

Reels Addiction : ಈಗ ಸಾಮಾಜಿಕ ಮಾಧ್ಯಮಗಳ ಯುಗವಾಗಿದ್ದು, ಇತ್ತೀಚೆಗೆ ಇನ್ಸ್ಟಾಗ್ರಾಂ ತುಂಬಾ ಜನಪ್ರಿಯವಾಗಿದೆ. ಅದನ್ನು ಬಳಸುವ ಬಹತೇಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಇನ್ಸ್ಟಾ ರೀಲ್ಸ್ಗೆ ವ್ಯಸನಿಯಾಗುತ್ತಿದ್ದಾರೆ. ಗಂಟೆಗಟ್ಟಲೆ ರೀಲ್ಗಳನ್ನು ನೋಡುತ್ತಾ, ಒಂದರ ನಂತರ ಒಂದರಂತೆ ಸ್ಕ್ರೋಲ್ ಮಾಡುತ್ತಾ ದಿನ ದೂಡುತ್ತಿದ್ದಾರೆ. ಎಲ್ಲರೂ ಶಾರ್ಟ್ಸ್ ಅಥವಾ ರೀಲ್ ನೋಡುವುದರಲ್ಲಿ ಸಮಯ ಕಳೆಯುತ್ತಾರೆ. ಆದರೆ ಅದು ಮಾನವ ದೇಹಕ್ಕೆ ಎಷ್ಟು ಹಾನಿ ಮಾಡಿದೆ ಎಂಬುದು ನಿಮಗೆ ಗೊತ್ತಾ.
ಇತ್ತೀಚಿನ ಅಧ್ಯಯನವು ರೀಲ್ ನೋಡುವುದರಿಂದ ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಕಂಡುಹಿಡಿದಿದೆ. ಒತ್ತಡದ ಮಟ್ಟಗಳು, ಅಧಿಕ ರಕ್ತದೊತ್ತಡಕ್ಕೆ ಈ ಚಟ ಕಾರಣವಾಗಬಹುದು ಎನ್ನಲಾಗಿದೆ. ಮೊಬೈಲ್ ಫೋನ್ಗಳಲ್ಲಿ ಹೆಚ್ಚು ಸಮಯ ಕಳೆಯುವುದರಿಂದ ನಿದ್ರೆಯ ಗುಣಮಟ್ಟ ಹಾನಿಯಾಗುತ್ತದೆ. ಹೃದಯ ಮತ್ತು ಮೆದುಳಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ವರದಿಯಲ್ಲಿ ತಿಳಿದು ಬಂದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಶಾರ್ಟ್ಸ್ ಅಥವಾ ರೀಲ್ಸ್ ನೋಡುವುದನ್ನು ಎಲ್ಲರೂ ಇಷ್ಟ ಪಡುತ್ತಾರೆ. ಬಿಡುವಿನ ವೇಳೆಯಲ್ಲಿ ಬೇರೆ ಕೆಲಸಗಳನ್ನು ಮಾಡುವ ಬದಲು, ಅವರು ರೀಲ್ಸ್ ನೋಡುವುದನ್ನು ಆನಂದಿಸುತ್ತಾರೆ. ಆದರೆ ಯಾವಾಗಲೂ ರೀಲ್ಸ್ ನೋಡುವುದು ಎಷ್ಟು ಅಪಾಯಕಾರಿ ಗೊತ್ತಾ.
(ಏಜೆನ್ಸೀಸ್)
ನಾವು ಸಾಧ್ಯವಾದಷ್ಟು ಬಿಡುವಿನ ವೇಳೆಯನ್ನು ಆಟವಾಡುವುದು ಮತ್ತು ಪುಸ್ತಕಗಳನ್ನು ಓದುವ ಅಭ್ಯಾಸವನ್ನು ರೂಡಿಸಿಕೊಳ್ಳಬೇಕು. ದಿನದ ಹೆಚ್ಚಿನ ಸಮಯ ನಿಮ್ಮ ಮೊಬೈಲ್ ಫೋನ್ನಲ್ಲಿ ರೀಲ್ಗಳನ್ನು ನೋಡುವುದರಿಂದ ನಿಮ್ಮ ಮೆದುಳು ಮತ್ತು ಕಣ್ಣುಗಳಿಗೆ ವಿಶ್ರಾಂತಿ ಸಿಗುವುದಿಲ್ಲ. ಇದು ತಲೆನೋವು ಮತ್ತು ಕಣ್ಣಿನ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಾಗಿ ಜಾಗರೂಕರಾಗಿರಿ, ಎಲ್ಲವನ್ನೂ ಅತಿಯಾಗಿ ಬಳಸುವ ಮೊದಲು ಯೋಚನೆ ಮಾಡಿ.
ಇತ್ತೀಚಿನ ದಿನಗಳಲ್ಲಿ ದೈಹಿಕ ಚಟುವಟಿಕೆ ಕಡಿಮೆಯಾಗುವುದರಿಂದ ರೋಗಗಳು ಹೆಚ್ಚುತ್ತಿವೆ. ಯುವಜನರು ಮಲಗುವ ಮೊದಲು ಮೊಬೈಲ್ ಫೋನ್ಗಳಲ್ಲಿ ಹೆಚ್ಚು ಸಮಯ ಕಳೆಯುವುದರಿಂದ ಮಾನಸಿಕವಾಗಿ ಮತ್ತು ದೈಹಿಕವಾಗಿ ನಮಗೆ ಹಾನಿಕಾರಕ ಎಂದು ಹೇಳಲಾಗಿದೆ.