More

    ಕೊವಿಡ್​-19 ಸೋಂಕಿನಿಂದ ಗುಣಮುಖರಾದ ಸಂಸದೆ ಸುಮಲತಾ ಅಂಬರೀಷ್​; ವರದಿ ನೆಗೆಟಿವ್​

    ಬೆಂಗಳೂರು: ಮಂಡ್ಯ ಸಂಸದೆ, ಹಿರಿಯ ನಟಿ ಸುಮಲತಾ ಅಂಬರೀಷ್​ ಅವರು ಕೊವಿಡ್-19 ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ.

    ಇಂದು ಫೇಸ್​ಬುಕ್​ನಲ್ಲಿ ಪೋಸ್ಟ್ ಹಾಕಿರುವ ಅವರು, ಮೂರು ವಾರಗಳ ಕಡ್ಡಾಯ ಕ್ವಾರಂಟೈನ್​ ಮುಗಿಸಿದ್ದೇನೆ. ಇದೀಗ ನನ್ನ ಕೊವಿಡ್​-19 ಟೆಸ್ಟ್​ ವರದಿ ನೆಗೆಟಿವ್​ ಬಂದಿದ್ದು, ಸೋಂಕಿನಿಂದ ಸಂಪೂರ್ಣ ಮುಕ್ತಳಾಗಿದ್ದೇನೆ. ವೈದ್ಯರ ಸಲಹೆಯಂತೆ ಇನ್ನೂ ನಾಲ್ಕು ವಾರಗಳ ವಿಶ್ರಾಂತಿ ಪಡೆದು, ಮತ್ತೆ ಕಾರ್ಯದಲ್ಲಿ ತೊಡಿಸಿಕೊಳ್ಳುತ್ತೇನೆ. ಜನರ ಸೇವೆ ಮಾಡಲು ಕಾತರಳಾಗಿದ್ದೇನೆ ಎಂದು ಬರೆದಿದ್ದಾರೆ. ಇದನ್ನೂ ಓದಿ: ‘ಮಮ್ಮಿ ಡಿಸ್ಟನ್ಸಿಂಗ್​​….’ : ಕ್ವಾರಂಟೈನ್​ನಲ್ಲಿ ಇರುವ ಅಮ್ಮನ ಫೋಟೋ ಶೇರ್​ ಮಾಡಿದ ಅಭಿಷೇಕ್​ ಅಂಬರೀಷ್​

    ದೇಹಕ್ಕೆ ಚೈತನ್ಯ ತುಂಬಲು ವಿಶ್ರಾಂತಿ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದಾರೆ. ನನ್ನ ಆರೋಗ್ಯಕ್ಕಾಗಿ ನೀವೆಲ್ಲ ಪ್ರಾರ್ಥಿಸಿದ್ದೀರಿ. ಶೀಘ್ರವೇ ಗುಣಮುಖರಾಗಿ ಎಂದು ಶುಭ ಹಾರೈಸಿದ್ದೀರಿ. ದೇವರ ಅನುಗ್ರಹದ ಜತೆಗೆ ವೈದ್ಯರಾದ ಡಾ. ಸತೀಶ್​ ಅವರು ನೀಡಿದ ಚಿಕಿತ್ಸೆ ಮತ್ತು ಸಲಹೆ ನನ್ನಲ್ಲಿ ಸಾಕಷ್ಟು ಧೈರ್ಯ ತುಂಬಿದೆ. ಕರೊನಾ ಗೆದ್ದು ಬರಲು ಸಹಾರಿಯಾದವು ಎಂದು ಸುಮಲತಾ ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದಾರೆ.

    ಸುಮಲತಾ ಅವರಿಗೆ ಜು.6ರಂದು ಕರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಅದಾದ ಬಳಿಕ ಮನೆಯಲ್ಲೇ ಕ್ವಾರಂಟೈನ್​ ಆಗಿ, ಚಿಕಿತ್ಸೆ ಪಡೆದಿದ್ದರು. 

    ಕೊವಿಡ್​-19 ಸೋಂಕಿನಿಂದ ಗುಣಮುಖರಾದ ಸಂಸದೆ ಸುಮಲತಾ ಅಂಬರೀಷ್​; ವರದಿ ನೆಗೆಟಿವ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts