ನ್ಯೂಸ್

ಮೀಡಿಯಾಗಳ ಸುಳ್ಳು ಸುದ್ದಿ ನಂಬಬೇಡಿ.. ನಾನೇ ವಿಡಿಯೋ ಮೂಲಕ ಸತ್ಯ ಹೇಳುತ್ತೇನೆ: ರಾಹುಲ್ ಗಾಂಧಿ

ನವದೆಹಲಿ: ರಾಜಸ್ಥಾನದ ರಾಜಕೀಯ ಬೆಳವಣಿಗೆಗಳು ದೇಶದ ಗಮನ ಸೆಳೆದಿವೆ. ಸುಮಾರು ವಾರದಿಂದಲೂ ಅಲ್ಲಿ ಭಿನ್ನಾಭಿಪ್ರಾಯಗಳು ಎದ್ದು, ಇದೀಗ ರೆಬಲ್​ ಸಚಿನ್​ ಪೈಲಟ್​ ಅವರು ದೆಹಲಿಗೆ ಹೋಗಿ ಕುಳಿತಿದ್ದಾರೆ.

ಇಷ್ಟೆಲ್ಲ ಆದರೂ ಒಂದೂ ಮಾತನಾಡದಿದ್ದ ರಾಹುಲ್​ ಗಾಂಧಿಯವರು ಇಂದು ಒಂದು ಟ್ವೀಟ್​ ಮಾಡಿ ಕುತೂಹಲ ಮೂಡಿಸಿದ್ದಾರೆ. ಭಾರತೀಯ ಮಾಧ್ಯಮಗಳ ಬಗ್ಗೆ ನೇರವಾದ ಆರೋಪ ಮಾಡಿದ್ದಾರೆ.

ಇಂದು ಭಾರತದ ಹಲವು ಮಾಧ್ಯಮಗಳು ನಿರಂಕುಶ ಪ್ರಭುತ್ವದ ಹಿಡಿತಕ್ಕೆ ಸಿಲುಕಿವೆ. ದ್ವೇಷ, ಸುಳ್ಳುಗಳನ್ನೇ ತುಂಬಿಕೊಂಡ ವಿವರಣೆಗಳನ್ನು ನ್ಯೂಸ್​ ಚಾನೆಲ್​ಗಳು ಜನರೆದುರು ತೆರೆದಿಡುತ್ತಿವೆ. ವಾಟ್ಸ್​ಆ್ಯಪ್​​ ನಂತಹ ಸಾಮಾಜಿಕ ಜಾಲತಾಣಗಳಲ್ಲೂ ಸುಳ್ಳು ಸುಳ್ಳು ಸುದ್ದಿಗಳು ಹರಿದಾಡುತ್ತಿವೆ. ಇದನ್ನೂ ಓದಿ: ಅಫಜಲಪುರ ತಾಪಂ ಅಧ್ಯಕ್ಷೆಯನ್ನೇ ವರಿಸಿದ ​ಉಪಾಧ್ಯಕ್ಷ, ಇನ್ಮುಂದೆ ಪತಿ-ಪತ್ನಿ ದರ್ಬಾರ್​!

ಹಾಗಾಗಿ ನಾನು ಸ್ವತಃ ವಿಡಿಯೋದ ಮೂಲಕ ಸತ್ಯಗಳನ್ನು ನಾಳೆಯಿಂದ ತಿಳಿಸಲಿದ್ದೇನೆ. ಈಗ ಏನು ನಡೆಯುತ್ತಿದೆ? ಹಿಂದೇನಾಗಿತ್ತು ಎಂಬುದರ ಬಗ್ಗೆ ನನ್ನ ವಿಚಾರಧಾರೆಗಳನ್ನು ನಾಳೆಯಿಂದ ಸ್ಪಷ್ಟವಾಗಿ ವಿಡಿಯೋದ ಮೂಲಕ ಹೇಳುತ್ತೇನೆ ಎಂದಿದ್ದಾರೆ.

ತಿಂಗಳ ಹಿಂದಷ್ಟೇ ರಾಹುಲ್​ ಗಾಂಧಿಯವರು ವಿಡಿಯೋ ಕಾನ್ಫರೆನ್ಸ್​ ಮೂಲಕ ನಾಲ್ವರು ನರ್ಸ್​​ಗಳ ಬಳಿ ಸಂವಾದ ನಡೆಸಿದ್ದರು. ಕರೊನಾ ಸಮಯದಲ್ಲಿ ಆರೋಗ್ಯ ಸಿಬ್ಬಂದಿಯ ಸುರಕ್ಷತೆಯ ಬಗ್ಗೆ ಚರ್ಚೆ ನಡೆಸಿದ್ದರು.(ಏಜೆನ್ಸೀಸ್​)