾವಣೆಗಳಲ್ಲಿನ ಸೋಲು ಗೆಲುವಿನ ನಡುವೆ ಬರುವುದಿಲ್ಲ. ಬದಲಾಗಿ ಅವು ಸೂರ್ಯ ಚಂದ್ರನಂತೆ ಸ್ಥಿರವಾಗಿರಬೇಕು ಎಂದು ಹೇಳಿದರು.
ಮೇವು ಪ್ರಕರಣದಲ್ಲಿ ಶಿಕ್ಷೆಗೊಳಗಾದ ನಂತರ ಆ ಶಾಸಕರಿಗೆ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಈ ಸುಗ್ರೀವಾಜ್ಞೆ 3 ತಿಂಗಳ ಗಡುವನ್ನು ನೀಡಿತ್ತು. ಆದರೆ ಶಿಕ್ಷೆಗೊಳಗಾದ ಸಂಸದರು ಹಾಗೂ ಶಾಸಕರ ಅನರ್ಹತೆ ಕುರಿತು ಸುಪ್ರೀಂ ಕೋರ್ಟ್ ಈ ಆದೇಶವನ್ನು ಹಿಂಪಡೆದಿತ್ತು.
ಸಂದರ್ಶನದ ವೇಳೆ ಅಮಿತ್ ಶಾ, (130 ನೇ ತಿದ್ದುಪಡಿ) ಮಸೂದೆ 2025ನ್ನು ಉಲ್ಲೇಖಿಸಿ, ಈ ಮಸೂದೆಯು ಉನ್ನತ ಚುನಾಯಿತ ಅಧಿಕಾರಿಗಳನ್ನು ಗಂಭೀರ ಕ್ರಿಮಿನಲ್ ಆರೋಪದ ಮೇರೆಗೆ ಸತತ 30 ದಿನಗಳ ಕಸ್ಟಡಿಯಲ್ಲಿ ಇರಿಸಿದರೆ, ಅವರನ್ನು ಸ್ವಯಂಚಾಲಿತವಾಗಿ ತೆಗೆದುಹಾಕುವ ಪ್ರಸ್ತಾಪವಿದೆ.
ಹಾಗೇ ಐದು ವರ್ಷಕ್ಕಿಂತ ಅಥವಾ ಅದಕ್ಕಿಂತ ಹೆಚ್ಚಿನ ದಿನ ಜೈಲು ಶಿಕ್ಷೆಗೆ ಒಳಗಾಗುವುದು ಹಾಗೂ ಪ್ರಧಾನಿ, ಮುಖ್ಯಮಂತ್ರಿ ಹಗೂ ಸಚಿವರನ್ನು ಬಂಧಿಸಿ, 30 ದಿನಗಳ ಕಾಲ ಬಂಧನದಲ್ಲಿಟ್ಟರೆ, ಅವರನ್ನು ಸ್ವಯಂಚಾಲಿತವಾಗಿ ಅಧಿಕಾರದಿಂದ ತೆಗೆದುಹಾಕುವುದನ್ನು ಈ ಮಸೂದೆ ಹೊಂದಿದೆ ಎಂದರು.
ಈ ಮಸೂದೆಯನ್ನು ಬಲವಾಗಿ ಸಮರ್ಥೀಸಿಕೊಂಡ ಶಾ, ಆಡಳಿತಾರೂಢ ಬಿಜೆಪಿ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳಿಗೆ ಇದು ಸಮಾನವಾಗಿ ಅನ್ವಹಿಸುತ್ತದೆ. ಕಾಂಗ್ರೆಸ್ ಪಕ್ಷದಲ್ಲಿ ನೈತಿಕತೆಯನ್ನು ಬೆಂಬಲಿಸುವ ಹಾಗೂ ಆ ನೆಲೆಯನ್ನು ರಕ್ಷಿಸಿಕೊಳ್ಳಲು ಅನೇಕ ಜನ ಇದ್ದಾರೆ ಎಂದರು.
ನಮ್ಮ ನ್ಯಾಯಾಲಯ ಕಾನೂನಿನ ತೀವ್ರತೆಯನ್ನು ಅರ್ಥೈಸಿಕೊಂಡಿದೆ. 30 ದಿನಗಳ ನಂತರ ಒಬ್ಬರು ರಾಜೀನಾಮೆ ನೀಡಬೇಕೆಂದರೆ, ಅದಕ್ಕೂ ಮುನ್ನ ನ್ಯಾಯಾಲಯ ಈ ವ್ಯಕ್ತಿಗೆ ಜಾಮೀನು ನೀಡಬೇಕೆ, ಬೇಡವೇ ಎಂದು ನಿರ್ಧರಿಸುತ್ತದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅರವಿಂದ್ ಕೇಜ್ರಿವಾಲ್ ಜೈಲಿನಿದ್ದಾಗ ಅವರು ರಾಜಿನಾಮೆ ನೀಡಬೇಕು ಎಂದು ವಾದಿಸಲಾಯಿತು. ಈ ಬಗ್ಗೆ ನೈತಿಕವಾಗಿ ರಾಜಿನಾಮೆ ನೀಡಬೇಕು ಎಂದು ನಾವು ನಂಬುತ್ತೇವೆ ಆದರೆ, ಕಾನೂನಿನಲ್ಲಿ ಯಾವುದೇ ಅವಕಾಶ ಇಲ್ಲ ಎಂದು ತಿಳಿಸಿದರು.
ದೇಶದ ಪ್ರಧಾನಿ, ಮುಖ್ಯಮಂತ್ರಿ ಹಾಗೂ ಇನ್ನಿತರ ನಾಯಕರು ಜೈಲಿನಿಂದ ದೇಶವನ್ನು ನಡೆಸಲು ಸಾಧ್ಯವೇ ಎಂದು ಪ್ರಶ್ನಿಸಿದರು. (ಏಜೆನ್ಸೀಸ್)