ನ್ಯೂಸ್

ರಾಮ ರಾಜ್ಯ ಸ್ಥಾಪನೆಯ ಭರವಸೆ ನೀಡಿ ಗೂಂಡಾ ರಾಜ್ಯ ನಿರ್ಮಾಣ ಮಾಡಿದ್ದಾರೆ...: ರಾಹುಲ್ ಗಾಂಧಿ

ಘಾಜಿಯಾಬಾದ್​ನಲ್ಲಿ ನಡೆದ ಪತ್ರಕರ್ತನ ಕೊಲೆ ಪ್ರಕರಣವನ್ನು ಖಂಡಿಸಿ ಕಾಂಗ್ರೆಸ್​ ಸಂಸದ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಉತ್ತರ ಪ್ರದೇಶದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ಅಧಿಕಾರಕ್ಕೆ ಬರುವಾಗ ಜನರಿಗೆ ರಾಮರಾಜ್ಯ ಸ್ಥಾಪನೆಯ ಭರವಸೆ ನೀಡಿತ್ತು. ಆದರೆ ಈಗ ಗೂಂಡಾ ರಾಜ್ಯ ನಿರ್ಮಾಣ ಮಾಡಿದೆ ಎಂದು ಕಟುವಾಗಿ ಆರೋಪಿಸಿದ್ದಾರೆ.

ಪತ್ರಕರ್ತ ವಿಕ್ರಂ ಜೋಶಿ ಅವರು ತಮ್ಮ ಸಹೋದರಿಗೆ ದುಷ್ಕರ್ಮಿಗಳು ಕಿರುಕುಳ ನೀಡಿದ್ದನ್ನು ವಿರೋಧಿಸಿ ಜೀವ ಕಳೆದುಕೊಂಡರು. ಅವರ ಕುಟುಂಬಕ್ಕೆ ನನ್ನ ಸಂತಾಪಗಳು ಎಂದು ರಾಹುಲ್​ ಗಾಂಧಿ ಹೇಳಿದ್ದಾರೆ. ಇದನ್ನೂ ಓದಿ: ಕೊವಿಡ್​-19 ಸೋಂಕಿನಿಂದ ಗುಣಮುಖರಾದ ಸಂಸದೆ ಸುಮಲತಾ ಅಂಬರೀಷ್​; ವರದಿ ನೆಗೆಟಿವ್​

ತನ್ನ ಸೋದರ ಸಂಬಂಧಿ ಯುವತಿಗೆ ದುಷ್ಕರ್ಮಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಜೋಶಿ ಜು.16ರಂದು ಪೊಲೀಸರಿಗೆ ದೂರು ನೀಡಿದ್ದರು. ಆದರೆ ಪೊಲೀಸರು ಸರಿಯಾಗಿ ಸ್ಪಂದಿಸಿರಲಿಲ್ಲ. ಮಂಗಳವಾರ ರಾತ್ರಿ ಅದೇ ದುಷ್ಕರ್ಮಿಗಳು ವಿಕ್ರಂ ಜೋಶಿ ಅವರನ್ನು ಮಕ್ಕಳೆದುರೇ ಹತ್ಯೆ ಮಾಡಿದ್ದಾರೆ. (ಏಜೆನ್ಸೀಸ್​)